ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ 'ಮೈಸೂರು ಹುಲಿ' ಟಿಪ್ಪು ಸುಲ್ತಾನ್ ನನ್ನು ಶ್ಲಾಘಿಸಿದ್ದಾರೆ.
ವಿಧಾನಸೌಧದ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್- ಕರ್ನಾಟಕ ಮಹಾನ್ ವೀರ ಯೋಧರ ಭೂಮಿ. ಟಿಪ್ಪು ಓರ್ವ ಅಪ್ರತಿಮ ವೀರ, ರಾಕೆಟ್ ತಂತ್ರಜ್ಞಾನದ ಜನಕ, ಬ್ರಿಟಿಷರ ವಿರುದ್ಧ ಹೋರಾಡಿ ಮರಣವನ್ನಪ್ಪಿದ ಶೌರ್ಯ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಮಹಾನ್ ವ್ಯಕ್ತಿಗಳಾದ ವಿಜಯ ನಗರದ ಅರಸರು, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಕೆಂಪೇಗೌಡ ಮೊದಲಾದವನ್ನೂ ಕೂಡ ನೆನಪಿಸಿಕೊಂಡರು.
Tipu Sulatn died historic death fighting British.He was also pioneer in use of Mysore rockets in warfare: Pres Kovind in #Karnataka Assembly pic.twitter.com/t4M5pTe06c
— ANI (@ANI) October 25, 2017
ಇದೊಂದು 'ಪ್ರಜಾಪ್ರಭುತ್ವದ ಅವಿಸ್ಮರಣೀಯ ದಿನ' ಎಂದು ತಿಳಿಸಿದ ಕೋವಿಂದ್, "ಮೂರೂ ತಿಂಗಳ ಹಿಂದೆ ಇದೇ ದಿನ ನಾನು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದೆ". ಕರ್ನಾಟಕ ರಾಜ್ಯಕ್ಕೆ ರಾಷ್ಟ್ರಪತಿಯಾಗಿ ಇದು ನನ್ನ ಮೊದಲ ಭೇಟಿ. ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಅಪಾರ ಎಂದು ಸ್ಮರಿಸಿದ್ದಾರೆ.