ಶೀಘ್ರದಲ್ಲೇ ಅಪಾಯದಲ್ಲಿರುವ ಕಟ್ಟಡಗಳ ತೆರವು: ಬಿಬಿಎಂಪಿ ಆಯುಕ್ತ

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಅಪಾಯದಂಚಿನಲ್ಲಿರುವ ಕಟ್ಟಡಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

Written by - Manjunath Hosahalli | Edited by - Chetana Devarmani | Last Updated : May 9, 2022, 05:33 PM IST
  • ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ
  • ಶೀಘ್ರದಲ್ಲೇ ಅಪಾಯದಲ್ಲಿರುವ ಕಟ್ಟಡಗಳ ತೆರವು
  • ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ
ಶೀಘ್ರದಲ್ಲೇ ಅಪಾಯದಲ್ಲಿರುವ ಕಟ್ಟಡಗಳ ತೆರವು: ಬಿಬಿಎಂಪಿ ಆಯುಕ್ತ  title=
ತುಷಾರ್ ಗಿರಿನಾಥ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಅಪಾಯದಂಚಿನಲ್ಲಿರುವ ಕಟ್ಟಡಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಈಗಾಗಲೇ ಕಟ್ಟಡ ತೆರವು ಸಂಬಂಧ ಸಮೀಕ್ಷೆ, ಗುರುತು ಮಾಡುವ ಪ್ರಕ್ರಿಯೆ ನಡೆದಿದೆ. ಹೀಗಾಗಿ, ಮುಂದಿನ ಶನಿವಾರ ತೆರವು ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದರು.

ಇದನ್ನೂ ಓದಿ: ಆಝಾನ್ ವಿರುದ್ಧ ಸುಪ್ರಭಾತ ಅಭಿಯಾನ : 'ಕರ್ನಾಟಕ ಸರ್ಕಾರ ಸುದೀರ್ಘ ನಿದ್ರೆಯಲ್ಲಿದೆ'

ಬಹಳ ಹಳೆಯ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗ್ತಿದೆ. ಅದೇ ರೀತಿ, ಕಳಪೆ‌ ಕಾಮಗಾರಿ, ಗುಣಮಟ್ಟ ತಗ್ಗಿರುವ, ದೊಡ್ಡ ಎತ್ತರದ ಕಟ್ಟಡಗಳು ಇವೆ. ಅವುಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ. ಮಳೆಗಾಲದ ಮುನ್ನಚ್ಚರಿಕೆ ವಿಚಾರ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ.‌ ಅಪಾಯಕಾರಿ ಪ್ರದೇಶ, ಮರ ಸೇರಿದಂತೆ ಇನ್ನಿತರ ಮಾಹಿತಿಯ ಪಟ್ಟಿ ಸಿದ್ಧ ಮಾಡಲಾಗುತ್ತದೆ ಎಂದು ಹೇಳಿದರು.

ಅಪಾಯಕಾರಿ ಮರಗಳ ಬಗ್ಗೆ ಜನರೇ ಮಾಹಿತಿ ನೀಡಬಹುದು. ಅಪಾಯಕಾರಿ ಮರಗಳ ಮಾಹಿತಿ ಕೊಡಿ ಎಂದು ನಾಗರಿಕರಿಗೆ ನೇರ ಅವಕಾಶ ನೀಡಲಾಗಿದ್ದು, ಬಿಬಿಎಂಪಿ ಸಹಾಯ ಆ್ಯಪ್ ನೇ ಬಳಸಿಕೊಳ್ಳಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ, ನಾಗರಿಕರು ನೇರವಾಗಿ ಬಿಬಿಎಂಪಿ ಗೆ ದೂರುಗಳನ್ನು ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ವಲಯ ವಿಶೇಷ ಆಯುಕ್ತರಿಗೆ ವಿಶೇಷಾಧಿಕಾರ: 

ಬಿಬಿಎಂಪಿ ಅಧಿಕಾರ ವಿಕೇಂದ್ರಿಕರಣ ಸಂಬಂಧ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲ್ಲಾ ವಲಯ ವಿಶೇಷ ಆಯುಕ್ತರಿಗೆ ವಿಶೇಷ ಅಧಿಕಾರ ನೀಡಿದರು. ನೇಮಕಾತಿಯಾಗಿರುವ ವಲಯಗಳಲ್ಲಿ ಆಗು ಹೋಗು ಕುಂದು ಕೊರತೆ ಗಳಿಗೆ ಸ್ಪಂದಿಸಬೇಕು. ಬೆಳಗ್ಗೆ 8 ರಿಂದಲೇ ಪ್ರದಕ್ಷಿಣೆ ಹಾಕಬೇಕು. 10 ಗಂಟೆಯಿಂದ 5 ಗಂಟೆವರೆಗೂ ವಲಯ ಕಚೇರಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಹಾಜರಿರಬೇಕು ಎಂದು ನಗರದ ಎಲ್ಲಾ ವಲಯದ   ವಿಶೇಷ ಆಯುಕ್ತರುಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತಷ್ಟು ಏರಿಕೆ

ಪ್ರತಿದಿನ ಒಬ್ಬರು ಮಾಧ್ಯಮದ ಜೊತೆ ಮಾತನಾಡಿ, ಜಂಟಿ ಆಯುಕ್ತರು ಮುಖ್ಯ ಅಭಿಯಂತರರಿಗೆ ಮಾಹಿತಿ ಕೊಡಬೇಕು. ಆಯುಕ್ತರ ಆಡಳಿತ ನಿರ್ಧಾರಕ್ಕೆ ಸೀಮಿತ, ಎಲ್ಲ ಅಯುಕ್ತರು ವಾರದ ಪ್ರತಿದಿನ ಒಬ್ಬೊಬ್ಬರಂತೆ ಮಾಧ್ಯಮದ ಜತೆ ಮಾತನಾಡಬೇಕು. ಅವರಿಗೆ ಸೂಕ್ತವಾದ ಮಾಹಿತಿ ನೀಡಬೇಕೆಂದು ಉಲ್ಲೇಖಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News