ಬೆಂಗಳೂರು: 'ನೀರಿಗಾಗಿ ನಡಿಗೆ' (Walk for Water) ಮೇಕೆದಾಟು ಯೋಜನೆ ಶೀಘ್ರ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದೆ.
ಇಂದು ಬೆಳಗ್ಗೆ ಸ್ವಾಮೀಜಿ, ಮೌಲ್ವಿ ಮತ್ತು ಪಾದ್ರಿಗಳು ಮೂರೂ ಧರ್ಮಗಳ ಧಾರ್ಮಿಕ ಮುಖಂಡರು ಗಿಡಗಳಿಗೆ ನೀರೆರೆಯುವ ಮೂಲಕ ಹಾಗೂ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19 ರ ವರೆಗೆ ಈ ಪಾದಯಾತ್ರೆ ಹಮ್ಮಿಕೊಂಡಿದೆ.
ಮೇಕೆದಾಟು (Mekedatu) ಸಂಗಮದಿಂದ ಪಾದಯಾತ್ರೆ ಆರಂಭವಾಗಿದೆ. ಇಂದಿನಿಂದ 11 ದಿನ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. 165ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೆಜ್ಜೆ ಹಾಕಲು ಕೈ ಪಾಳಯ ಸಾಗುತ್ತಿದೆ.
ಇಂದಿನ ಪಾದಯಾತ್ರೆ 6.5 ಕಿ. ಮೀ. ದೂರ ಸಾಗಿ ಹೆಗ್ಗನೂರು ಬಳಿ ಮಧ್ಯಾಹ್ನದ ಭೋಜನ ಮುಗಿಸಿ ಮತ್ತೆ 8.5 ಕಿ. ಮೀ. ನಡೆದ ಬಳಿಕ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರಾದ ದೊಡ್ಡಾಲಹಳ್ಳಿ ಗ್ರಾಮ ತಲುಪಲಿದೆ. ಸಭೆಯ ಬಳಿಕ ಅಲ್ಲಿಯೇ ಎಲ್ಲರೂ ವಾಸ್ತವ್ಯ ಹೂಡಲಿದ್ದಾರೆ.
ದೊಡ್ಡಹಾಲಹಳ್ಳಿ, ಕನಕಪುರ, ಮಾಡಾಳು, ಗಾಣಾಳು, ಲಿಂಗಾರಜಿಪುರ, ರಾಮನಗರ, ಕೆಂಗೇರಿ, ಕೆ.ಆರ್.ಪುರಂ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ(Basavanagudi National College Ground) ಸಮಾಪ್ತಿಯಾಗಲಿದೆ.
ಪ್ರತಿದಿನ 15 ಕಿಲೋಮೀಟರ್ ವರೆಗೆ ನಡಿಗೆ ಇರಲಿದೆ. ಮಧ್ಯೆ 7 ಕಿಲೋಮೀಟರ್ ಗೆ ವಿಶ್ರಾಂತಿಗೆಂದು ಪಾದಯಾತ್ರೆಗೆ ಬ್ರೇಕ್ ಇರಲಿದೆ. ರಾತ್ರಿ 15 ಕೀಲೋಮೀಟರ್ ಮುಗಿಯುತ್ತಲೇ ಅವತ್ತಿನ ದಿನದ ಪಾದಯಾತ್ರೆ (Congress Mekedatu Padayatre) ಕೊನೆಗೊಳ್ಳಲಿದೆ.
ಆದರೆ ಮೊದಲ ದಿನವೇ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸುಸ್ತಾಗಿದ್ದಾರೆ. ಮೇಕೆದಾಟು ಸಂಗಮದಿಂದ ನಡೆದ ಸಿದ್ದರಾಮಯ್ಯ ಒಂದಷ್ಟು ದೂರ ನಡೆದ ಬಳಿಕ ಆಯಾಸಗೊಂಡು ಕಾರಿನಲ್ಲಿ ಹತ್ತಿದ್ದಾರೆ. ಕಾರಿನ ಮೂಲಕ ಪಾದಯಾತ್ರೆಯ ಜತೆಗೆ ಸಾಗುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ : 'ಹೌದು ಹುಲಿಯಾ' ಎಂದು ಸಿದ್ದರಾಮಯ್ಯಗೆ ಅಭಿಮಾನಿಗಳ ಸ್ವಾಗತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.