Mysore Area Constituencies: ಮೋದಿ ರೋಡ್ ಶೋ ಮಾಡಿದ ರಸ್ತೆಯನ್ನು ಸಗಣಿ ಗಂಜಲದಿಂದ ಶುದ್ಧಿ !

Mysore Assembly Constituency Result: ಈಗಾಗಲೇ ರಾಜ್ಯದಲ್ಲಿ ಚುನಾವಣೆ ಮುಗಿದು, ಫಲಿತಾಂಶವು ಹೊರ  ಬಿದ್ದಿದೆ. ಅದರ ನಡುವೆ ಚುನಾವಣೆ ಪ್ರಚಾರದ ವೇಳೆ  ಮೋದಿ ಸಾಗಿದ ಮಾರ್ಗವನ್ನು ಕೈ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ. 

Written by - Zee Kannada News Desk | Last Updated : May 14, 2023, 02:57 PM IST
  • ಮೋದಿ ರೋಡ್ ಶೋ ಮಾರ್ಗ ಅಪವಿತ್ರ ಆರೋಪ
  • ನಮೋ ಸಾಗಿದ ದಾರಿ ಸಗಣಿ, ಗಂಜಲದಿಂದ ಕ್ಲೀನ್
  • ದಸರಾ ಮೆರವಣಿಗೆ ರಾಜ ಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಆರೋಪ
Mysore Area Constituencies: ಮೋದಿ ರೋಡ್ ಶೋ ಮಾಡಿದ ರಸ್ತೆಯನ್ನು ಸಗಣಿ ಗಂಜಲದಿಂದ  ಶುದ್ಧಿ ! title=

ಮೈಸೂರು: ಈಗಾಗಲೇ ರಾಜ್ಯದಲ್ಲಿ ಚುನಾವಣೆ ಮುಗಿದು , ಫಲಿತಾಂಶವು ಹೊರ ಬಂದಿದೆ. ಕಾಂಗ್ರೆಸ್‌ 135 ಸೀಟ್‌ ಗಳಿಸಿ ಬಹುಮತ ಸಾಧಿಸಿದ್ದಾರೆ. ರಾಜ್ಯದ ಕೆಲವು ಕಡೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಗೆಲುವು ಪಡೆದುಕೊಂಡಿದೆ. ಗೆದ್ದವರ ಸಂಭ್ರಮ ಮುಗಿಲು ಮುಟ್ಟಿದ್ದೆ.

ಇದನ್ನೂ ಓದಿ: Election Result: 'ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್' ಭವಿಷ್ಯವಾಣಿ ನಿಜವಾಯಿತಾ...!

ಅದರ ನಡುವೆ ಚುನಾವಣೆ ಪ್ರಚಾರದ ವೇಳೆ  ಮೋದಿ ಸಾಗಿದ ಮಾರ್ಗವನ್ನ ಶುಚಿಗೊಳಿಸುವ ಮೂಲಕ ಕೈ ಕಾರ್ಯಕರ್ತರ ವ್ಯಂಗ್ಯ ಮಾಡಿರುವ ವಿಡಿಯೋ ಒಂದು ಬೆಳಕಿಗೆ ಬಂದಿದೆ. ವೇಳೆ ನಗರದ ಕೆ.ಆರ್ ವೃತ್ತ, ಸಯ್ಯಾಜೀರಾವ್,  ಗನ್‌ಹೌಸ್ ವೃತ್ತದಿಂದ ಹೈವ್ ವೃತ್ತದ ವರೆಗೆ  ಮೋದಿ ರೋಡ್‌ ಶೋ  ಮಾಡಿದ್ದರು ಎಂಬ ಕಾರಣಕ್ಕೆ  ಸಗಣಿ, ಗಂಜಲದಿಂದ ರಸ್ತೆ ಶುದ್ದಿಗೊಳಿಸಲಾಗಿದೆ.

ರೋಡ್‌ ಶೋ ವೇಳೆ ರಸ್ತೆಉದ್ದಗಲಕ್ಕೂ  ಸಗಣಿ, ಗಂಜಲದಿಂದ  ಕ್ಲೀನ್ ಮಾಡಲಾಗಿದೆ. ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Chikmagalur Assembly Constituency: ಎಚ್ ಡಿ ತಮ್ಮಯ್ಯಗೆ ಗೆಲುವು.. ಸಿಟಿ ರವಿಗೆ ಹೀನಾಯ ಸೋಲು!

ರೋಡ್‌ ಶೋ ವೇಳೆ ರಸ್ತೆಗಳೆಲ್ಲಾ ಮಲಿನಗೊಂಡಿದೆ. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಸದ್ಯದಲ್ಲೇ ತಾಯಿ ಚಾಮುಂಡೇಶ್ವರಿ ಅದೇ ಮಾರ್ಗವಾಗಿ ಸಾಗುವುದರಿಂದ ರಸ್ತೆಯನ್ನು  ಸಗಣಿ ಗಂಜಲದಿಂದ ಶುದ್ಧಿ ಮಾಡಲಾಗಿದೆಂದು ಕೈ ಕಾರ್ಯಕರ್ತರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News