ಜಗಜೀವನ್ ರಾಮ್ , ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲು ಕಾರಜೋಳ ಕರೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. 

Last Updated : Apr 4, 2020, 12:10 PM IST
ಜಗಜೀವನ್ ರಾಮ್ , ಅಂಬೇಡ್ಕರ್ ಜಯಂತಿಯನ್ನು  ಸರಳವಾಗಿ ಆಚರಿಸಲು ಕಾರಜೋಳ ಕರೆ title=

ಬೆಂಗಳೂರು:  ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣ ಗೊಳಿಸಲು  ರಾಷ್ಟ್ರದಾದ್ಯಂತ ಲಾಕ್ ಡೌನ್ ಅನುಷ್ಠಾನದಲ್ಲಿದ್ದು, ಸೆಕ್ಷನ್ 144 ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಏ.5 ರಂದು ಡಾ. ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಹಾಗೂ ಏ.14 ರಂದು ಸಂವಿಧಾನ ಶಿಲ್ಪಿ  ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ತುಂಬಾ ಸರಳವಾಗಿ ಹೆಚ್ಚಿನ ಸಂದಣಿ ಸೇರದಂತೆ ಆಚರಿಸುವಂತೆ ಉಪಮುಖ್ಯಮಂತ್ರಿ  ಗೋವಿಂದ ಎಂ ಕಾರಜೋಳ(Govind M Karjola)  ತಿಳಿಸಿದ್ದಾರೆ.

ಕಾಂಗ್ರೆಸ್ ದೂರು ನೀಡಿರುವುದು ಹಾಸ್ಯಾಸ್ಪದ : ಡಿಸಿಎಂ ಗೋವಿಂದ ಕಾರಜೋಳ

ಕರೋನವೈರಸ್ (Coronavirus)  ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಬಾಬು ಜಗಜೀನ್ ರಾಮ್ ಜಯಂತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಸಾರ್ವಜನಿಕರು, ಸಂಘಟನೆಗಳು, ಸಂಘ ಸಂಸ್ಥೆಗಳ  ಪದಾಧಿಕಾರಿಗಳು, ಈ ಮಹಾನ್ ಚೇತನಗಳ ಅಭಿಮಾನಿಗಳು, ಅನುಯಾಯಿಗಳು ಸಹಕರಿಸಬೇಕು. ಸರಳವಾಗಿ ಜನ್ಮದಿನಾಚರಣೆಯನ್ನು ಆಚರಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.

Trending News