ಬೆಂಗಳೂರು : ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಕೊನೆಗೂ ನ್ಯಾಯಾಲಯ ಅನುಮತಿ ನೀಡಿದೆ. ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದ್ದ ಜಯಲಲಿತಾ ವಸ್ತುಗಳು ಮತ್ತು ಆಸ್ತಿಯನ್ನು ಹರಾಜು ಮಾಡಲು ಒಪ್ಪಿಗೆ ಸಿಕ್ಕಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಮತ್ತು ಅವರ ಸ್ನೇಹಿತೆ ಶಶಿಕಲಾಗೆ ಸೇರಿದ 29 ಪ್ರಾಪರ್ಟಿಯನ್ನು ಸೀಜ್ ಮಾಡಲಾಗಿತ್ತು. ಇದರ ಹರಾಜಿಗೆ ಆಗ್ರಹಿಸಿ ಮಾನವ ಹಕ್ಕು ಹೋರಾಟಗಾರ ಕೋರ್ಟ್ ಮೊರೆಹೋಗಿದ್ದರು. ಈ ಆಸ್ತಿ ಖಜಾನೆಯಲ್ಲಿಯೇ ಇದ್ದು, ನ್ಯಾಷನಲ್ ವೇಸ್ಟ್ ಆಗುತ್ತಿರುವ ಕಾರಣ ಅವುಗಳನ್ನು ಹರಾಜು ಹಾಕಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಾಪನೆಗೆ ಆದೇಶ
ಇದೀಗ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ಪ್ರಿನ್ಸಿಪಲ್ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಜಯಲಲಿತಾ ಆಸ್ತಿ ಹರಾಜಿಗೆ ಅನುಮತಿ ನೀಡಿದೆ, ಮಾತ್ರವಲ್ಲ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿ ನೇಮಕಕ್ಕೆ ಸೂಚನೆ ನೀಡಿದೆ.
ಖಜಾನೆಯಲ್ಲಿರುವ ಜಯಲಲಿತಾ ಆಸ್ತಿಗಳು :
ಜಯಲಲಿತಾಗೆ ಸೇರಿದ 11,344 ದುಬಾರಿ ಬೆಲೆಯ ಸಿಲ್ಕ್ ಸ್ಯಾರಿಗಳು, 750ಕ್ಕೂ ಹೆಚ್ಚು ದುಬಾರಿ ಚಪ್ಪಲಿಗಳು, 250 ಶಾಲ್, ಹಲವಾರು ಚಿನ್ನದ ಆಭರಣ, ಬೆಲೆಬಾಳುವ ವಸ್ತುಗಳೂ ಹರಾಜಾಗುವ ಸಾಧ್ಯತೆ ಇದೆ. ಇವೆಲ್ಲವೂ ನೂರಾರು ಕೋಟಿ ಮೌಲ್ಯದ ಆಸ್ತಿಗಳಾಗಿದ್ದು, ವರ್ಷ ಕಳೆದಂತೆ ಸೀರೆ, ಶಾಲ್, ಚಪ್ಪಲಿ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಹರಾಜು ಮಾಡಬೇಕೆಂದು ಅರ್ಜಿದಾರರು ವಾದ ಮಂಡಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಇದೀಗ ಹರಾಜಿಗೆ ಅಧಿಕಾರಿ ನೇಮಕ ಮಾಡುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ : ಕ್ಯಾಪ್ಟನ್ ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.