Academic Calendar: 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 60 ಸರ್ಕಾರಿ ರಜಾ ದಿನಗಳು ಇದ್ದು, 270 ಲಭ್ಯವಾಗುವ ಶಾಲಾ ಕರ್ತವ್ಯದ ದಿನಗಳಾಗಿವೆ.

Written by - Zee Kannada News Desk | Last Updated : Apr 21, 2022, 08:20 PM IST
  • ಶಿಕ್ಷಣ ಇಲಾಖೆಯಿಂದ 2022-23ರ ಅಕಾಡೆಮಿಕ್ ಕ್ಯಾಲೆಂಡರ್ ಬಿಡುಗಡೆ
  • 270 ದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲು, ದಸರಾಗೆ 14 ದಿನ ರಜೆ
  • ಮೇ 16ರಿಂದಲೇ ಶಾಲೆಗಳು ಆರಂಭ, 16 ರಿಂದ 20ರವರೆಗೆ ದಾಖಲಾತಿ ಪ್ರಕ್ರಿಯೆ
Academic Calendar: 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ title=
2022-23ರ ಅಕಾಡೆಮಿಕ್ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷ(2022-23)ದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಈ ವರ್ಷ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ.

ಕೊರೊನಾ ಸಾಂಕ್ರಾಮಿಕದ ಕಾರಣದಿಂದ 2 ವರ್ಷಗಳಿಂದ ಸಂಪೂರ್ಣ ತರಗತಿಗಳು ನಡೆದಿರಲಿಲ್ಲ.ಆದರೆ, ಈ ವರ್ಷ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ. 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ದಸರಾಗೆ 14 ದಿನ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: "ಪಿಯು ಪರೀಕ್ಷಾ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ"

ಈ ಬಾರಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿದೆ. ವಿಶ್ವೇಶ್ವರಯ್ಯ ದಿನಾಚರಣೆ, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಕನಕದಾಸರ ಜಯಂತಿ, ಸಂವಿಧಾನ ದಿನಾಚರಣೆ, ವಿವೇಕಾನಂದ ಜಯಂತಿ ದಾರ್ಶನಿಕರ ಜಯಂತಿ ಆಚರಣೆಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.  

ಪ್ರಮುಖ ಮಾಹಿತಿ ಇಲ್ಲಿದೆ ನೋಡಿ

ಮೇ 16ರಿಂದ ಶಾಲೆಗಳು ಆರಂಭ

ಮೇ16 ರಿಂದ 20ರವರೆಗೆ ದಾಖಲಾತಿ ಪ್ರಕ್ರಿಯೆ

ಮೇ 17 ರಿಂದ 31ವರೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮ

ಮೇ 28 ರಂದು ಪೋಷಕರ ಸಭೆ

ಜೂನ್ 1 ರಿಂದ ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ

ಅಕ್ಟೋಬರ್ 3 ರಿಂದ 16 ದಸರಾ ರಜೆ

ಅಕ್ಟೋಬರ್ 17 ರಿಂದ 25 ಅರ್ಧ ವಾರ್ಷಿಕ ಪರೀಕ್ಷೆ

2023ರ ಫೆಬ್ರವರಿ 23 ರಿಂದ 25ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆ

2023ರ ಮಾರ್ಚ್ 23 ರಿಂದ 31ವರೆಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ

ಇದನ್ನೂ ಓದಿ: ದ್ವೀತಿಯ ಪಿಯು ಪರೀಕ್ಷೆಗೆ ಕ್ಷಣಗಣನೆ: ಪರೀಕ್ಷಾ ಕೇಂದ್ರಗಳಿಗೆ ನೋ ಹಿಜಾಬ್, ಓನ್ಲಿ ಸಮವಸ್ತ್ರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News