ಮೈಗೂರು, ಸಾವಳಗಿ ಪಂ.ವ್ಯಾಪ್ತಿಯ ಎಲ್ಲಾ ರಸ್ತೆಗಳಿಗೂ ಇನ್ನು‌ 3 ತಿಂಗಳಲ್ಲಿ ಡಾಂಬರೀಕರಣ

ಜಮಖಂಡಿ ಕ್ಷೇತ್ರದಲ್ಲಿ ಸಿದ್ದು ನ್ಯಾಮಗೌಡರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಇಡೀ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಇದೆ. 

Last Updated : Oct 24, 2018, 09:44 AM IST
ಮೈಗೂರು, ಸಾವಳಗಿ ಪಂ.ವ್ಯಾಪ್ತಿಯ ಎಲ್ಲಾ ರಸ್ತೆಗಳಿಗೂ ಇನ್ನು‌ 3 ತಿಂಗಳಲ್ಲಿ ಡಾಂಬರೀಕರಣ  title=

ಜಮಖಂಡಿ: ಮೈಗೂರು ಹಾಗೂ ಸಾವಳಗಿ ಪಂಚಾಯತಿ ವ್ಯಾಪ್ತಿಯಲ್ಲಿ ಇನ್ನು‌ ಮೂರು ತಿಂಗಳ ಒಳಗಾಗಿ ಎಲ್ಲ ರಸ್ತೆಗಳಿಗೂ ಡಾಂಬರೀಕರಣ ಮಾಡಿಕೊಡುವ ಜವಾಬ್ಧಾರಿ  ನನ್ನದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆ ಭಾಗದ ಜನರಿಗೆ ಭರವಸೆ ನೀಡಿದರು.‌

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಕೂಡ ವಿವಿಧ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.‌

ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸಿದ್ದು ನ್ಯಾಮಗೌಡರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಇಡೀ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಇದೆ. ಅವರು ಈ ಕ್ಷೇತ್ರವನ್ನು ಇನ್ನಷ್ಟು ಎತ್ತರದ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಭಿವೃದ್ಧಿ ಕೆಲಸ ಕೈಗೊಳ್ಳುವ ಬಗ್ಗೆ ಉತ್ಸಕರಾಗಿದ್ದರು. ಆದರೆ ಅವರು ಇಂದು ನಮ್ಮೊಂದಿಗಿಲ್ಲ. ಈಗ ಅವರ ಮಗ  ಆನಂದ ಸಿದ್ದು ನ್ಯಾಮಗೌಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹೊಣೆಗಾರಿಕೆ ಹೊತ್ತಿದ್ದಾರೆ ಎಂದರು.

ಈ ಭಾಗದಲ್ಲಿ ಡಾಂಬರೀಕರಣದ ಸಮಸ್ಯೆ ಕೇಳಿ ಬಂದಿದೆ.‌ಇನ್ನು ಮೂರು ತಿಂಗಳೊಳಗಾಗಿ ಮಾಡಿಕೊಡಲಿದ್ದೇನೆ ಎಂದು ಪರಮೇಶ್ವರ್ ಭರವಸೆ ನೀಡಿದರು.‌

Trending News