ಚನ್ನಪಟ್ಟಣ ಉಪಸಮರ : ಡಿಕೆ ಪ್ಲಾನ್ ಗೆ ಎಚ್‌ಡಿ‌ಕೆ ಕೌಂಟರ್

ಸಿಎಂ ಆಗಿದ್ದಾಗ ರಾಜ್ಯದಲ್ಲಿ ಅಪಾರ ಖ್ಯಾತಿ ತಂದುಕೊಟ್ಟಿದ್ದ ಜನತಾ ದರ್ಶನವನ್ನು ಕೇಂದ್ರ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ರಾಜ್ಯದಲ್ಲಿ ಚಾಲನೆ ನೀಡಲಿದ್ದಾರೆ. 

Written by - Prashobh Devanahalli | Last Updated : Jul 4, 2024, 10:49 AM IST
  • ಜುಲೈ 5ರ ಬೆಳಗ್ಗೆ 10 ಗಂಟೆಗೆ ಜನತಾ ದರ್ಶನ ಆರಂಭ ಆಗಲಿದೆ.
  • ಆ ಮೂಲಕ ಮಂಡ್ಯ ಜನರ ಸಮಸ್ಯೆ ಆಲಿಸುವ ಎಚ್‌ಡಿ‌ಕೆ ಜನರಿಗೆ ಅಲ್ಲೆ ಪರಿಹಾರ ಸೂಚನೆ ನೀಡಲು ತಯಾರಿ ನಡೆಸಿದ್ದಾರೆ.
  • ಜನತಾ ದರ್ಶನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಚನ್ನಪಟ್ಟಣ ಉಪಸಮರ : ಡಿಕೆ ಪ್ಲಾನ್ ಗೆ  ಎಚ್‌ಡಿ‌ಕೆ ಕೌಂಟರ್  title=

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಜನತಾ ದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಅದರಲ್ಲೂ ತಮ್ಮನ ಕೇಂದ್ರದಲ್ಲಿ ಉನ್ನತ ಹುದ್ದೆ ಕೂರಿಸಿರುವ ಸಕ್ಕರೆ ನಾಡು ಮಂಡ್ಯ, ರೇಷ್ಮೆ ನಾಡು ರಾಮನಗರ, ಚನ್ನಪಟ್ಟಣಗಳ ಜನತಾ ದರ್ಶನ ಮಾಡುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಗೆ ಟಕ್ಕರ್ ನೀಡೋಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಸಿಎಂ ಆಗಿದ್ದಾಗ ರಾಜ್ಯದಲ್ಲಿ ಅಪಾರ ಖ್ಯಾತಿ ತಂದುಕೊಟ್ಟಿದ್ದ ಜನತಾ ದರ್ಶನವನ್ನು ಕೇಂದ್ರ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ (Union Minister HD Kumaraswamy) ಮತ್ತೆ ರಾಜ್ಯದಲ್ಲಿ ಚಾಲನೆ ನೀಡಲಿದ್ದಾರೆ. ಇದೇ 5 ರಂದು ಸ್ವಕ್ಷೇತ್ರ ಸಕ್ಕರೆನಾಡು ಮಂಡ್ಯ ಕಣದಲ್ಲಿ ಅಧಿಕೃತವಾಗಿ ಜನತಾ ದರ್ಶನ ಚಾಲನೆ ನೀಡಲಿದ್ದಾರೆ. ಆ ಮೂಲಕ ದಶಕಗಳ ನಂತರ ಮತ್ತೆ ಇಮೇಜ್ ಗೆ ಮತ್ತೆ ಬೆಳವಣಿಗೆ ರಣತಂತ್ರವನ್ನ ಎಚ್‌ಡಿ‌ಕೆ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ- ಕರ್ನಾಟಕಕ್ಕೆ ಶೀಘ್ರದಲ್ಲೇ ನೂತನ ಮುಖ್ಯಮಂತ್ರಿ !?

ಜುಲೈ 5ರ ಬೆಳಗ್ಗೆ 10 ಗಂಟೆಗೆ  ಜನತಾ ದರ್ಶನ ಆರಂಭ ಆಗಲಿದೆ. ಆ ಮೂಲಕ ಮಂಡ್ಯ ಜನರ ಸಮಸ್ಯೆ ಆಲಿಸುವ ಎಚ್‌ಡಿ‌ಕೆ (HDK) ಜನರಿಗೆ ಅಲ್ಲೆ ಪರಿಹಾರ ಸೂಚನೆ ನೀಡಲು ತಯಾರಿ ನಡೆಸಿದ್ದಾರೆ. ಜನತಾ ದರ್ಶನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಇನ್ನೂ ಚನ್ನಪಟ್ಟಣ ಉಪಚುನಾವಣೆ ಮೇಲೆ ಕೈ ದಳ ನಾಯಕರ ಕಣ್ಣಿಟ್ಟಿದ್ದು ಈಗಾಗಲೇ ಡಿಸಿಎಂ ಡಿ‌ಕೆ ಶಿವಕುಮಾರ್ (DK Shivakumar) ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ನೀಡಲು ಭರ್ಜರಿ ಪ್ಲಾನ್ ಮಾಡಿಕೊಂಡಿರುವ ಕುಮಾರಸ್ವಾಮಿ ಇದೇ ಭಾನುವಾರ ರಾಮನಗರ- ಚನ್ನಪಟ್ಟಣದಲ್ಲಿಯೂ ಜನತಾ ದರ್ಶನ ಮಾಡೋಕೆ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಆ ಮೂಲಕ ಚನ್ನಪಟ್ಟಣ ಉಪಚುನಾವಣೆ ಗೆಲ್ಲಲು ಡಿಕೆ ಬ್ರದರ್ಸ್ ರಣವ್ಯೂಹಕ್ಕೆ ಚಕ್ರವ್ಯೂಹ ಹೂಡಲು ದಳಪತಿ ಸದ್ದಿಲ್ಲದೆ ತಯಾರಿ ನಡೆಸಿಕೊಂಡಿದ್ದಾರೆ. ಆ ಮೂಲಕ ರಾಮನಗರ ಚನ್ನಪಟ್ಟಣ ಕಾರ್ಯಕರ್ತರು,ಮುಖಂಡರು, ಮತದಾರರ ವಿಶ್ವಾಸ ಗಿಟ್ಟಿಸಿಕೊಳ್ಳು ಪ್ರಯತ್ನ ಮಾಡಲಿದ್ದಾರೆ.

ಇದನ್ನೂ ಓದಿ- ಚನ್ನಪಟ್ಟಣಕ್ಕೆ ನಾನೇ ಸೇವಕ, ನಾನೇ ನಿಮ್ಮ ಮನೆ ಮಗ, ನಾನೇ ಮಂತ್ರಿ, ನಾನೇ ಡಿಸಿಎಂ : ಡಿಸಿಎಂ ಡಿ.ಕೆ. ಶಿವಕುಮಾರ್

ಇನ್ನು ಶನಿವಾರವು ಸಹ ಬೆಂಗಳೂರಿನಲ್ಲಿರಲಿರುವ ಜೆಡಿಎಸ್ ಕಚೇರಿ ಜೆಪಿಭವನಕ್ಕೆ ಭೇಟಿ ನೀಡುವ ಎಚ್‌ಡಿ ಕುಮಾರಸ್ವಾಮಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಇಲ್ಲಿಯೂ ಜನ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ. ಒಟ್ನಲ್ಲಿ ಕೇಂದ್ರ ಸಚಿವರಾದ ಬೆನ್ನಲ್ಲೇ ಕುಮಾರಸ್ವಾಮಿ ಅಲರ್ಟ್ ಆಗಿದ್ದ ತಮ್ಮ ಅಧಿಕಾರ ಜೊತೆಗೆ ಪಕ್ಷ ಸಂಘಟನೆಗೂ ಒತ್ತು ನೀಡಲು  ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News