Covid-19 New Guidelines: ರಾಜ್ಯ ಸರ್ಕಾರದಿಂದ ಹೊಸ ಕೊರೊನಾ ಮಾರ್ಗಸೂಚಿ, ಯಾವುದಕ್ಕೆಲ್ಲಾ ನಿರ್ಬಂಧ!

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ದೈಹಿಕ ಅಂತರ ಕಾಪಾಡುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್‌ ಇಲಾಖೆ, ಸ್ಥಳೀಯ ಆಡಳಿತಗಳಿಗೆ ಸೂಚನೆ.ಈ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ - 2005, ಐಪಿಸಿ ಸೆಕ್ಷನ್‌ 188ರ ಅಡಿ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ. 

Last Updated : Apr 6, 2021, 07:27 AM IST
  • ಕಚೇರಿಗಳಿಗೆ ಆದಷ್ಟು ವರ್ಕ್‌ ಫ್ರಂ ಹೋಮ್‌ ಮುಂದುವರಿಸಲು ಸೂಚನೆ.
  • ಎಲ್ಲಾ ತರಹದ ರ‍್ಯಾಲಿ, ಧರಣಿ, ಮುಷ್ಕರಕ್ಕೆ ನಿಷೇಧ.
  • ವಿವಿಧ ಸಭೆ ಸಮಾರಂಭಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಜನರಷ್ಟೆ ಭಾಗವಹಿಸಲು ಅ
Covid-19 New Guidelines: ರಾಜ್ಯ ಸರ್ಕಾರದಿಂದ ಹೊಸ ಕೊರೊನಾ ಮಾರ್ಗಸೂಚಿ, ಯಾವುದಕ್ಕೆಲ್ಲಾ ನಿರ್ಬಂಧ! title=

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಹಲವು ನಿರ್ಬಂಧಗಳನ್ನು ಹೇರಿದೆ.  

ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗಳಲ್ಲಿರುವ, ಸಾಮಾನ್ಯವಾಗಿ ನಿವಾಸಿಗಳು ಅಥವಾ ಜನರು ಗುಂಪು  ಸೇರುವ ಜಿಮ್‌, ಪಾರ್ಟಿ ಹಾಲ್(Party Hall)‌ಗಳು, ಕ್ಲಬ್‌ ಹೌಸ್‌ಗಳು, ಈಜುಕೊಳಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಮ್‌ ಮತ್ತು ಈಜುಕೊಳ್ಳಗಳ ತರೆಯುವಂತಿಲ್ಲ. 

Karnataka Chief Secretary: 'ರಾಜ್ಯದಲ್ಲಿ ಲಾಕ್‌ಡೌನ್‌, ಸೆಮಿ ಲಾಕ್‌ಡೌನ್‌, ಕರ್ಫ್ಯೂ ಜಾರಿ ಇಲ್ಲ'

ಶಾಪಿಂಗ್‌ ಮಾಲ್‌, ಮುಚ್ಚಿದ ಸ್ಥಳಗಳಲ್ಲಿರುವ ಮಾರ್ಕೆಟ್‌ಗಳು(Markets), ಡಿಪಾರ್ಟ್‌ಮೆಂಟ್‌ ಸ್ಟೋರ್‌ಗಳಿಗೂ ಈ ನಿಯಮ ಅನ್ವಯ. ತಪ್ಪಿದಲ್ಲಿ ಇವನ್ನೂ ಕೋವಿಡ್‌ ಕೊನೆಗೊಳ್ಳುವರೆಗೆ ಮುಚ್ಚಲಾಗುವುದು. 

ಸಾರ್ವಜನಿಕ ಸ್ಥಳ(Public Place)ಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರಾ ಮಹೋತ್ಸವ, ಮೇಳಗಳು, ಗುಂಪು ಸೇರುವುದಕ್ಕೆ ನಿಷೇಧ. 

Corona Second Wave: ರಾಜ್ಯ ರಾಜಧಾನಿಯಲ್ಲಿ 6ರಿಂದ 9ರವರೆಗಿನ ತರಗತಿಗಳು ಸ್ಥಗಿತ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್(Mask)‌ ಧರಿಸುವುದು, ದೈಹಿಕ ಅಂತರ ಕಾಪಾಡುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್‌ ಇಲಾಖೆ, ಸ್ಥಳೀಯ ಆಡಳಿತಗಳಿಗೆ ಸೂಚನೆ.ಈ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ - 2005, ಐಪಿಸಿ ಸೆಕ್ಷನ್‌ 188ರ ಅಡಿ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ. 

Nalin Kumar Kateel: ರಾಜ್ಯದ 'ಮೂರು ಬೈ ಎಲೆಕ್ಷನ್ ಗಳಲ್ಲಿ ಬಿಜೆಪಿ' ಗೆಲುವು ಖಚಿತ!

ವಿವಿಧ ಸಭೆ ಸಮಾರಂಭಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಜನರಷ್ಟೆ ಭಾಗವಹಿಸಲು ಅವಕಾಶ. 

ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್(Restaurants)‌ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್‌, ಹ್ಯಾಂಡ್‌ ವಾಷ್‌ ವ್ಯವಸ್ಥೆಗಳ ಕಡ್ಡಾಯ ಅಳವಡಿಕೆಗೆ ಸೂಚನೆ. ತಪ್ಪಿದಲ್ಲಿ ಕೋವಿಡ್‌ ಕೊನೆಗೊಳ್ಳುವರೆಗೆ ಮುಚ್ಚಲಾಗುವುದು.

ಬೆಂಗಳೂರು ನಗರ, ಬೆಂಗಳೂರು ಗ್ರಾ. ಸೇರಿದಂತೆ ಬಿಬಿಎಂಪಿ(BBMP) ವಲಯ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಮತ್ತು ಧಾರವಾಡ ಜಿಲ್ಲೆಗಳ ಚಿತ್ರ ಮಂದಿರಗಳಲ್ಲಿ ಶೇ.50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ.

KN Jagadish Kumar: CD ಸಂತ್ರಸ್ತೆ ಪರ ವಕೀಲ ಜಗದೀಶ್ ಕುಮಾರ್‌ ವಿರುದ್ಧ 17 ಕ್ರಿಮಿನಲ್‌ ಕೇಸ್!

ಮೈಸೂರು, ಕಲಬುರಗಿ(Kalburgi), ದಕ್ಷಿಣ ಕನ್ನಡ, ಉಡುಪಿ, ಬೀದರ್ ಬೆಂಗಳೂರು ನಗರ, ಬೆಂಗಳೂರು ಗ್ರಾ. ವಲಯ‌ ಮತ್ತು ಧಾರವಾಡ ಜಿಲ್ಲೆಗಳ ಜಿಲ್ಲೆಗಳಲ್ಲಿ ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ.50ನ್ನು ಮೀರುವಂತಿಲ್ಲ.  

ಎಲ್ಲಾ ತರಹದ ರ‍್ಯಾಲಿ, ಧರಣಿ, ಮುಷ್ಕರಕ್ಕೆ ನಿಷೇಧ.

Corona Vaccination: 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ, ನಾಡಿನ ಜನತೆಗೆ ಸಿಎಂ ಮನವಿ

ಸಾರ್ವಜನಿಕ ಸಾರಿಗೆಗಳಲ್ಲಿ ನಿಗದಿಪಡಿಸಿರುವ ಆಸನಕ್ಕಿಂತ ಹೆಚ್ಚಿನ ಜನ ಪ್ರಯಾಣಿಸುವಂತಿಲ್ಲ.

ಕಚೇರಿಗಳಿಗೆ ಆದಷ್ಟು ವರ್ಕ್‌ ಫ್ರಂ ಹೋಮ್(Work from Home) ಮುಂದುವರಿಸಲು ಸೂಚನೆ.

'ಏಪ್ರಿಲ್ ಫೂಲ್ ಬಿಡಿ ಏಪ್ರಿಲ್ ಕೂಲ್ ಮಾಡಿ'

ವಿದ್ಯಾಗಮ ಸೇರಿ 6-9ನೇ ತರಗತಿಗಳು ಸ್ಥಗಿತ. 10, 11, 12ನೇ ತರಗತಿಗಳು(Class) ಈಗಿನಂತೆಯೇ ಮುಂದುವರಿಯುತ್ತವೆ, ಆದರೆ ಹಾಜರಾತಿ ಕಡ್ಡಾಯವಲ್ಲ.

ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳಲ್ಲಿ ಮಂಡಳಿ/ವಿವಿಗಳ ಪರೀಕ್ಷೆ(Exams) ಬರೆಯುವ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ತರಗತಿಗಳು ಸ್ಥಗಿತ. ವಸತಿ ಮತ್ತು ಬೋರ್ಡಿಂಗ್‌ ಶಾಲೆಗಳಿಗೂ ಇದೇ ನಿಯಮ ಅನ್ವಯ.

ರಾಜ್ಯದಲ್ಲಿ ಶೇ 42 ರಷ್ಟು ಕೊರೊನಾ ಪ್ರಕರಣಗಳ ಹೆಚ್ಚಳ, 4,200 ಕ್ಕೆ ದೈನಂದಿನ ಏರಿಕೆ

ಧಾರ್ಮಿಕ ಕ್ಷೇತ್ರಗಳಲ್ಲಿ ವೈಯಕ್ತಿಕ ಪ್ರಾರ್ಥನೆಗೆ ಮಾತ್ರ ಅವಕಾಶ, ಗುಂಪು ಸೇರುವಂತಿಲ್ಲ.

ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗಳಲ್ಲಿರುವ, ಸಾಮಾನ್ಯವಾಗಿ ನಿವಾಸಿಗಳು/ಜನರು ಸೇರುವ ಜಿಮ್‌, ಪಾರ್ಟಿ ಹಾಲ್‌ಗಳು, ಕ್ಲಬ್‌ ಹೌಸ್‌ಗಳು, ಈಜುಕೊಳಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಮ್‌ ಮತ್ತು ಈಜುಕೊಳ್ಳಗಳನ್ನು ತರೆಯುವಂತಿಲ್ಲ. 

Trending News