ಬೆಂಗಳೂರು : ಆತ್ಮೀಯ ನನ್ನ ಹಿತೈಷಿಗಳೇ, ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಇದು ಒಪ್ಪುವ ವಿಚಾರವಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಚಿವ ಶ್ರೀರಾಮುಲು, ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಹಾರ ತುರಾಯಿ ಹಾಕಿ, ಕೇಕ್ ಕತ್ತರಿಸಿ ವಿಜೃಂಭಣೆ ಮಾಡುವುದು ಬೇಡ.
ಇದನ್ನೂ ಓದಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಬೆಂಕಿ ಉಗುಳಿದ ಎಚ್‍ಡಿಕೆ!
ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿ...
ನನ್ನ ಮೇಲೆ ಅಭಿಮಾನ ಇರುವ ಹಾಗೂ ನನಗೆ ಪ್ರೀತಿ ತೋರುವ ಎಲ್ಲರೂ ನನ್ನ ಈ ಮನವಿಗೆ ಸ್ಪಂದಿಸುವಿರಿ ಎಂದು ನಂಬಿದ್ದೇನೆ, ನಿಮ್ಮಅಭಿಮಾನಕ್ಕೆ ಸದಾ ಚಿರ ಋಣಿ ಎಂದು ಬರೆದುಕೊಂಡಿದ್ದಾರೆ.
ಆತ್ಮೀಯ ನನ್ನ ಹಿತೈಷಿಗಳೇ, ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಡು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಇದು ಒಪ್ಪುವ ವಿಚಾರವಲ್ಲ. 1/3
— B Sriramulu (@sriramulubjp) August 7, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.