ಬೆಂಗಳೂರಿನ ಈಜೀಪುರದಲ್ಲಿ ಸಿಲಿಂಡರ್ ಸ್ಫೋಟ: ಅವಶೇಷಗಳಡಿ ಸಿಲುಕಿ ನಾಲ್ವರ ದುರ್ಮರಣ

ಸತತ ಮಳೆಯಿಂದಾಗಿ ಗೋಡೆಗಳು ಶಿಥಿಲಗೊಂಡಿದ್ದು, ಇಂದು ಸಿಲಿಂಡರ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಮನೆ ಗೋಡೆಗಳು ಕುಸಿದಿವೆ. 

Last Updated : Oct 16, 2017, 10:09 AM IST
ಬೆಂಗಳೂರಿನ ಈಜೀಪುರದಲ್ಲಿ ಸಿಲಿಂಡರ್ ಸ್ಫೋಟ: ಅವಶೇಷಗಳಡಿ ಸಿಲುಕಿ ನಾಲ್ವರ ದುರ್ಮರಣ title=
Pic: ANI

ಬೆಂಗಳೂರು: ಬೆಂಗಳೂರಿನ ಈಜೀಪುರದಲ್ಲಿ ಸಿಲಿಂಡರ್ ಸ್ಫೋಟ ಗೊಂಡಿದ್ದು, ನಾಲ್ಕು ಮನೆಗಳು ಕುಸಿದಿದೆ. ಈ ಅವಘದದಲ್ಲಿ ಅವಶೇಷಗಳಡಿ ಸಿಲುಕಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಹಳೆಯ ಮನೆಗಳಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಸುರಿದ ಸತತ ಮಳೆಯಿಂದಾಗಿ ಗೋಡೆಗಳು ಶಿಥಿಲಗೊಂಡಿದ್ದು, ಇಂದು ಸಿಲಿಂಡರ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಮನೆ ಗೋಡೆಗಳು ಕುಸಿದಿವೆ. 

ಮನೆಯಲ್ಲಿ ನಾಲ್ಕು ಜನ ಸಿಲುಕಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ, ದೌಡಾಯಿಸಿದ್ದು,  ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಸ್ ಡಿ ಆರ್ ಎ ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಕಲಾವತಿ 68, ಸರವಣ 44, ಅಶ್ವಿನಿ 22 ಸೇರಿದಂತೆ ಸಂಜನಾ ಎಂಬ ಮಗು ಕೂಡ ಸಾವನ್ನಪ್ಪಿದೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಕ್ಷಣಾಕಾರ್ಯ ಭರದಿಂದ ಸಾಗಿದೆ. 

ರಕ್ಷಣೆ ಮಾಡುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಮೇಲೆ ಮೇಲ್ಚಾವಣಿ ಬಿದ್ದು, ಮೂವರು ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 

ಸ್ಥಳಕ್ಕೆ ಗೃಹ ಸಚಿವ ರಾಮಲಿಂಗರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Trending News