Deadly Virus: ನಿಫಾ ವೈರಸ್ ವಕ್ಕರಿಸಿದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ..!

ದೇಶದಲ್ಲಿಯೇ ಅತಿಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ 11ಕ್ಕೂ ಹೆಚ್ಚು ಜನರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

Written by - Puttaraj K Alur | Last Updated : Sep 7, 2021, 03:30 PM IST
  • ಕೇರಳದಲ್ಲಿ ಕಾಣಿಸಿಕೊಂಡಿರುವ ಡೆಡ್ಲಿ ನಿಫಾ ವೈರಸ್ ಕರುನಾಡಿಗೂ ದಾಂಗುಡಿ ಇರುವ ಭೀತಿ ಎದುರಾಗಿದೆ
  • ನಿಫಾ ವೈರಸ್ ಅಟ್ಯಾಕ್ ಆದರೆ ತೀವ್ರ ಜ್ವರ, ತಲೆನೋವು, ಗಂಟಲು ನೋವು, ಉಸಿರಾಟ ತೊಂದರೆ ಕಾಣಿಸಿಕೊಳ್ಳಲಿದೆ
  • ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದೆ
Deadly Virus: ನಿಫಾ ವೈರಸ್ ವಕ್ಕರಿಸಿದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ..! title=
ರಾಜ್ಯಕ್ಕೆ ನಿಫಾ ವೈರಸ್ ಭೀತಿ ಎದುರಾಗಿದೆ (Photo Courtesy: @Zee News)

ಬೆಂಗಳೂರು: ಕೊರೊನಾ ವೈರಸ್(CoronaVirus) ಬಳಿಕ ಇದೀಗ ದೇಶಕ್ಕೆ ಡೆಡ್ಲಿ ನಿಫಾ ವೈರಸ್ ಕಂಟಕ ಎದುರಾಗಿದೆ. ಕೇರಳದಲ್ಲಿ ಅಬ್ಬರಿಸುತ್ತಿರುವ ಮಾರಕ ನಿಫಾ ವೈರಸ್ ಇದೀಗ ರಾಜ್ಯಕ್ಕೂ ಕಾಲಿಡುವ ಭೀತಿ ಎದುರಾಗಿದೆ. ಯಾರಿಗಾದರೂ ನಿಫಾ ವೈರಸ್ ವಕ್ಕರಿಸಿದರೆ ಅವರ ಪ್ರಾಣಕ್ಕೆ ಕುತ್ತು ಗ್ಯಾರಂಟಿ ಅಂತಾ ಎಚ್ಚರಿಸಲಾಗಿದೆ.

ರಕ್ಕಸ ನಿಫಾ ವೈರಸ್ ಲಕ್ಷಣಗಳು(Nipah Virus Symptoms) ಏನೇನು..? ಇದಕ್ಕೆ ಔಷಧಿ ಇಲ್ವಾ..? ಅಂತಾ ಜನರು ತಲೆಕೆಡಿಸಿಕೊಂಡಿದ್ದಾರೆ. ಡೆಡ್ಲಿ ನಿಫಾ ವೈರಸ್(Nipah Virus) ಅಟ್ಯಾಕ್ ಆದರೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತದಂತೆ. ತಲೆನೋವು, ಗಂಟಲು ನೋವು, ಉಸಿರಾಟ ತೊಂದರೆ, ವಾಂತಿ, ಅರೆ ನಿದ್ರಾವಸ್ಥೆ ಸಮಸ್ಯೆ ಕೂಡ ಕಾಣಿಸಿಕೊಳ್ಳಲಿದೆ ಅಂತಾ ಹೇಳಲಾಗುತ್ತಿದೆ. ನಿಫಾ ವೈರಸ್ ಹೆಚ್ಚಾದರೆ ಭಾರೀ ಗಂಡಾಂತರ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಾಲ್ಕು ವಾರಗಳ ನಂತರ COVISHIELD ನ ಎರಡನೇ ಡೋಸ್ ಹಾಕಲು ಕೇಂದ್ರಕ್ಕೆ ಕೇರಳ ಹೈಕೋರ್ಟ್ ಸೂಚನೆ

ದೇಶದಲ್ಲಿಯೇ ಅತಿಹೆಚ್ಚು ಕೊರೊನಾ(COVID-19) ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ 11ಕ್ಕೂ ಹೆಚ್ಚು ಜನರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಭಾನುವಾರವಷ್ಟೇ 12 ವರ್ಷದ ಬಾಲಕನಲ್ಲಿ ಡೆಡ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ವೈರಸ್ ಗೆ ಬಲಿಯಾಗಿರುವ ಈ ಬಾಲಕನಿಂದಲೇ ಇದೀಗ ಕೇರಳದಲ್ಲಿ ಆತಂಕ ಹೆಚ್ಚಾಗಿದೆ. ಬಾಲಕನ ಸಂಪರ್ಕದಲ್ಲಿದ್ದ 11 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಫಾ ಸೋಂಕಿನ ಲಕ್ಷಣವಿರುವ ಜನರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ನಿಫಾ ವೈರಸ್ ಹೆಚ್ಚಿರುವ ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಜೋನ್ ಮಾಡುವಂತೆ ಕೇಂದ್ರ ಸರ್ಕಾರ ಕೇರಳಕ್ಕೆ ಸಲಹೆ ನೀಡಿದೆ. ನಿಫಾ ವೈರಸ್ ಪತ್ತೆಗೆ ಲ್ಯಾಬ್ ಸಿದ್ಧವಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಕರುನಾಡಿಗೆ ಕಂಟಕವಾಗಲಿದೆಯೇ ನಿಫಾ ವೈರಸ್..?

ಕೇರಳದಲ್ಲಿ ಕಾಣಿಸಿಕೊಂಡಿರುವ ಡೆಡ್ಲಿ ನಿಫಾ ವೈರಸ್(Nipah Virus) ಕರುನಾಡಿಗೂ ದಾಂಗುಡಿ ಇರುವ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯದ ಜನತೆಯ ನಿದ್ದೆಗೆಡಿಸಲಿದೆಯಾ ನಿಫಾ ವೈರಸ್ ಎಂಬ ಪ್ರಶ್ನೆ ಮೂಡಿದೆ. ಈ ವಿಷಯದಲ್ಲಿ ಸ್ವಲ್ಪ ಮೈಮರೆತರು ರಾಜ್ಯಕ್ಕೆ ದೊಡ್ಡ ಆಫತ್ತು ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಕೇರಳ ಗಡಿ ದಾಟಿ ಕರ್ನಾಟಕಕ್ಕೂ ನಿಫಾ ವೈರಸ್ ವಕ್ಕರಿಸುತ್ತಾ ಅನ್ನೋ ಭೀತಿ ಶುರುವಾಗಿದೆ.  ಕೇರಳದವರ ಮೇಲೆ ನಿಗಾ ಇಡದಿದ್ದರೆ ರಾಜ್ಯಕ್ಕೆ ನಿಫಾ ಕಂಟಕವಾಗಲಿದೆ.

ಇದನ್ನೂ ಓದಿ: ಇಂದು ದೆಹಲಿಗೆ ಸಿಎಂ ಬೊಮ್ಮಾಯಿ: ಖಾಲಿ ಇರುವ ಸಚಿವ ಸ್ಥಾನ ಭರ್ತಿಗೆ ಮುಹೂರ್ತ?

ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಶಂಕಿತ ಪ್ರಕರಣ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿಯಲ್ಲಿ ಪ್ರಯಾಣಿಸುವವರನ್ನು ತಪಾಸಣೆ ನಡೆಸಲಾಗುಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News