‘ಆಪರೇಶನ್ ಕಮಲ’ದಿಂದ ಜನ್ಮತಾಳಿದ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ: ಕಾಂಗ್ರೆಸ್

ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಬೊಗಳೆ ಬಿಟ್ಟ ಸಿಎಂ ಬಸವರಾಜ್ ಬೊಮ್ಮಾಯಿವರ ಮಾನಗೆಟ್ಟ ಸರ್ಕಾರ ರೈತರ ಹೆಸರೇಳಿಕೊಂಡು ಗೋಣಿ ಚೀಲದಲ್ಲೂ ಅಕ್ರಮವೆಸಗಿ ಇತಿಹಾಸ ಬರೆದಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Sep 12, 2022, 03:51 PM IST
  • ‘ಆಪರೇಶನ್ ಕಮಲ’ದ ಮೂಲಕ ಜನ್ಮತಾಳಿದ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ
  • ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲೂ ಭ್ರಷ್ಟ ಬಿಜೆಪಿ ಸರ್ಕಾರ ಗೋಲ್ಮಾಲ್ ನಡೆಸಿದೆ
  • ಗೋಣಿಚೀಲದಲ್ಲೂ ಗೋಲ್ಮಾಲ್ ನಡೆಸಿದ 40% ಕಮಿಷನ್ ಸರ್ಕಾರವೆಂದು ಕಾಂಗ್ರೆಸ್ ಕಿಡಿ
‘ಆಪರೇಶನ್ ಕಮಲ’ದಿಂದ ಜನ್ಮತಾಳಿದ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ: ಕಾಂಗ್ರೆಸ್ title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ‘ಆಪರೇಶನ್ ಕಮಲ’ದ  ಮೂಲಕ ಜನ್ಮತಾಳಿದ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿದ್ದು, ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲೂ ಬಿಜೆಪಿ ಗೋಲ್ಮಾಲ್ ನಡೆಸಿದೆ ಎಂದು ಕಿಡಿಕಾರಿದೆ.

‘ರಾಜ್ಯ ಬಿಜೆಪಿ ಸರ್ಕಾರದಲ್ಲಿ ಕೆಪಿಎಸ್ಸಿ ನೇಮಕಾತಿ ಅಕ್ರಮ, ಪಿಎಸ್ಐ ನೇಮಕಾತಿ ಅಕ್ರಮ, ಹಾಲು ಒಕ್ಕೂಟ ನೇಮಕಾತಿ ಅಕ್ರಮ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಮತ್ತು ಡಿಸಿಸಿ ಬ್ಯಾಂಕ್ ನಲ್ಲೂ ಅಕ್ರಮ ನಡೆದಿದೆ. ಕಣ್ಣಿಗೆ ಕಂಡ ಅಕ್ರಮಗಳು ಇಷ್ಟಾದರೆ ಕಣ್ಣಿಗೆ ಕಾಣದ್ದು ಎಷ್ಟು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: CT Ravi : 'ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು'

ರೈತರಿಗೆ ಉಚಿತವಾಗಿ ಗೋಣಿಚೀಲ ವಿತರಣೆ ಹೆಸರಿನಲ್ಲಿ ನಡೆದಿರುವ ಅಕ್ರಮ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವುದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗೋಣಿಚೀಲದಲ್ಲೂ ಗೋಲ್ಮಾಲ್ ನಡೆಸಿದ 40% ಕಮಿಷನ್ ಸರ್ಕಾರದ ಆಹಾರ ಸರಬರಾಜು ಇಲಾಖೆ. ಈ ಸರ್ಕಾರದ ಪ್ರತಿ ಇಲಾಖೆಯೂ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರೋದು ಮುಚ್ಚಿಡುವಂಥದ್ದೇನಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಬೊಗಳೆ ಬಿಟ್ಟ ಸಿಎಂ ಬಸವರಾಜ್ ಬೊಮ್ಮಾಯಿವರ ಮಾನಗೆಟ್ಟ ಸರ್ಕಾರ ರೈತರ ಹೆಸರೇಳಿಕೊಂಡು ಗೋಣಿ ಚೀಲದಲ್ಲೂ ಅಕ್ರಮವೆಸಗಿ ಇತಿಹಾಸ ಬರೆದಿದೆ’ ಅಂತಾ ಟೀಕಿಸಿದೆ.

ಪ್ರಭಾವಿಗಳ ಜಾಗ ಉಳಿಸಲು ಬಡವರ ಮೇಲೆ ಪ್ರಹಾರ

ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಶ್ರೀಮಂತರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ. ರಾಜಕಾಲುವೆ ಒತ್ತುವರಿ ಮಾಡಿದ ಪ್ರಭಾವಿಗಳ ಜಾಗ ಉಳಿಸಲು ಬಡವರ ಮೇಲೆ ಪ್ರಹಾರ ನಡೆಸಲಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ, ವೈಜ್ಞಾನಿಕ ಸರ್ವೆ ನಡೆಸದೆ, ಪ್ರಭಾವಿಗಳ ಒತ್ತುವರಿಯನ್ನು ಸರ್ವೆ ನಡೆಸದೆ ಈ ಅನ್ಯಾಯ ಎಸಗುತ್ತಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: PSI Scam: ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಆರೋಪಿಸಿದ್ದ ಪರಸಪ್ಪನ ವಿಡಿಯೋ ಬಿಡುಗಡೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News