ಶಿಕ್ಷಣ ಜ್ಞಾನಕ್ಕಾಗಿ ಹೊರತು ವ್ಯಕ್ತಿ ಆರಾಧನೆಗಾಗಿ ಅಲ್ಲ

ದೇಶದಲ್ಲಿ ನಡೆಯುವ ಎಲ್ಲಾ ಸಂಶೋಧನೆಗಳು ತಿಳಿವಳಿಕೆ ಹೆಚ್ಚಿಸುವ ನಿಟ್ಟಿನಲ್ಲಿರಬೇಕೇ ಹೊರತು ಮೆಚ್ಚುಗೆಯ ಸಂಶೋಧನೆ ಆಗಬಾರದು

Last Updated : Dec 28, 2019, 06:12 PM IST
ಶಿಕ್ಷಣ ಜ್ಞಾನಕ್ಕಾಗಿ ಹೊರತು ವ್ಯಕ್ತಿ ಆರಾಧನೆಗಾಗಿ ಅಲ್ಲ title=

ಬೆಂಗಳೂರು: "ಶಿಕ್ಷಣ ಜ್ಞಾನಕ್ಕಾಗಿ ಹೊರತು ವ್ಯಕ್ತಿ ಆರಾಧನೆಗಾಗಿ ಅಲ್ಲ.  ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ. ಸರಳ ಶಿಕ್ಷಣಕ್ಕೆ ನಾವೆಲ್ಲರೂ ಆದ್ಯತೆ ನೀಡಬೇಕು" ಎಂದು ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಕಮ್ಯುನಿಟಿ ಸೆಂಟರ್ ಆಫ್ ಎಜ್ಯುಕೇಷನ್ ಇನ್‌ಸ್ಟಿಟ್ಯೂಟ್ ನ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, "ಶಿಕ್ಷಣ ಜ್ಞಾನಕ್ಕಾಗಿ ಹೊರತು ವ್ಯಕ್ತಿ ಆರಾಧನೆಗಾಗಿ ಅಲ್ಲ.  ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ. ಸರಳ ಶಿಕ್ಷಣಕ್ಕೆ ನಾವೆಲ್ಲರೂ ಆದ್ಯತೆ ನೀಡಬೇಕು". ದೇಶದಲ್ಲಿ ನಡೆಯುವ ಎಲ್ಲಾ ಸಂಶೋಧನೆಗಳು ತಿಳಿವಳಿಕೆ ಹೆಚ್ಚಿಸುವ ನಿಟ್ಟಿನಲ್ಲಿರಬೇಕೇ ಹೊರತು ಮೆಚ್ಚುಗೆಯ ಸಂಶೋಧನೆ ಆಗಬಾರದು ಎಂದು ಹೇಳಿದರು. 

"ವಿಶ್ವಾದ್ಯಂತ ನಡೆಯುವ ಸಂಶೋಧನೆಗಳು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇರಬೇಕು. ಯಾರನ್ನೋ ಮೆಚ್ಚಿಸುವ ರೀತಿಯಲ್ಲಿ ಇರಬಾರದು. ತಿಳಿವಳಿಕೆ ಹೆಚ್ಚಿಸುವ ಸಂಶೋಧನೆಗಳಿಗೆ ಶಿಕ್ಷಣ ಸಂಸ್ಥೆಗಳು ಸಹಾಯ ಮಾಡಬೇಕು." 

"ಶಿಕ್ಷಣ ಕೇವಲ ಡಿಗ್ರಿಗೆ ಮಾತ್ರ ಸೀಮಿತವಾಗಬಾರದು. ಈ ದಾರಿಯಲ್ಲಿ ನಡೆಯೋ ಕೆಲಸವನ್ನು ಕಮ್ಯುನಿಟಿ ಸೆಂಟರ್ ಮಾಡುತ್ತಿದೆ. ಪ್ರತಿಯೊಬ್ಬರ ಬದುಕು ರೂಪಿಸಲು ಶಿಕ್ಷಣ ನೆರವಾಗಲಿ. ಪ್ರತಿಯೊಬ್ಬರ ಭಾವನೆಗಳಿಗೆ ಪೂರಕವಾದ ಶಿಕ್ಷಣ ಲಭ್ಯವಾಗುವಂತೆ ಮಾಡೋಣ. ಸರ್ಕಾರದ ವತಿಯಿಂದ ನಾವು ನಮ್ಮ ಪ್ರಯತ್ನ ನಾವು ಮಾಡ್ತೇವೆ. ಇದಕ್ಕೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಹಕಾರ ಬೇಕು. ಶಾಂತಿ, ನೆಮ್ಮದಿ, ಸಮಾಧಾನ ಕೊಡುವ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕಮ್ಯುನಿಟಿ ಸೆಂಟರ್ ಆಫ್ ಎಜುಕೇಷನ್ ಇನ್‌ಸ್ಟಿಟ್ಯೂಟ್ ಗೆ ಅಭಿನಂದನೆ ಸಲ್ಲಿಸುತ್ತೇನೆ," ಎಂದು ಡಾ ಅಶ್ವತ್ಥನಾರಾಯಣ ಹೇಳಿದರು.

ಸಮಾರಂಭದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಸಂಸ್ಥೆಯ ಅಧ್ಯಕ್ಷ ಕೆ.ಎಂ.ನಾಗರಾಜ್ ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Trending News