ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ

 ಕೃಷಿ ಕಾಯಕದ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅಧಿಕಾರ ಸ್ವೀಕರಿಸಿದ್ದಾರೆ. 

Written by - Ranjitha R K | Last Updated : Mar 5, 2021, 08:17 PM IST
  • ಕೃಷಿ ಕಾಯಕದ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್
  • ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ ಅಧಿಕಾರ ಸ್ವೀಕಾರ
  • ಸಂಭಾವನೆ ಪಡೆಯದೆ ಕೃಷಿ ರಾಯಭಾರಿಯಾಗಿ ಅಧಿಕಾರ
ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ title=
ಕೃಷಿ ಕಾಯಕದ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (photo twitter)

ಬೆಂಗಳೂರು : ಕೃಷಿ ಕಾಯಕದ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅಧಿಕಾರ ಸ್ವೀಕರಿಸಿದ್ದಾರೆ. ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ (Darshan) ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ದರ್ಶನ್ ಅವರಿಗೆ ಹಸಿರ ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ಇದೇ ವೇಳೆ ದರ್ಶನ್ ಗೆ ನೇಗಿಲು ನೀಡಿ ಗೌರವಿಸಲಾಯಿತು. 

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ ಕೃಷಿ (Agriculture) ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್ (Darshan), ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸುವುದಾಗಿ ಹೇಳಿದರು. ರೈತರ (Farmers) ಏಳಿಗೆಗೂ ಶ್ರಮಿಸುವುದಾಗಿಯೂ ಹೇಳಿದರು.

ಇದನ್ನೂ ಓದಿ : ಸಹಜ ಬೇಸಾಯಕ್ಕಿದೆ ಇಲ್ಲೊಂದು 6 ತಿಂಗಳ ಕೋರ್ಸ್...!

ಇನ್ನು ದರ್ಶನ್ ಯಾವುದೇ ಸಂಭಾವನೆ ಪಡೆಯದೆ ಕೃಷಿ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಇದೇ ವೇಳೆ  ಮಾರ್ಚ್ 11ರಂದು ಬಿಡುಗಡೆಯಾಗಲಿರುವ ರಾಬರ್ಟ್ (Roberrt) ಚಿತ್ರವನ್ನು  ತಾವು ಕೂಡಾ ವೀಕ್ಷಿಸುವುದಾಗಿ ಸಿಎಂ ಬಿಎಸ್ ವೈ ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ಕೃಷಿ ಕೈಪಿಡಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 

ಇದನ್ನೂ ಓದಿ : BIG NEWS: PHS, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಸಿಗಲಿದೆ 'ಕೋವಿಡ್ ಲಸಿಕೆ'!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News