DL-RC Book : ವಾಹನ ಸವಾರರಿಗೆ ಸಿಹಿ ಸುದ್ದಿ : ಸವಾರರು ಇನ್ಮುಂದೆ DL, RC ಕೊಂಡೊಯ್ಯಬೇಕಿಲ್ಲ

ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆಗಳನ್ನ ತೋರಿಸಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Last Updated : Jul 9, 2021, 02:11 PM IST
  • ದೇಶದಲ್ಲಿ ಡಿಜಿಟಲ್ ಬಳಕೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ
  • ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆ
  • ಡಿಜಿ ಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‍ಗಳಲ್ಲಿ ದಾಖಲೆ
DL-RC Book : ವಾಹನ ಸವಾರರಿಗೆ ಸಿಹಿ ಸುದ್ದಿ : ಸವಾರರು ಇನ್ಮುಂದೆ DL, RC ಕೊಂಡೊಯ್ಯಬೇಕಿಲ್ಲ title=

ಬೆಂಗಳೂರು : ದೇಶದಲ್ಲಿ ಡಿಜಿಟಲ್ ಬಳಕೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಬೆಂಗಳೂರು ನಗರ ಪೊಲೀಸ್ ವಿಭಾಗವು ಡಿಜಿಟಿಲೀಕರಣಕ್ಕೆ ಮುಂದಾಗಿದೆ. ವಾಹನ ಸವಾರರು ಎಲ್ಲಾ ಸಮಯದಲ್ಲು  ತಮ್ಮ ದಾಖಲೆಗಳನ್ನುಜೊತೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ ಈ ಕಾರಣದಿಂದ ಡಿಜಿಟಲ್ ರೂಪದ ದಾಖಲೆಗಳನ್ನು ಪರಿಗಣಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆ(Digital Documents)ಗಳನ್ನ ತೋರಿಸಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ : New Rules for House Rent : ರಾಜ್ಯ ಸರ್ಕಾರದಿಂದ ಬಾಡಿಗೆ ಮನೆದಾರರಿಗೆ ಹೊಸ ನಿಯಮ!

ಡಿಜಿ ಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‍ಗಳಲ್ಲಿ(DigiLocker-Mparivahan App) ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ನಿಯಮ ಜಾರಿ ಮಾಡುವ ಅಧಿಕಾರಿಗಳು ಮೊಬೈಲ್‍ನಲ್ಲಿ ಡಿಜಿಟಲ್ ರೂಪದಲ್ಲಿರುವ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕು ಸರಕಾರ ತಿಳಿಸಿದೆ.

ಇದನ್ನೂ ಓದಿ : 2nd PUC Result 2021 : ದ್ವಿತೀಯ PU ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಜು. 20ರೊಳಗೆ PU ಫಲಿತಾಂಶ ಪ್ರಕಟ

ಈ ಎರಡು ಅಪ್ಲಿಕೇಷನ್‍ನಲ್ಲಿ ಡಿಜಿಟಲ್(Digital) ರೂಪದಲ್ಲಿರುವ ದಾಖಲೆಗಳು ಸ್ವೀಕಾರಾರ್ಹ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ : Heavy Rainfall in Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ 

ಅಧಿಕಾರಿಗಳು ಇ ಚಲನ್ ಆಯಪ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್(QR Code Scanning) ತಂತ್ರಜ್ಞಾನ ಬಳಸಿ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಬಹುದು. ಇದರಿಂದಾಗಿ ನಕಲಿ ದಾಖಲೆ ಹಾವಳಿಯನ್ನು ತಡೆಗಟ್ಟಲು ಸಾಧ್ಯ ಇದೆ. ವಾಹನ ಸವಾರರು ಪ್ಲೇ ಸ್ಟೋರ್‍ನಲ್ಲಿ ಡಿಜಿ ಲಾಕರ್ ಮತ್ತು ಎಂಪರಿವಾಹನ್ ಡೌನ್‍ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ದಾಖಲಿಸಿ ಕೆವೈಸಿ ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ : Bengaluru Gang Rape Case: 12 ಮಂದಿಯ ಬಂಧನ, ಶಂಕಿತರಿಂದ ವಿಡಿಯೋ ಹಂಚಿಕೆ

ತದನಂತರ ಕರ್ನಾಟಕ ಸರ್ಕಾರ(Govt of Karnataka)ವನ್ನು ಆಯ್ಕೆ ಮಾಡಿಕೊಂಡು ನಿರ್ದಿಷ್ಟ ದಾಖಲೆಗಳನ್ನು ಡೌನ್‍ಲೋಡ್ ಹಾಗೂ ಸೇವ್ ಮಾಡಿಕೊಳ್ಳಬಹುದು. ವಾಹನ ಮಾಲೀಕರಲ್ಲದವರು ಚಾಲನೆ ಮಾಡುತ್ತಿದ್ದರೆ ವಾಹನದ ಮಾಲೀಕನ ಆಯಪ್‍ನಿಂದ ದಾಖಲಾತಿಗಳನ್ನು ವರ್ಗಾವಣೆ ಮಾಡಿಕೊಂಡು ತಪಾಸಣೆ ವೇಳೆ ಹಾಜರುಪಡಿಸಬಹುದು. ಇದರಿಂದಾಗಿ ಡಿಜಿಟಲ್ ದಾಖಲೆಗಳಿಂದ ಅಸಲಿ ದಾಖಲೆಗಳು ಕಳೆದುಹೋಗುವ ಭಯ ಇಲ್ಲವಾಗುತ್ತದೆ. ಪೊಲೀಸರಿಗೂ ಕೂಡ ಈ ವ್ಯವಸ್ಥೆ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News