KRSನಲ್ಲಿ ದಸರಾ ಮೆರುಗು; ಸಾರ್ವಜನಿಕರ ಜೊತೆಯಲ್ಲಿ ಸಿಎಂ ಬೃಂದಾವನ ವೀಕ್ಷಣೆ

ದಸರಾ ಅಂಗವಾಗಿ  ಬೃಂದಾವನ ಉದ್ಯಾನವನವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿತ್ತು.  

Last Updated : Oct 17, 2018, 09:13 AM IST
KRSನಲ್ಲಿ ದಸರಾ ಮೆರುಗು; ಸಾರ್ವಜನಿಕರ ಜೊತೆಯಲ್ಲಿ ಸಿಎಂ ಬೃಂದಾವನ ವೀಕ್ಷಣೆ  title=

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿನ್ನೆ ಕೆ ಆರ್ ಎಸ್ ನ ಬೃಂದಾವನ ಉದ್ಯಾನವನದಲ್ಲಿ ದಸರಾ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಿದರು.

ಬೃಂದಾವನ ಉದ್ಯಾನವನವು ದೃಶ್ಯ ವೈಭವದೊಂದಿಗೆ ಸಾಂಸ್ಕೃತಿಕ ವೈಭವಕ್ಕೂ ಸಾಕ್ಷಿಯಾಯಿತು.

ದಸರಾ ಅಂಗವಾಗಿ  ಬೃಂದಾವನ ಉದ್ಯಾನವನವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿತ್ತು.

ಇದಕ್ಕೆ ಮೆರುಗು ನೀಡುವಂತೆ ಇಲ್ಲಿ ಶಾಸ್ತ್ರೀಯ ನೃತ್ಯ, ರವೀಂದ್ರನಾಥ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Trending News