ಬೆಂಗಳೂರು: ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸಂಘ ಪರಿವಾರದ ಬಿಜೆಪಿಯ ಒಬ್ಬ ವ್ಯಕ್ತಿಯನ್ನು ತೋರಿಸಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ನಂಜನಗೂಡಿನಲ್ಲಿ ನಡೆದ ಬೃಹತ್ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ʼಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇವೆಂದು ಪ್ರಧಾನಿ ಮೋದಿಯವರು ಗುರುವಾರ ಭಾಷಣ ಮಾಡಿದ್ದಾರೆ. ಆದರೆ ದೇಶದಲ್ಲಿದ್ದ ಭ್ರಷ್ಟರೆಲ್ಲಾ ಈಗ ಯಾವ ಪಕ್ಷದಲ್ಲಿದ್ದಾರೆ ಮೋದಿಯವರೇ?ʼ ಎಂದು ಪ್ರಶ್ನಿಸಿದ್ದಾರೆ.
ಐಟಿ, ಸಿಬಿಐ ದುರುಪಯೋಗಪಡೆಸಿಕೊಂಡು ಇಬ್ಬರು ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸುರೇನ್ ಅವರನ್ನು ಜೈಲಿಗೆ ಕಳುಹಿಸಿದ ಮೋದಿಯವರೇ BJP ಸಂಗ್ರಹಿಸಿದ ₹7,600 ಕೋಟಿ ಹಣಕ್ಕೆ ಒಂದು ಪೈಸೆ ತೆರಿಗೆ ಕಟ್ಟಿಲ್ಲವಲ್ಲಾ ಈ ಹಗರಣಕ್ಕಾಗಿ ಯಾರನ್ನು ಜೈಲಿಗೆ ಕಳುಹಿಸಬೇಕು? ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ನಂಜನಗೂಡಿನಲ್ಲಿ ನಡೆದ ಬೃಹತ್ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮೋದಿಯವರು ನೆನ್ನೆ ಭಾಷಣ ಮಾಡಿದ್ದಾರೆ. ಆದರೆ ದೇಶದಲ್ಲಿದ್ದ ಭ್ರಷ್ಟರೆಲ್ಲಾ ಈಗ ಯಾವ ಪಕ್ಷದಲ್ಲಿದ್ದಾರೆ ಮೋದಿಯವರೇ?
ಐಟಿ, ಸಿಬಿಐ ದುರುಪಯೋಗ ಪಡೆಸಿಕೊಂಡು ಇಬ್ಬರು… pic.twitter.com/tcJTMNhTVb
— Siddaramaiah (@siddaramaiah) April 12, 2024
ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ : ಪ್ರಹ್ಲಾದ ಜೋಶಿ ಸವಾಲು
ʼಪ್ರಧಾನಿ ಮೋದಿ ಅವರಾಗಲೀ, ಬಿಜೆಪಿಯವರಾಗಲೀ ಇವತ್ತಿನವರೆಗೆ ಯುವಕರು, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾಗಿ ಒಂದೇ ಒಂದು ಸರಿಯಾದ ಕಾರ್ಯಕ್ರಮ ಜಾರಿ ಮಾಡಲಿಲ್ಲ. ಇದೇನಾ ಅಚ್ಛೆ ದಿನ್? ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ ಮೋದಿಯವರೇ? ಇದಾ ನಿಮ್ಮ ಅಭಿವೃದ್ಧಿ?ʼ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಧಾನಿ @narendramodi ಅವರಾಗಲೀ, @BJP4India ಪಕ್ಷದವರಾಗಲೀ ಇವತ್ತಿನವರೆಗೆ ಯುವಕರು, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾಗಿ ಒಂದೇ ಒಂದು ಸರಿಯಾದ ಕಾರ್ಯಕ್ರಮ ಜಾರಿ ಮಾಡಲಿಲ್ಲ. ಇದೇನಾ ಅಚ್ಛೆ ದಿನ್?
ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ…— Siddaramaiah (@siddaramaiah) April 12, 2024
ʼರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸಂಘ ಪರಿವಾರದ, ಬಿಜೆಪಿಯ ಒಬ್ಬ ವ್ಯಕ್ತಿಯನ್ನು ತೋರಿಸಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ದೇಶಕ್ಕಾಗಿ ಏನೇನೂ ಮಾಡದವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾ?ʼ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಬಿಜೆಪಿಯವರು ಕತ್ರಿ ಹಾಕೋದ್ರಲ್ಲಿ ನಿಸ್ಸೀಮರು. ಬಿಜೆಪಿಗೆ ಓಟು ಹಾಕುವ ಬಡವರೂ ಸೇರಿ ಇಡೀ ರಾಜ್ಯದ ಬಡವರು ಹೊಟ್ಟೆ ತುಂಬ ಊಟ ಮಾಡಲಿ ಅಂತಾ ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 5 ಕೆಜಿ ಅಕ್ಕಿ ಕೊಟ್ರೆ, ಈ ಬಿಜೆಪಿಯವರು ಬಂದು ಕತ್ತರಿ ಹಾಕಿಬಿಟ್ಟರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದು ೧೦ ಕೆಜಿ ಅಕ್ಕಿ ಕೊಡ್ತಾ ಇದೀವಿ. ಈ ಕಾರ್ಯಕ್ರಮ ದೇಶದ ಬೇರೆ ರಾಜ್ಯದಲ್ಲಿ ಇದ್ದರೆ ತೋರಿಸಲಿ. ಬಿಜೆಪಿ-ಜೆಡಿಎಸ್ ಇಬ್ಬರಿಗೂ ಜನಪರವಾದ ಸಿದ್ಧಾಂತ ಮತ್ತು ಬದ್ಧತೆ ಇಲ್ಲದಿರುವುದರಿಂದ ನಾಡಿನ ಜನತೆ ಎರಡೂ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡುತ್ತೇನೆʼ ಅಂತಾ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸಂಘ ಪರಿವಾರದ, @BJP4India ಪಕ್ಷದ ಒಬ್ಬ ವ್ಯಕ್ತಿಯನ್ನು ತೋರಿಸಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ.
ದೇಶಕ್ಕಾಗಿ ಏನೇನೂ ಮಾಡದವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾ? 3/4…
— Siddaramaiah (@siddaramaiah) April 12, 2024
ಬಿಜೆಪಿಯವರು ಕತ್ರಿ ಹಾಕೋದ್ರಲ್ಲಿ ನಿಸ್ಸೀಮರು. @BJP4Karnataka ಪಕ್ಷಕ್ಕೆ ಓಟು ಹಾಕುವ ಬಡವರೂ ಸೇರಿ ಇಡೀ ರಾಜ್ಯದ ಬಡವರು ಹೊಟ್ಟೆ ತುಂಬ ಊಟ ಮಾಡಲಿ ಅಂತ ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 5 ಕೆ.ಜಿ ಅಕ್ಕಿ ಕೊಟ್ರೆ, ಈ ಬಿಜೆಪಿಯವರು ಬಂದು ಕತ್ತರಿ ಹಾಕಿಬಿಟ್ಟರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದು ಹತ್ತು ಕೆಜಿ ಅಕ್ಕಿ ಕೊಡ್ತಾ ಇದೀವಿ.…
— Siddaramaiah (@siddaramaiah) April 12, 2024
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಕೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.