ತನ್ನ ಪ್ರಚಾರಕ್ಕೆ ಜನರ ಬೆವರಿನ ಹಣ ಬಳಸುವ ಮೋದಿಗೆ ಪ್ರಧಾನಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?: ಕಾಂಗ್ರೆಸ್

Congress Slams PM Narendra Modi: 2018ರಿಂದ 2023ರವರೆಗೆ ಪ್ರಧಾನಿ ಮೋದಿ ಫೋಟೋ ತೋರಿಸಲು ಖರ್ಚು ಮಾಡಿದ್ದು ಬರೋಬ್ಬರಿ 3,064 ಕೋಟಿ ರೂ. ಜನರ ಬೆವರಿನ ಹಣವನ್ನು ತನ್ನ ಪ್ರಚಾರಕ್ಕೆ ಬಳಸುವ ಮೋದಿಯನ್ನು ಪ್ರಧಾನಮಂತ್ರಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

Written by - Puttaraj K Alur | Last Updated : Jul 24, 2023, 03:57 PM IST
  • 2018ರಿಂದ 2023ರವರೆಗೆ ಪ್ರಧಾನಿ ಮೋದಿ ಫೋಟೋ ತೋರಿಸಲು ಖರ್ಚು ಮಾಡಿದ್ದು 3,064 ಕೋಟಿ
  • ತನ್ನ ಪ್ರಚಾರಕ್ಕೆ ಜನರ ಬೆವರಿನ ಹಣ ಬಳಸುವ ಮೋದಿಯನ್ನು ಪ್ರಧಾನಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?
  • ಕೇವಲ ಪ್ರಚಾರವನ್ನೇ ನಂಬಿರುವ ಬಿಜೆಪಿಯ ಕೇಂದ್ರ ಸರ್ಕಾರ ಈ ಬಾರಿ ಜನರಿಂದ ತಿರಸ್ಕಾರಕ್ಕೊಳಗಾಗುತ್ತದೆ
ತನ್ನ ಪ್ರಚಾರಕ್ಕೆ ಜನರ ಬೆವರಿನ ಹಣ ಬಳಸುವ ಮೋದಿಗೆ ಪ್ರಧಾನಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?: ಕಾಂಗ್ರೆಸ್  title=
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಚಾರಕ್ಕಾಗಿ 2018-19ನೇ ಸಾಲಿನಿಂದ 2023ರ ಜುಲೈ 13ರವರೆಗೆ ಬರೋಬ್ಬರಿ 3,064 ಕೋಟಿ ರೂ. ಖರ್ಚು ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಜ್ಯಸಭೆಗೆ ತಿಳಿಸಿದೆ.

ಇದೇ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘2018ರಿಂದ 2023ರ ವರೆಗೆ ಪ್ರಧಾನಿ ಮೋದಿ ಫೋಟೋ ತೋರಿಸಲು ಖರ್ಚು ಮಾಡಿದ್ದು ಬರೋಬ್ಬರಿ 3,064 ಕೋಟಿ ರೂ. ಜನರ ಬೆವರಿನ ಹಣವನ್ನು ತನ್ನ ಪ್ರಚಾರಕ್ಕೆ ಬಳಸುವ ಮೋದಿಯನ್ನು ಪ್ರಧಾನಮಂತ್ರಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?’ ಎಂದು ಪ್ರಶ್ನಿಸಿದೆ. ‘ಯಾವುದೇ ಸಾಧನೆ, ಯೋಜನೆ ಇಲ್ಲದೆ ಕೇವಲ ಪ್ರಚಾರವನ್ನೇ ನಂಬಿರುವ ಬಿಜೆಪಿಯ ಕೇಂದ್ರ ಸರ್ಕಾರ ಈ ಬಾರಿ ಜನರಿಂದ ತಿರಸ್ಕಾರಕ್ಕೆ ಒಳಗಾಗುವುದು ನಿಶ್ಚಿತ’ವೆಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: "ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣ"

ಹಳೆಯ ಬಸ್ಸುಗಳು ಮೂಲೆಗೆ ತಳ್ಳಿತ್ತು!

‘ಹಿಂದಿನ ಬಿಜೆಪಿ ಸರ್ಕಾರ ಹಳೆಯ ಬಸ್ಸುಗಳು ಮೂಲೆಗೆ ತಳ್ಳಿತ್ತು, ಕೊರೊನಾ ಕಾಲದಲ್ಲಿ ನಿರ್ವಹಣೆ ಇಲ್ಲದೆ ಗುಜರಿಗೆ ಹೋಗುವ ಸ್ಥಿತಿಗೆ ಬಂದಿದ್ದವು. ನಮ್ಮ ಸರ್ಕಾರ ಹಳೆಯ ಬಸ್ಸುಗಳನ್ನು ಸಂಪೂರ್ಣ ನವೀಕರಿಸಿ ಹೊಸ ಬಸ್ಸುಗಳ ಖರೀದಿ ವೆಚ್ಚವನ್ನು ಉಳಿಸಲು ಕ್ರಮ ಕೈಗೊಂಡಿದೆ. ಇದು ಕಾಂಗ್ರೆಸ್ ಸರ್ಕಾರದ ಇಚ್ಚಾಶಕ್ತಿ’ ಎಂದು ಟ್ವೀಟ್ ಮಾಡಿದೆ.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ!

‘ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಕ್ಕಿದೆ, ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಶೀಘ್ರವೇ 4000 ಹೊಸ ಬಸ್ಸುಗಳನ್ನು ಖರೀದಿಸಿ ಸಾರಿಗೆ ಸಂಸ್ಥೆಗಳಿಗೆ ಹೊಸ ಶಕ್ತಿ ನೀಡಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ ಸಾರಿಗೆ ಸಂಸ್ಥೆಗಳು ನಷ್ಟದ ಕೂಪಕ್ಕೆ ಬಿದ್ದಿದ್ದವು, ಈಗ ಸಚಿವ ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿ ಮತ್ತೊಮ್ಮೆ ವೈಭವದ ದಿನಗಳನ್ನು ಕಾಣಲಿದೆ’ ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡಲು ಹೋದ ಯುವಕ: ಬುದ್ಧಿ ಕಲಿಸಿದ ಪೊಲೀಸರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News