ತುಮಕೂರು : ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವೇಳೆ ಸಿಬ್ಬಂದಿ ಅದೇಷ್ಟರ ಮಟ್ಟಿಗೆ ಕರೆಕ್ಟ್ ಆಗಿ ಡ್ಯೂಟಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಶ್ವಾನಗಳು ಮಾತ್ರ ರಾತ್ರಿಯಾಗುತ್ತಿದ್ದಂತೆ ತಮ್ಮ ಡ್ಯೂಟಿ ಶುರು ಮಾಡಿಕೊಂಡುಬಿಡುತ್ತಿವೆಯಂತೆ. ಪ್ರತಿ ವಾರ್ಡ್ಗಳಲ್ಲಿಯೂ ರೌಂಡ್ಸ್ ಹಾಕುತ್ತಿವೆಯಂತೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
10 ತಾಲೂಕುಗಳನ್ನ ಹೊಂದಿರೋ ತುಮಕೂರು ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದು. ಅದರಲ್ಲಿಯೂ ಪಾವಗಡ, ಮಧುಗಿರಿಯಂತಹ ಬರಪೀಡಿತ ತಾಲೂಕುಗಳನ್ನ ಹೊಂದಿರೋ ಜಿಲ್ಲೆ ಇದು. ಹೀಗಾಗಿ ಜಿಲ್ಲೆಯಲ್ಲಿ ಬಡತನದ ಪ್ರಮಾಣ ತುಸು ಹೆಚ್ಚೇ ಇದೆ. ಆದ್ದರಿಂದ ಏನೇ ಆರೋಗ್ಯದ ಸಮಸ್ಯೆ ಎದುರಾದ್ರೂ ಜಿಲ್ಲೆಯ ಜನರು ಸರ್ಕಾರಿ ಜಿಲ್ಲಾಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಈ ಜಿಲ್ಲಾಸ್ಪತ್ರೆಯ ಸ್ಥಿತಿ ಮಾತ್ರ ಹೇಳತೀರದ್ದು.
ಇದನ್ನೂ ಓದಿ: ಅಧಿಕಾರವಿಲ್ಲದೆ ಹತಾಶರಾಗಿರುವ ಕುಮಾರಸ್ವಾಮಿ ಆರೋಪ ಹಿಟ್ ಅಂಡ್ ರನ್ ಇದ್ದಂತೆ: ಸಿದ್ದರಾಮಯ್ಯ
ಯೆಸ್.. ಜಿಲ್ಲೆಯ ಜನರಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ಜಿಲ್ಲಾಸ್ಪತ್ರೆ ಪದೇ ಪದೇ ಒಂದಿಲ್ಲೊಂದು ಎಡವಟ್ಟಿನ ಮೂಲಕವೇ ಸುದ್ದಿಯಾಗುತ್ತೆ. ಇಲ್ಲಿನ ಆಡಳಿತ ಮಂಡಳಿಯ ನಿರ್ಲಕ್ಷ್ಯ, ಸಿಬ್ಬಂದಿಯ ಬೇಜವಾಬ್ದಾರಿಯಿಂದ ಜೀವಗಳೇ ಹೋಗಿರೋ ಸಂದರ್ಭಗಳೂ ಇವೆ. ಇಂತಹ ವಿಚಾರಗಳಿಂದಲೇ ತುಮಕೂರು ಜಿಲ್ಲಾಸ್ಪತ್ರೆ ಸಾಕಷ್ಟು ಭಾರೀ ಸುದ್ದಿಯಾಗಿದೆ. ಇಷ್ಟೆಲ್ಲಾ ಆದರೂ ಇಲ್ಲಿನ ಆಡಳಿತ ಮಂಡಳಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಂತಿಲ್ಲ.
ನಾವು ಇಷ್ಟೆಲ್ಲಾ ಪೀಠಿಕೆ ಹಾಕ್ತಿರೋದಕ್ಕೆ ಕಾರಣ ರೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರೋ ಭಯಂಕರ ವಿಡಿಯೋ. ಹೌದು.. ರಾತ್ರಿಯಾಗುತ್ತಿದ್ದಂತೆ ಭಯಂಕರ ಶ್ವಾನಗಳು ಜಿಲ್ಲಾಸ್ಪತ್ರೆಯ ವಾರ್ಡ್ಗಳೊಳಗೆ ನುಗ್ಗಿ ರೌಂಡ್ಸ್ ಹಾಕುತ್ತಿರೋ ವಿಡಿಯೋಗಳನ್ನ ಅದೇ ಆಸ್ಪತ್ರೆಯ ವಾರ್ಡ್ನಲ್ಲೇ ಇದ್ದ ರೋಗಿಯೊಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಜಿಲ್ಲಾಸ್ಪತ್ರೆಯ ಸ್ಥಿತಿ ಯಾವ ಮಟ್ಟದಲ್ಲಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಗಣಿ ಜಿಲ್ಲೆಗೆ ದೊರೆಯುವುದೇ ವಿಶೇಷ ಉಡುಗೊರೆ..ರಾಜ್ಯ ಬಜೆಟ್ ಮೇಲೆ ಹೆಚ್ಚಿದ ಜಿಲ್ಲೆಯ ಜನರ ನಿರೀಕ್ಷೆ!
ಪ್ರತಿ ನಿತ್ಯ ಶ್ವಾನಗಳು ರೋಗಿಗಳ ವಾಡ್೯ನಲ್ಲಿ ಓಡಾಡಿದರೂ ಯಾರೂ ಕೇಳೋರಿಲ್ಲದಂತಾಗಿದೆ.. ಶ್ವಾನದ ನೈಟ್ ಎಂಟ್ರಿಯಿಂದ ಕಂಗಾಲಾದ ರೋಗಿಗಳು ಹಾಗೂ ಸಂಬಂಧಿಕರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋಗಳಲ್ಲಿ ವಾರ್ಡ್ನ ಬಾತ್ರೂಂ, ಡಸ್ಟ್ಬಿನ್ಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ತಿಂದು ಒಂದು ಶ್ವಾನ ಪರಾರಿಯಾಗಿದ್ರೆ, ಇನ್ನೊಂದು ಶ್ವಾನ ವಾರ್ಡ್ ತುಂಬಾ ಓಡಾಡಿದೆ.. ಒಂದು ವೇಳೆ ಈ ಶ್ವಾನಗಳು ಯಾವುದಾದ್ರೂ ರೋಗಿಗಳಿಗೆ ಕಚ್ಚಿದ್ರೆ ಯಾರು ಗತಿ ಅನ್ನೋದು ಸಾರ್ವಜನಿಕರ ಆಳಲು.
ಈ ಬಗ್ಗೆ ಸಂಬಂಧಪಟ್ಟವರನ್ನ ಕೇಳಿದ್ರೆ ಅವರು ಹೇಳೋದೇ ಬೇರೆ. ನಾವು ಹಲವು ಬಾರಿ ಈ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತಂದಿದ್ವಿ. ಶ್ವಾನಗಳನ್ನ ಹಿಡಿಯುವ ಕಾರ್ಯಾಚರಣೆ ಮಾಡಿ ಅಂತಲೂ ಮನವಿ ಮಾಡಿದ್ವಿ. ಆದ್ರೆ ಅವರು ಕ್ಯಾರೆ ಮಾಡಲಿಲ್ಲ ಎಂದು ಇನ್ನೊಂದು ಇಲಾಖೆಯ ಮೇಲೆ ಎತ್ತಿಹಾಕುತ್ತಿದ್ದಾರೆ.
ಇದನ್ನೂ ಓದಿ: "ಕುಮಾರಸ್ವಾಮಿ ಅವರು ಕೇವಲ ಆರೋಪ ಮಾಡುತ್ತಿದ್ದಾರೆ ಹೊರತು ಒಂದು ಆರೋಪವನ್ನು ಸಾಬೀತು ಮಾಡಿಲ್ಲ"
ಸದಾ ಒಂದಿಲ್ಲೊಂದು ಎಡವಟ್ಟಿನಿಂದಲೇ ಸದ್ದು ಮಾಡೋ ತುಮಕೂರು ಜಿಲ್ಲಾಸ್ಪತ್ರೆ ಇದೀಗ ಮತ್ತೊಂದು ಎಡವಟ್ಟಿನ ಮೂಲಕವೇ ಸುದ್ದಿಯಾಗಿದೆ. ಒಟ್ಟಿನಲ್ಲಿ ಶ್ವಾನಗಳ ಎಂಟ್ರಿಯಿಂದಾಗಿ ರೋಗಿಗಳು ಮಾತ್ರ ಕಂಗಾಲಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.