2 ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ 8 ವರ್ಷ ಸಿಎಂ ಆಗ್ತಾರೆ: ಹೀಗೆ ಹೇಳಿದ್ಯಾರು ಗೊತ್ತಾ?

DK Shivakumar Will CM For 8 Years: ಡಿಸಿಎಂ ಡಿಕೆಶಿಗೆ ವಿಧಾನಸೌಧದ 3ನೇ ಮಹಡಿಯಲ್ಲಿ 4 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಕೊಠಡಿ ಸಂಖ್ಯೆ 335, 336, 337 ಮತ್ತು 337Aಗಳನ್ನು ಡಿಕೆಶಿಗೆ ನೀಡಲಾಗಿದೆ.

Written by - Puttaraj K Alur | Last Updated : May 23, 2023, 08:55 PM IST
  • 2 ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ 8 ವರ್ಷ ಮುಖ್ಯಮಂತ್ರಿಯಾಗುತ್ತಾರೆ
  • ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಭವಷ್ಯ ನುಡಿದ ಜ್ಯೋತಿಷಿ ಬಿ.ಬಿ.ಆರಾಧ್ಯ
  • ಸಿದ್ದರಾಮಯ್ಯ ವಾಸವಿರುವ ನಿವಾಸ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇನೆಂದ ಜ್ಯೋತಿಷಿ
2 ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ 8 ವರ್ಷ ಸಿಎಂ ಆಗ್ತಾರೆ: ಹೀಗೆ ಹೇಳಿದ್ಯಾರು ಗೊತ್ತಾ? title=
ಡಿಕೆಶಿ ಬಗ್ಗೆ ಜ್ಯೋತಿಷಿಯ ಭವಿಷ್ಯ!

ಬೆಂಗಳೂರು: 2 ವರ್ಷಗಳ ಬಳಿಕ ಕೆಪಿಸಿಸಿ ಅಧ‍್ಯಕ್ಷ ಮತ್ತು ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ 8 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಜ್ಯೋತಿಷಿಯೊಬ್ಬರು ಭವಷ್ಯ ನುಡಿದಿದ್ದಾರೆ.

ಮಂಗಳವಾರ ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿರುವ ಜ್ಯೋತಿಷಿ ಬಿ.ಬಿ.ಆರಾಧ್ಯ, ‘ಡಿ.ಕೆ.ಶಿವಕುಮಾರ್ ಅವರಿಗೆ ಇದೇ ಸಂಖ್ಯೆಯ ಕೊಠಡಿ ತೆಗೆದುಕೊಳ್ಳುವಂತೆ ಹೇಳಿದ್ದೆ. ಸಿಎಂ ಸಿದ್ದರಾಮಯ್ಯ ವಾಸವಿರುವ ನಿವಾಸವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇನೆ ಅಂತಾ ಹೇಳಿದರು.

ಇದನ್ನೂ ಓದಿ: "ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ"

ಡಿಸಿಎಂ ಡಿಕೆಶಿಗೆ ವಿಧಾನಸೌಧದ 3ನೇ ಮಹಡಿಯಲ್ಲಿ 4 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಕೊಠಡಿ ಸಂಖ್ಯೆ 335, 336, 337 ಮತ್ತು 337Aಗಳನ್ನು ಡಿಕೆಶಿಗೆ ನೀಡಲಾಗಿದೆ.

ಬಿ.ಬಿ.ಆರಾಧ್ಯರ ಸಲಹೆ ಮೇರೆಗೆ ಡಿ.ಕೆ.ಶಿವಕುಮಾರ್ ಅವರು ಅದೃಷ್ಟದ ಸಂಖ್ಯೆಯ ಕೊಠಡಿಗಳನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ಸಿಎಂ ಸಿದ್ದರಾಮಯ್ಯ ಹಾಲಿ ವಾಸ್ತವ್ಯವಿರುವ ಶಿವಾನಂದ ವೃತ್ತದ ಬಳಿಯಿರುವ ಸರ್ಕಾರಿ ನಿವಾಸವನ್ನು ಆಯ್ಕೆ ಮಾಡಿಕೊಳ್ಳುವಂತೆ ಡಿಕೆಶಿಗೆ ಆರಾಧ್ಯ ತಿಳಿಸಿದ್ದಾರೆ.

ಇದನ್ನೂ ಓದಿ: Economy: ಯಾವ ದಿಕ್ಕಿನತ್ತ ಸಾಗುತ್ತಿದೆ ದೇಶದ ಆರ್ಥಿಕತೆ? ಅಪಾಯ ಎಲ್ಲಿದೆ? ವಿತ್ತ ಸಚಿವಾಲಯದ ವರದಿ ಹೇಳಿದ್ದೇನು?

ಜ್ಯೋತಿಷಿಯ ಸಲಹೆಯಂತೆ ಡಿಕೆಶಿಯವರು ಗುರುವಾರ (ಮೇ 25) ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿ 336ರಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆ ಕೊಠಡಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯ ನಡೆದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News