ಸಿಎಂರಿಂದ ಇಂದು ಅಂಬೇಡ್ಕರ್ ಅಮೃತ ಶಿಲೆ ಪ್ರತಿಮೆ ಸ್ಥಾಪನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಮೃತ ಶಿಲೆ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ಟೌನ್ ಹಾಲ್ ಮುಂದೆ ಲೋಕಾರ್ಪಣೆ ಮಾಡಲಿದ್ದಾರೆ. 20 ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಮತ್ತು  ವಿ. ಶ್ರಿನಿವಾಸ ಪ್ರಸಾದ್ ಈ ಕಾಮಗಾರಿಗೆ ಚಾಲನೆ ನೀಡಿದ್ದರು.

Last Updated : Aug 29, 2017, 12:20 PM IST
ಸಿಎಂರಿಂದ ಇಂದು ಅಂಬೇಡ್ಕರ್ ಅಮೃತ ಶಿಲೆ ಪ್ರತಿಮೆ ಸ್ಥಾಪನೆ  title=

ಮೈಸೂರು ಆ.29: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಮೃತ ಶಿಲೆ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ಟೌನ್ ಹಾಲ್ ಮುಂದೆ ಲೋಕಾರ್ಪಣೆ ಮಾಡಲಿದ್ದಾರೆ. 20 ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಮತ್ತು  ವಿ. ಶ್ರಿನಿವಾಸ ಪ್ರಸಾದ್ ಈ ಕಾಮಗಾರಿಗೆ ಚಾಲನೆ ನೀಡಿದ್ದರು.

ಸುಮಾರು 60 ಲಕ್ಷ ವೆಚ್ಚದಲ್ಲಿ ಮೈಸೂರಿನ ಅರುಣ್ ಎಂಬ ಕಲಾವಿದ 9 ಅಡಿಯ ಅಂಬೇಡ್ಕರ್ ಪ್ರತಿಮೆಯನ್ನು ಸುಂದರವಾಗಿ ಕೆತ್ತಿದ್ದಾರೆ. ಒಟ್ಟು 6 ಕೋಟಿ ರೂ ಹಣದಲ್ಲಿ ಪ್ರತಿಮೆಯನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಸರ್ಕಾರ ಎಲ್ ಇಡಿ ಲೈಟ್ ಮತ್ತು ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
 
ಸಮಾನತೆಯ ಸಂಕೇತವಾಗಿರುವ ಅಂಬೇಡ್ಕರ್ ಅವರ ವಿಗ್ರಹವನ್ನು ಅನಾವರಣ ಗೊಳಿಸುವುದರ ಹಿಂದೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ದಲಿತರ ಮತ ಸೆಳೆಯುವ ಉದ್ದೇಶವಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಮಹದೇವಪ್ಪ, ಹಿಂದುಳಿದ ವರ್ಗಗಳ ಪ್ರಗತಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸ್ವಾತಂತ್ರ್ಯ, ಸಮಾನತೆಯ ಸಂಕೇತವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ರಾಜ್ಯಕ್ಕಿರುವ ಆಸಕ್ತಿ ಅವರ ಪ್ರತಿಮೆಯ ಅನಾವರಣಕ್ಕೆ ಕಾರಣ ಎಂದು ತಿಳಿಸಿದ್ದಾರೆ.

Trending News