'ಕುಮಾರಸ್ವಾಮಿಯದ್ದು ಪುಟಗೋಸಿ ರಾಜಕಾರಣ'

ಕುಮಾರಸ್ವಾಮಿ ಏನಿದ್ದರೂ ಪುಟಗೋಸಿ ರಾಜಕಾರಣ ಎಂಬುದಾಗಿ ವಾಗ್ದಾಳಿ ನಡೆಸಿದ- ಕೋಡಿಹಳ್ಳಿ ಚಂದ್ರಶೇಖರ್

Last Updated : Dec 9, 2020, 03:03 PM IST
  • ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ ಎಂಬುದಾಗಿ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ
  • ಕುಮಾರಸ್ವಾಮಿಯವರನ್ನು ರೈತರು ಮಣ್ಣಿನ ಮಗ ಅಂತಾರೆ. ಆದ್ರೇ ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು
  • ಕುಮಾರಸ್ವಾಮಿ ಏನಿದ್ದರೂ ಪುಟಗೋಸಿ ರಾಜಕಾರಣ ಎಂಬುದಾಗಿ ವಾಗ್ದಾಳಿ ನಡೆಸಿದ- ಕೋಡಿಹಳ್ಳಿ ಚಂದ್ರಶೇಖರ್
'ಕುಮಾರಸ್ವಾಮಿಯದ್ದು ಪುಟಗೋಸಿ ರಾಜಕಾರಣ' title=

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರನ್ನು ರೈತರು ಮಣ್ಣಿನ ಮಗ ಅಂತಾರೆ. ಆದ್ರೇ ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು. ಅವರಿಗೆ ರೈತರ ಪರ ಕಾಳಜಿಯೇ ಇಲ್ಲ. ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ ಎಂಬುದಾಗಿ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ನಗರದಲ್ಲಿ ವಿಧಾನಸೌಧ(Vidhana Soudha) ಮುತ್ತಿಗೆ ಪ್ರತಿಭಟನೆ ಚಳುವಳಿ ನಡೆಸುತ್ತಾ ಮಾಜಿ ಸಿಎಂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಶಾಸಕರನ್ನೇ ಮಾರಾಟ ಮಾಡಿದ್ದಾರೆ. ಡೀಲ್ ಮಾಡೋದ್ರಲ್ಲಿ ನಿಸ್ಸೀಮರು. ಸರ್ಕಾರದ ಜೊತೆಗೆ ಹೆಚ್ ಡಿ ಕುಮಾರಸ್ವಾಮಿ ಡೀಲ್ ಮಾಡ್ಕೊಂಡಿದ್ದಾರೆ. ದೇವೇಗೌಡರ ರೈತರ ಕಾಳಜಿ ಬಗ್ಗೆ ಗೌರವ ಇದೆ ಎಂದರು.

ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆ 'ಸಿಹಿ ಸುದ್ದಿ'..!

ಇನ್ನೂ ಮುಂದುವರೆದು ಮಾತನಾಡಿದ ಅವರು, ಕುಮಾರಸ್ವಾಮಿಯವರನ್ನು ಮಣ್ಣಿನ ಮಕ್ಕಳು ಅಂತಾರೆ. ಆದ್ರೇ ಅಂತವರೇ ರೈತರ ಬಾಯಿಗೆ ಮಣ್ಣು ಹಾಕೋ ಕೆಲಸ ಮಾಡಿದ್ರು. ರೈತರ ಪರ ಕಾಳಜಿಯೇ ಇಲ್ಲ. ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ. ಅವರದ್ದು ಏನಿದ್ದರೂ ಪುಟಗೋಸಿ ರಾಜಕಾರಣ ಎಂಬುದಾಗಿ ವಾಗ್ದಾಳಿ ನಡೆಸಿದರು.

'KSRTC ಮತ್ತು BMTC ನೌಕರರಿಗೆ 'ಭರ್ಜರಿ ಗುಡ್ ನ್ಯೂಸ್' ನೀಡಿದ ರಾಜ್ಯ ಸರ್ಕಾರ!

 

Trending News