ಶ್ರಮಿಕ ವರ್ಗಗಳ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಸಂಕಲ್ಪವಾಗಿದೆ-ಸಿಎಂ ಬೊಮ್ಮಾಯಿ

CM Bommai ಬೆಂಗಳೂರಿನಲ್ಲಿ ನಡೆದ ಸರ್ಕಾರದ ವಿವಿಧ ಇಲಾಖೆಗಳ ನೂತನ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಸಂಕಲ್ಪವನ್ನು ಮಾಡಿದ್ದಾರೆ.     

Written by - Zee Kannada News Desk | Last Updated : Mar 23, 2023, 03:55 PM IST
  • ಕರ್ನಾಟಕದ ಆಟೋ ಚಾಲಕ ಬಾಂಧವರು ಹಗಲಿರುಳೆನ್ನದೆ ದುಡಿಯುತ್ತಾರೆ.
  • ದೃಢವಾದ ಆತ್ಮವಿಶ್ವಾಸ, ಛಲ ಹಾಗೂ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ.
  • ಮಕ್ಕಳ ಶಿಕ್ಷಣ ಕುರಿತು ಕಾಳಜಿಯಿಂದ ವಿದ್ಯಾನಿಧಿ ಯೋಜನೆಯನ್ನು ಅವರಿಗೂ ವಿಸ್ತರಿಸಲಾಗಿದೆ.
ಶ್ರಮಿಕ ವರ್ಗಗಳ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಸಂಕಲ್ಪವಾಗಿದೆ-ಸಿಎಂ ಬೊಮ್ಮಾಯಿ  title=

Banglore : ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸರ್ಕಾರದ ವಿವಿಧ ಇಲಾಖೆಗಳ ನೂತನ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಬಸವಾರಾಜ ಬೊಮ್ಮಯಿ ಅವರು ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆಗೊಳಿಸುವುದರ ಕುರಿತಾಗಿ ಈ ರೀತಿ ಹೇಳಿದ್ದಾರೆ. 

  "ದುಡಿಮೆಗೆ ಗೌರವ ಸಲ್ಲಿಸುವುದು ಉತ್ತಮ ಸಮಾಜದ ಲಕ್ಷಣ. ಕುರಿಗಾಹಿಗಳಾದ ಹಾಲುಮತದವರಿಗೆ ಮನೆ, ಮಠವಿಲ್ಲ ಯಾವುದೇ ಸ್ಥಿರವಾದ ನೆಲೆ ಇಲ್ಲ. ಅವರ ದುಡಿಮೆಯನ್ನು ಮನ್ನಿಸಿ, ಅವರಿಗೆ ಶಕ್ತಿ ತುಂಬಲು ಬಜೆಟ್ ನಲ್ಲಿ ಘೋಷಿಸದೆ ಇದ್ದರೂ ಕೂಡಾ, ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಅವರ ಸಮುದಾಯದ ಏಳಿಗೆಗೆ ರೂ 355 ಕೋಟಿ ಅನುದಾನ ಒದಗಿಸಲಾಗಿದೆ."  

ಇದನ್ನೂ ಓದಿ-‘ಗಾಂಧಿ’ ಎಂಬ ಉಪನಾಮವನ್ನು ಕದ್ದ ಈ ವಿದೇಶಿ ಕೈಗೊಂಬೆ ಈಗ ‘ಗಾಂಧೀಜಿ’ಯ ಉಲ್ಲೇಖ ಕದಿಯಲು ಯತ್ನಿಸುತ್ತಿದೆ!-ಬಿಜೆಪಿ 

"ಕರ್ನಾಟಕದ ಆಟೋ ಚಾಲಕ ಬಾಂಧವರು ಹಗಲಿರುಳೆನ್ನದೆ ದುಡಿಯುತ್ತಾರೆ. ದುಡಿಮೆಯಿಂದಲೇ ಸಂಸಾರ ಸಾಗಿಸಬೇಕಾದ ಅವರಿಗೆ ಆರೋಗ್ಯ ವಿಮೆ ಸವಲತ್ತನ್ನು ಈಗಾಗಲೇ ಒದಗಿಸಲಾಗಿದ್ದು ಅವರ  ಮಕ್ಕಳ ಶಿಕ್ಷಣ ಕುರಿತು ಕಾಳಜಿಯಿಂದ ವಿದ್ಯಾನಿಧಿ ಯೋಜನೆಯನ್ನು ಅವರಿಗೂ ವಿಸ್ತರಿಸಲಾಗಿದೆ. 15,000 ಆಟೋ ಚಾಲಕರ ಕುಟುಂಬಗಳು ಈಗಾಗಲೇ ವಿದ್ಯಾನಿಧಿಯ ಫಲಾನಿಭವಿಗಳಾಗಿರುತ್ತಾರೆ."   

"ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ಹಾಗೂ ಸ್ವಾವಲಂಬನೆಯ ದುಡಿಮೆಗಾಗಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ರೂಪಿಸಲಾಗಿದ್ದು, ರಾಜ್ಯದ 10 ಸಾವಿರ ಸ್ತ್ರೀ ಶಕ್ತಿ ಸಂಘಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹50 ಸಾವಿರ ಜಮೆ ಮಾಡಲಾಗಿದ್ದು, ಇನ್ನೊಂದು ಕಂತಿನಲ್ಲಿ ಪುನಃ ₹50 ಸಾವಿರ ಜಮೆ ಮಾಡಲಾಗುವುದು." 

"ದೃಢವಾದ ಆತ್ಮವಿಶ್ವಾಸ, ಛಲ ಹಾಗೂ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ರಾಜ್ಯದ ಯುವಶಕ್ತಿಗೆ ಅಸಾಧ್ಯವಾದುದನ್ನು ಸಾಧಿಸಲು, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಹೆಸರಿನಲ್ಲಿ, ಯುವಕರ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ."  

ಇದನ್ನೂ ಓದಿ-ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀ ವಿಧಿವಶ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News