ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ಆರಂಭಿಸಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುನ್ನೆಚ್ಚರಿಕೆ ಕ್ರಮವಾಗಿ 28 ಲೋಕಸಭೆ ಕ್ಷೇತ್ರಗಳಲ್ಲಿ ವೀಕ್ಷಕರನ್ನ ನೇಮಿಸುವ ಮೂಲಕ ರಾಜ್ಯ ಚುನಾವಣೆ ಗೆದ್ದ ರೀತಿ ಲೋಕಸಭೆಯಲ್ಲೂ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಣತಂತ್ರವನ್ನ ರೂಪಿಸಿದ್ದಾರೆ.
ಹೌದು, ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಈ ಮೂಲಕ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಮುಂದಾಗಿದ್ದ ಬಿಜೆಪಿ ಜೆಡಿಎಸ್ ಮೈತ್ರಿಯ ಮುಖಭಂಗಕ್ಕೆ ತಯಾರಿ ನಡೆಸಿದ್ದಾರೆ. ಇದಲ್ಲದೆ, ಕಾಂಗ್ರೆಸ್ ಪಂಚ ಗ್ಯಾರಂಟಿ, ಆಪರೇಷನ್ ಹಸ್ತದ ಮೂಲಕವೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೌಂಟರ್ ಕೊಡಲು ಪ್ರತಿತಂತ್ರ ರೂಪಿಸಲಾಗುತ್ತಿದೆ.
ಇದನ್ನೂ ಓದಿ- ಗಂಗಾವತಿ ನಗರಸಭೆ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸಲು ಮುಂದಾದ ಜಿಲ್ಲಾಡಳಿತ, ಗ್ರಾಮಸ್ಥರ ಆಕ್ರೋಶ
28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ:
ಬೆಂಗಳೂರು ಉತ್ತರಕ್ಕೆ ಸಚಿವ ಡಾ. ಜಿ ಪರಮೇಶ್ವರ್, ಬೆಂಗಳೂರು ಗ್ರಾಮಾಂತರಕ್ಕೆ ಕೆ ವೆಂಕಟೇಶ್, ಬೆಂಗಳೂರು ದಕ್ಷಿಣಕ್ಕೆ ಡಾ. ಶರಣ್ ಪ್ರಕಾಶ್ ಪಾಟೀಲ್, ಬೆಂಗಳೂರು ಕೇಂದ್ರಕ್ಕೆ ಎನ್ ಎಸ್ ಬೋಸರಾಜು, ಬಾಗಲಕೋಟೆ ಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ, ಬೆಳಗಾವಿಯಲ್ಲಿ ಶಿವರಾಜ್ ತಂಗಡಗಿ, ವಿಜಯಪುರಕ್ಕೆ ಸತೀಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರಕ್ಕೆ ಜಮೀರ್ ಅಹ್ಮದ್ ಖಾನ್, ಧಾರವಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ-ಚಿಕ್ಕಮಗಳೂರಿಗೆ ಮಂಕಾಳ ವೈದ್ಯ, ಶಿವಮೊಗ್ಗಕ್ಕೆ ಕೆ ಎನ್ ರಾಜಣ್ಣ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ- ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳು ಸೇವೆ ನಡೆಸಿ ಆಕ್ರೋಶ ಹೊರಹಾಕಿದ ಕನ್ನಡಪರ ಸಂಘಟನೆಗಳು
ಕಲಬುರಗಿಗೆ ಸಚಿವ ಬಿ. ನಾಗೇಂದ್ರ, ಬೀದರ್ - ಸಂತೋಷ್ ಎಸ್ ಲಾಡ್, ಚಾಮರಾಜನಗರ - ದಿನೇಶ್ ಗುಂಡೂರಾವ್, ಚಿಕ್ಕೋಡಿ - ಡಿ ಸುಧಾಕರ್, ಚಿತ್ರದುರ್ಗ - ಹೆಚ್ ಸಿ ಮಹದೇವಪ್ಪ, ದಕ್ಷಿಣ ಕನ್ನಡ - ಮಧು ಬಂಗಾರಪ್ಪ, ದಾವಣಗೆರೆ - ಈಶ್ವರ್ ಖಂಡ್ರೆ, ಬಳ್ಳಾರಿ - ಶಿವಾನಂದ ಪಾಟೀಲ್, ಹಾಸನ - ಎನ್ ಚಲುವರಾಯಸ್ವಾಮಿ, ಹಾವೇರಿ - ಎಸ್ ಎಸ್ ಮಲ್ಲಿಕಾರ್ಜುನ, ಕೋಲಾರ - ರಾಮಲಿಂಗಾರೆಡ್ಡಿ, ಕೊಪ್ಪಳ - ಆರ್ ಬಿ ತಿಮ್ಮಾಪುರ, ಮಂಡ್ಯ - ಡಾ. ಎಂ ಸಿ ಸುಧಾಕರ್, ಮೈಸೂರು - ಬೈರತಿ ಸುರೇಶ್, ರಾಯಚೂರು - ಕೆ ಹೆಚ್ ಮುನಿಯಪ್ಪ, ತುಮಕೂರು - ಕೃಷ್ಣ ಬೈರೇಗೌಡ, ಉತ್ತರ ಕನ್ನಡ - ಹೆಚ್ ಕೆ ಪಾಟೀಲ್ ರನ್ನು ವೀಕ್ಷಕರಾಗಿ ನೇಮಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=q9auZ2eqeZo
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.