ಚಾಮುಂಡಿ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡುವಂತೆ ಸಂಸದ ಪ್ರತಾಪ್ ಸಿಂಹಗೆ ಸವಾಲು

ಸಂಸದ ಪ್ರತಾಪ್ ಸಿಂಹ ವಿರುದ್ದ ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಸೀತಾರಾಮ್ ಸವಾಲ್ ಕಿಡಿ ಕಾರಿದ್ದಾರೆ. ತಾಕತ್ತಿದ್ದರೆ 2017ರ ಘಟನೆಯ ವಿಡಿಯೋ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ. ನೀವು ಹೇಳಿರುವುದು ನಿಜ ಎಂದಾದರೆ ಚಾಮುಂಡಿ ಅಮ್ಮನ ಸನ್ನಿಧಾನಕ್ಕೆ ಹೋಗಿ ಅಲ್ಲೇ ಪ್ರಮಾಣ‌ ಮಾಡೋಣ ಎಂದು ಸವಾಲು ಹಾಕಿದ್ದಾರೆ.

Written by - Zee Kannada News Desk | Last Updated : Aug 24, 2022, 10:52 AM IST
  • ಪ್ರತಾಪ್ ಸಿಂಹಗೆ ಸವಾಲು
  • ಚಾಮುಂಡಿ ಸನ್ನಿಧಾನದಲ್ಲಿ ಪ್ರಮಾಣ ಮಾಡುವ ಎಂದು ಸವಾಲು
  • ಸಿದ್ದರಾಮಯ್ಯ ವಿರುದ್ದ ಸುಳ್ಳು ಹೇಳಿರುವ ಆರೋಪ
ಚಾಮುಂಡಿ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡುವಂತೆ ಸಂಸದ ಪ್ರತಾಪ್ ಸಿಂಹಗೆ  ಸವಾಲು  title=

ಮೈಸೂರು : ಸಿದ್ದರಾಮಯ್ಯ ನಾನ್ ವೆಜ್ ತಿಂದು ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ  ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರತಾಪ್ ಸಿಂಹ ವಿರುದ್ದ ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಸೀತಾರಾಮ್ ಗುಡುಗಿದ್ದಾರೆ.  ತಾಕತ್ತಿದ್ದರೆ ಆ ವಿಡಿಯೋ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಅಲ್ಲದೆ,  ಚಾಮುಂಡಿ ಅಮ್ಮನ ಸನ್ನಿಧಾನಕ್ಕೆ ಹೋಗಿ ಅಲ್ಲೇ ಪ್ರಮಾಣ‌ ಮಾಡೋಣ ಎಂದು ಹೇಳಿದ್ದಾರೆ. 

ಸಂಸದ ಪ್ರತಾಪ್ ಸಿಂಹ ವಿರುದ್ದ ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಸೀತಾರಾಮ್ ಸವಾಲ್ ಕಿಡಿ ಕಾರಿದ್ದಾರೆ. ತಾಕತ್ತಿದ್ದರೆ 2017ರ ಘಟನೆಯ ವಿಡಿಯೋ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.  ಅಂದು ಸಿದ್ದರಾಮಯ್ಯ , ಚಪಾತಿ, ಅನ್ನ ಸಾರು ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆ ಮಾಡಿದ್ದರು. ಅಂದು ನಾನು ಕೂಡಾ ಜೊತೆಯಲ್ಲಿಯೇ ಇದ್ದೆ ಎಂದು ಹೇಳಿದ್ದಾರೆ.  ಪ್ರತಾಪ್ ಸಿಂಹ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಚಾಮುಂಡಿ ಅಮ್ಮನ ಸನ್ನಿಧಾನಕ್ಕೆ ಹೋಗಿ ಅಲ್ಲೇ ಪ್ರಮಾಣ‌ ಮಾಡೋಣ ಎಂದು ಸವಾಲು ಹಾಕಿದ್ದಾರೆ. 

ಇದನ್ನೂ ಓದಿ : ರಾಜಧಾನಿ ಚೊಚ್ಚಲ ಸ್ಟೀಲ್ ಬ್ರಿಡ್ಜ್‌ಗೆ ಎದುರಾಯ್ತು ಮಹಾ ಕಂಟಕ- ಪ್ರಾಯೋಗಿಕ ಸಂಚಾರದಲ್ಲೇ ಮಹಾಯಡವಟ್ಟು ..!!

ಇಲ್ಲದ ಸುಳ್ಳು ಹೇಳಿ ಜನರ ದಾರಿ ತಪ್ಪಿಸಬೇಡಿ. ಎಲ್ಲಿಂದಲ್ಲೋ ಬಂದ ನಿಮ್ಮನ್ನು ಮೈಸೂರಿನ ಜನರು ಎಂಪಿ ಮಾಡಿದ್ದಾರೆ. ನೀವು ಕೊಡಗಿನ ವ್ಯಕ್ತಿಯೂ ಅಲ್ಲ, ಮೈಸೂರಿನವರೂ ಅಲ್ಲ. ಆದರೂ ಜನರು ನಿನ್ನನ್ನು ಸಂಸದ ಮಾಡಿ ಗೆಲ್ಲಿಸಿದ್ದಾರೆ.  ಜನ ನಿಮ್ಮನ್ನು ಆರಿಸಿದ್ದು ಕೆಲಸ ಮಾಡಲು. ಆದರೆ 
ಕೆಲಸ‌ ಮಾಡೋದನ್ನ ಬಿಟ್ಟು ಮಾಂಸ ತಿಂದ್ರು, ಕೋಳಿ ತಿಂದ್ರು ಅಂತ ಸಮಯ ವ್ಯರ್ಥ  ಮಾಡುತ್ತಿದ್ದಿರಿ ಎಂದು ಕಿಡಿ ಕಾರಿದ್ದಾರೆ. 

ಇದನ್ನೂ ಓದಿ : ಎಸಿಬಿ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News