ಮದ್ಯದ ನಶೆಯಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಥಳಿಸಿದ ಭೂಪ

ಆ ವಸತಿ ಶಾಲೆಯ ನಿರ್ದೇಶಕ ನಿಜಕ್ಕೂ ರಾಕ್ಷಸ. ಎಣ್ಣೇ ನಶೆಯಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಈತನ ರಾಕ್ಷಸಿ ಕೃತ್ಯಕ್ಕೆ ವಿದ್ಯಾರ್ಥಿಗಳ ರಕ್ತ ಹೆಪ್ಪುಗಟ್ಟಿದೆ. ಮೈ ತುಂಬಾ ಬಾಸುಂಡೆ ನೋವಿಗೆ ಪತರುಗಟ್ಟಿ ಹೋಗಿದ್ದಾರೆ. ರಾಕ್ಷಸಿ ಕೃತ್ಯಕ್ಕೆ ನಲುಗಿದ ವಿದ್ಯಾರ್ಥೀಗಳ ನೋವಿನ ಕಥೆಯ ವರದಿ ಇಲ್ಲಿದೆ..!

Written by - Zee Kannada News Desk | Last Updated : Nov 25, 2022, 06:01 PM IST
  • ತುಮಕೂರಿನ ಮಲ್ಲಸಂದ್ರದ ವಿಶ್ವಭಾರತಿ ವಸತಿ ಶಾಲೆ ನಿರ್ದೇಶಕನ ಆಟಾಟೋಪ
  • ಮೀತಿ ಮೀರಿದೆ ಶಾಲೆಯ ನಿರ್ದೇಶಕ ಭರತ್‌ನ ರಂಪರಾಮಾಯಣ
  • ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಭರತ್ ಎಸ್ಕೇಪ್
ಮದ್ಯದ ನಶೆಯಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಥಳಿಸಿದ ಭೂಪ title=

ತುಮಕೂರು: ಆ ವಸತಿ ಶಾಲೆಯ ನಿರ್ದೇಶಕ ನಿಜಕ್ಕೂ ರಾಕ್ಷಸ. ಎಣ್ಣೇ ನಶೆಯಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಈತನ ರಾಕ್ಷಸಿ ಕೃತ್ಯಕ್ಕೆ ವಿದ್ಯಾರ್ಥಿಗಳ ರಕ್ತ ಹೆಪ್ಪುಗಟ್ಟಿದೆ. ಮೈ ತುಂಬಾ ಬಾಸುಂಡೆ ನೋವಿಗೆ ಪತರುಗಟ್ಟಿ ಹೋಗಿದ್ದಾರೆ. ರಾಕ್ಷಸಿ ಕೃತ್ಯಕ್ಕೆ ನಲುಗಿದ ವಿದ್ಯಾರ್ಥೀಗಳ ನೋವಿನ ಕಥೆಯ ವರದಿ ಇಲ್ಲಿದೆ..!

ಯಸ್... ಇದು ವಿಶ್ವಭಾರತಿ ವಸತಿ ಶಾಲೆ. ಸಮಾಜ ಕಲ್ಯಾಣ ಇಲಾಖೆಯಿಂದ ಭರಪೂರ ಅನುದಾನ ಪಡೆಯುವ ಅನುದಾನಿತ ಶಾಲೆ ಇದು. ಎಸ್ಸಿ ಎಸ್ಟಿ ಮಕ್ಕಳಿಗೆ ಸಂಪೂರ್ಣ ಉಚಿತ ವಸತಿ ಶಿಕ್ಷಣ ನೀಡಲಾಗುತ್ತದೆ ಇಲ್ಲಿ. ಅಂದಹಾಗೆ ಇದು ಇರೋದು ತುಮಕೂರಿನ ಮಲ್ಲಸಂದ್ರದಲ್ಲಿ. ಉಚಿತ ಶಿಕ್ಷಣ, ವಸತಿ ಇದ್ದರೂ ಜಿಲ್ಲೆಯ ಯಾವ ವಿದ್ಯಾರ್ಥಿಗಳು ಇಲ್ಲಿ ಓದಲು ಇಷ್ಟ ಪಡಲ್ಲ. ಬಲವಂತವಾಗಿ ಚಿತ್ರದುರ್ಗ, ದಾವಣಗೆರೆ, ಹಾವೇರಿ ಭಾಗದ ವಿದ್ಯಾರ್ಥಿಗಳು ಬರುತ್ತಾರೆ. ಯಾಕೆಂದರೆ ಈ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕನ ಆಟಾಟೋಪಕ್ಕೆ ಇಲ್ಲಿಯ ವಿದ್ಯಾರ್ಥಿಗಳು ತತ್ತರಿ ಹೋಗುತ್ತಾರೆ.

ಇದನ್ನೂ ಓದಿ: IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ

ಈ ವಸತಿ ಶಾಲೆಯ ಬಂಡವಾಳ ಗೊತ್ತಿರೋದ್ರಿಂದ ಜಿಲ್ಲೆಯ ಯಾವ ವಿದ್ಯಾರ್ಥಿಗಳು ಇಲ್ಲಿ ಓದಲ್ಲ. ಹೌದು, ವಸತಿ ಶಾಲೆಯ ಕಾರ್ಯದರ್ಶಿ ಮೂರ್ತಿ ಅವರ ಪುತ್ರ ಹಾಗೂ ಶಾಲೆಯ ನಿರ್ದೇಶಕನೂ ಆದ ಭರತ್‌ನ ರಂಪರಾಮಾಯಣ ಮೀತಿ ಮೀರಿದೆ. ಕುಡಿದು ಬಂದು ಮಧ್ಯರಾತ್ರಿಯಲ್ಲಿ ವಿದ್ಯಾರ್ಥಿಗಳನ್ನು ಎಬ್ಬಿಸಿ ಮನಸೋ ಇಚ್ಛೆ ಥಳಿಸಿದ್ದಾನೆ. ಕಾರಣ ಇಲ್ಲದೇನೆ ಬೆಲ್ಟ್ ಮತ್ತು ದೊಣ್ಣೆಯಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತೊಡೆ, ಮೈ ಕೈ ಗಳಲ್ಲಿ ರಕ್ತ ಹೆಪ್ಪುಗಟ್ಟಿವೆ. ಬಾಸುಂಡೆ ಎದ್ದಿವೆ. ಒಬ್ಬ ವಿದ್ಯಾರ್ಥಿಯ ಕೈ ಕೂಡ ಮುರಿದು ಹೋಗಿದೆ. ಆದರೂ ಕರುಣೆ ಇಲ್ಲದ ಭರತ್ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.

ಸೋಮವಾರ ದಿನ ರಾತ್ರಿ 10 ಗಂಟೆಗೆ ಮಕ್ಕಳು ಊಟ ಮಾಡಿ ಮಲಗಿದ್ರು. ಆಗ ಮದ್ಯದ ನಶೆಯಲ್ಲಿ ಕೋಣೆ ಹೊಕ್ಕಿದ ಭರತ್ ಯಾಕೆ ನಾನು ಬಂದ್ರು ನೀವು ಎದ್ದೇಳಲ್ಲ...ನಾನಂದ್ರೆ ಗೌರವ ಇಲ್ವಾ ಎಂದು ಹೇಳಿ ಏನೂ ಅರಿಯದ ಪುಟ್ಟ ಬಾಲಕರ ಮೇಲೆ ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಾನೆ. ಕೂಗಿಕೊಂಡರೂ ಬಾಯಿ ಮುಚ್ಚಿ ಹೊಡೆದಿದ್ದಾನೆ. ಘಟನೆ ನಡೆದು ಮೂರು ದಿನ ಕಳೆದರೂ ಪೋಷಕರಿಗೆ ಮಾಹಿತಿ ನೀಡಿಲ್ಲ. ನಿನ್ನೆ ಸಂಜೆ ಮಕ್ಕಳೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ದಾವಣಗೆರೆ, ಚಿತ್ರದುರ್ಗದಿಂದ ಪೋಷಕರು ಬಂದಿದ್ದಾರೆ. ಇಷ್ಟಾದರೂ ಶಾಲೆಯ ಕಾರ್ಯದರ್ಶಿ ಮೂರ್ತಿ ಅಸಾಹಯಕರಾಗಿದ್ದಾರೆ. ಮಗ ನನ್ನ ಕಂಟ್ರೋಲ್ ತಪ್ಪಿದ್ದು ನನ್ನ ಮೇಲೂ ಹಲ್ಲೆ ನಡೆಸುತ್ತಾನೆ. ಪೊಲೀಸರು ಅವನನ್ನು ಅರೆಸ್ಟ್ ಮಾಡಲಿ ಎಂದು ಅಸಾಹಯಕತೆ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!

ಘಟನೆ ಅರಿತ ಬಿಇಒ ಹನುಮಾ ನಾಯಕ್, ಮಹಿಳಾ ಮಕ್ಕಳ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಲ್ಲೆ ನಡೆಸಿದ್ದವನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಭರತ್ ತಲೆಮರೆಸಿಕೊಂಡಿದ್ದಾನೆ. ತಲೆ ಮರೆಸಿಕೊಂಡಿರುವ ಭರತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News