ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯರಿಂದ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್! ಬಿಜೆಪಿ

‘ರಾಜ್ಯವನ್ನು ಕಾಡುತ್ತಿರುವ ಬರ, ಕುಡಿಯುವ ನೀರಿನಂಥ ಜ್ವಲಂತ ಸಮಸ್ಯೆಗಳ ನಿರ್ವಹಣೆಗಿಂತಲೂ ಮುಂದಿನ ಎರಡು ವರ್ಷ ಕಾಲದವರೆಗಾದರೂ ಕುರ್ಚಿ ಉಳಿಸಿಕೊಳ್ಳುವುದೇ‌ ಸಿದ್ದರಾಮಯ್ಯರವರಿಗೆ ದೊಡ್ಡ ತಲೆ ನೋವಾಗಿದೆ’ ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Nov 4, 2023, 03:07 PM IST
  • ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯನವರಿಂದ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್
  • ಮುಂದಿನ 2 ವರ್ಷದವರೆಗೆ ಕುರ್ಚಿ ಉಳಿಸಿಕೊಳ್ಳುವುದೇ‌ ಸಿದ್ದರಾಮಯ್ಯರವರಿಗೆ ದೊಡ್ಡ ತಲೆ ನೋವಾಗಿದೆ
  • ರಾಜ್ಯದ ಕಾಂಗ್ರೆಸ್ ನಾಯಕರು ಪ್ರಸ್ತುತ ಹಲವಾರು ಚಿಂತೆಗಳಲ್ಲಿ ಮುಳುಗಿದ್ದಾರೆಂದು ಬಿಜೆಪಿ ಟೀಕೆ
ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯರಿಂದ ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್! ಬಿಜೆಪಿ title=
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರ್ಚಿ ಉಳಿಸಿಕೊಳ್ಳಲು ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್ ‌ಮೊರೆ ಹೋಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯನವರು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆಂದು ಕುಟುಕಿದೆ.

‘ಕುರ್ಚಿಗೆ ಎದುರಾಗಿರುವ ಕಂಟಕದಿಂದ ತಪ್ಪಿಸಿಕೊಳ್ಳುವುದು, ನಾನೇ 5 ವರ್ಷ ಸಿಎಂ ಎಂದು ಹೇಳಿರುವುದಕ್ಕೆ ಸ್ಪಷ್ಟನೆ ನೀಡುವುದು, ಮಂತ್ರಿಗಳು ತಮ್ಮ ಪರ ನಿಂತಿದ್ದಾರೆ ಎಂದು ಮನವರಿಕೆ ಮಾಡಿಸುವುದು, ಹೈಕಮಾಂಡ್ ಮಾತನ್ನು ಕೇಳದಂತೆ ಸಂಪುಟದ ಮುಂದೆ ಮನವಿ ಮಾಡುವುದು, ಡಿ.ಕೆ.ಶಿವಕುಮಾರ್ ಅವರು ಎರಡು ವರ್ಷ ಸುಮ್ಮನೆ ಇರುವಂತೆ ತಂತ್ರಗಾರಿಕೆ ಮಾಡುವುದು, ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್ ಹಣ ಕ್ರೋಢೀಕರಿಸುವುದು ಮತ್ತು ತೆಲಂಗಾಣ, ಛತ್ತೀಸ್ಗಢದಲ್ಲಿ ಸಿಕ್ಕಿ ಬಿದ್ದಿರುವ #ATMSarkaraದ ಹಣದ ಪ್ರಮಾಣ ತಿಳಿಯುವುದು’ ಇವೆಲ್ಲಾ ಬ್ರೇಕ್ ಫಾಸ್ಟ್ ಮೀಟಿಂಗ್ ‌ಮೊರೆ ಹೋಗಿರುವುದಕ್ಕೆ ಕಾರಣಗಳು ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ದೇಶಾದ್ಯಂತ 1 ಕೋಟಿ ಫ್ಯಾನ್ ಹಾಗೂ 20 ಲಕ್ಷ ಇಂಡಕ್ಷನ್ ಒಲೆಗಳ ವಿತರಣೆಗೆ ಮುಂದಾದ ಸರ್ಕಾರ!

‘ರಾಜ್ಯವನ್ನು ಕಾಡುತ್ತಿರುವ ಬರ, ಕುಡಿಯುವ ನೀರಿನಂಥ ಜ್ವಲಂತ ಸಮಸ್ಯೆಗಳ ನಿರ್ವಹಣೆಗಿಂತಲೂ ಮುಂದಿನ ಎರಡು ವರ್ಷ ಕಾಲದವರೆಗಾದರೂ ಕುರ್ಚಿ ಉಳಿಸಿಕೊಳ್ಳುವುದೇ‌ ಸಿದ್ದರಾಮಯ್ಯರವರಿಗೆ ದೊಡ್ಡ ತಲೆ ನೋವಾಗಿದೆ’ ಎಂದು ಬಿಜೆಪಿ ಕುಟುಕಿದೆ.

‘ರಾಜ್ಯದ ಕಾಂಗ್ರೆಸ್ ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ. ಸಿಎಂ ಸಿದ್ದರಾಮಯ್ಯನವವರಿಗೆ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಚಿಂತೆ. ಡಿಸಿಎಂ ಡಿ.ಕೆ.ಶಿವಕುಮಾರ್‍ಗೆ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಹೇಗೆ ಎಂಬ ಚಿಂತೆ. ಪ್ರಿಯಾಂಕ್ ಖರ್ಗೆಗೆ ಸಿದ್ದರಾಮಯ್ಯರ ಕೆಇಎ ಪರೀಕ್ಷಾ ಅಕ್ರಮವನ್ನು ಸಿಬಿಐಗೆ ವಹಿಸಿದರೆ ಏನು ಮಾಡುವುದೆಂಬ ಚಿಂತೆ. ಡಾ.ಜಿ.ಪರಮೇಶ್ವರ್‍ಗೆ ತಮ್ಮ ಸಿಎಂ ಆಸೆಗೆ ಡಿ.ಕೆ.ಶಿವಕುಮಾರ್ ತಣ್ಣೀರೆರಚಿದರೆ ಏನು ಮಾಡುವುದು ಎಂಬ ಚಿಂತೆ. ಕಾಂಗ್ರೆಸ್ ನಾಯಕರೆಲ್ಲರೂ ತಮ್ಮ ಸ್ವಾರ್ಥದ ರಾಜಕಾರಣದ ಬಗ್ಗೆ ಚಿಂತಿಸುತ್ತಿದ್ದಾರೆ ಹೊರತು ಯಾರಿಗೂ ರಾಜ್ಯದ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ!!’ವೆಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಪಡಿತರ ಚೀಟಿ ತಿದ್ದುಪಡಿ ದಿನಾಂಕ ವಿಸ್ತರಣೆ

‘ರಾಜ್ಯದ ಎಲ್ಲಾ ಇಲಾಖೆಗಳನ್ನೂ ಹಳ್ಳ ಹಿಡಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ಇರುವ ಯೋಜನೆಗಳನ್ನೂ ನಡೆಸಿಕೊಂಡು ಹೋಗುವ ಯೋಗ್ಯತೆ ಇಲ್ಲ. ಇವುಗಳ ಮೇಲೆ ಹೊಸದಾಗಿ ಎಳೆದು ಹಾಕಿಕೊಂಡ ಯೋಜನೆಗಳಿಗೂ ತಾಂತ್ರಿಕ ದೋಷ. ಇರುವ ವ್ಯವಸ್ಥೆ ಹದಗೆಡಿಸದೆ ಮುನ್ನಡೆಸುವ ಬಗ್ಗೆ ಮೊದಲು ಗಮನ ಕೊಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ. ನೀವು ಅಧಿಕಾರಕ್ಕೆ ಬಂದಾಗಿನಿಂದ ಅಂಗನವಾಡಿಗಳಿಗೆ ಮೊಟ್ಟೆಯೂ ಇಲ್ಲ, ಗ್ಯಾಸ್‌ ಕೂಡ ಇಲ್ಲದಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವೇತನ ಹೆಚ್ಚು ಮಾಡುತ್ತೇವೆ ಎಂದು ಈಗ ಗ್ಯಾಸ್-ಮೊಟ್ಟೆ ಹಣವನ್ನೂ ಅವರೇ ಭರಿಸುವಂತೆ ಮಾಡಿರುವುದು ಶ್ರಮಿಕ ವರ್ಗದವರ ಮೇಲೆ ನೀವು ಮಾಡುತ್ತಿರುವ ಅನ್ಯಾಯ’ವೆಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News