ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದಲಿಂಗ ಶ್ರೀಗಳು!

ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವಾಗಿ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಮೈಸೂರಿನಲ್ಲಿ ದಿ.21 ಜನವರಿ 2022ರಂದು ಕಾರ್ಯಕ್ರಮ ಏರ್ಪಡಿಸಲಾಗಿದೆ.

Written by - Channabasava A Kashinakunti | Last Updated : Jan 2, 2022, 01:58 PM IST
  • ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಪುಣ್ಯಸ್ಮರಣೆಯ ದಿನ
  • ದಾಸೋಹ ದಿನವಾಗಿ ಆಚರಿಸಲಾಗುತ್ತದೆ
  • ಮೈಸೂರಿನಲ್ಲಿ ದಿ.21 ಜನವರಿ 2022ರಂದು ಕಾರ್ಯಕ್ರಮ ಏರ್ಪಡ
ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದಲಿಂಗ ಶ್ರೀಗಳು! title=

ತುಮಕೂರು : ಸಿದ್ಧಗಂಗೆಯ ನಡೆದಾಡುವ ದೇವರು, ಕಾಯಕತಪಸ್ವಿ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವಾಗಿ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಮೈಸೂರಿನಲ್ಲಿ ದಿ.21 ಜನವರಿ 2022ರಂದು ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಸಿದ್ಧಗಂಗಾ ಮಠಾಧ್ಯಕ್ಷರಾದ  ಶ್ರೀ ಸಿದ್ಧಲಿಂಗಮಹಾಸ್ವಾಮಿಜೀಗಳು(siddaganga swamiji) ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಗದ್ದುಗೆಯಲ್ಲಿ ಪೂಜೆ ಸಲ್ಲಿಸಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಠದ ಭಕ್ತವೃಂದ ಹಾಗೂ ಮಠಾಧಿಪತಿಗಳು ಮೈಸೂರಿನ ದಾಸೋಹ ಭಕ್ತವೃಂದದ ಗೆಳೆಯರ ಬಳಗದ ಸದಸ್ಯರು ಹಾಜರಿದ್ದರು.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆಗೆ ಡಿಕೆಶಿ ನಡಿಗೆ ತಾಲೀಮು!: ಸುಳ್ಳಿನಜಾತ್ರೆ ಎಂದು ಬಿಜೆಪಿ ವ್ಯಂಗ್ಯ

ನಂತರ ಓಮಿಕ್ರಾನ್ ಹೆಚ್ಚಳ ಕುರಿತು ಮಾತನಾಡಿದ ಸಿದ್ದಲಿಂಗ ಶ್ರೀಗಳು, ಕೋವಿಡ್(Covid-19) ಇನ್ನೂ ಹೆಚ್ಚಾಗುತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜನರು ಕಾಯಿಲೆ ಬರದಹಾಗೆ ಎಚ್ಚರಿಕೆಯಿಂದ ಇರಬೇಕು. ಕೋವಿಡ್ ರೂಪಾಂತರಿ ಓಮಿಕ್ರಾನ್ ಹೆಚ್ಚಳವಾಗುತಿದೆ. ಜನರು ತಮಗೆ ತಾವೇ ನಿರ್ಬಂಧ ಹಾಕಿಕೊಳ್ಳಬೇಕು. ಕೋವಿಡ್ ರೂಲ್ ಪಾಲನೆ ಮಾಡಬೇಕು ಎಂದರು.

ಎಲ್ಲರೂ ಎರಡನೇ‌ ಡೋಸ್ ವ್ಯಾಕ್ಸಿನ್(Corona Vaccine) ಹಾಕಿಸಿಕೊಳ್ಳಬೇಕು. ಕೇವಲ ಒಂದು ಡೋಸ್ ಮಾತ್ರ ಪಡೆದು ಸುಮ್ಮನಾಗಬಾರದು. ಎರಡನೇ ಅಲೆಗಿಂತ ಮೂರನೇ ಅಲೆ ವೇಗವಾಗಿ ಹರಡುತಿದೆ. ಅಪಾಯಕಾರಿ ಅಲ್ಲದಿದ್ದರೂ ವೇಗವಾಗಿ ಹರಡಿ ಜನರ ಆರೋಗ್ಯ ಹದಗೆಡಿಸುತಿದೆ. ಹಾಗಾಗಿ ಜನರು ಅತ್ಯಂತ ಜಾಗೃತೆಯಿಂದ ಇರಬೇಕು ಎಂದು ರಾಜ್ಯದ ಜನರಿಗೆ ಸಂದೇಶ ರವಾನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News