ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ಗಳು ಪಡೆಯುತ್ತಿದೆ. ಇದೀಗ ನಾಳೆ ಸಿ.ಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ ಎಂದು ಆಕೆಯ ಪರ ವಕೀಲ ಕೆಎನ್ ಜಗದೀಶ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.
ಸಿಡಿ ಲೇಡಿ ಪೋಷಕರು ತಮ್ಮ ಮಗಳ ಪರವಾಗಿ ನಿಲ್ಲಬೇಕು. ಮಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಆಕೆ ಪರವಾಗಿ ನಿಲ್ಲಬೇಕು. ನಾವು ಅಂದುಕೊಂಡಂತೆ ಆದರೆ ನಾಳೆ ಆಕೆ ಕೋರ್ಟ್(Court)ಗೆ ಹಾಜರಾಗಲಿದ್ದಾರೆ ಎಂದು ಜಗದೀಶ್ ಹೇಳಿದ್ರು. ಈ ಪ್ರಕರಣ ದಾಖಲಾದ ನಂತರ ನಿನ್ನೆ ಪೋಷಕರಿಗೆ ಸೆಕ್ಯೂರಿಟಿ ಕೊಡಿ ಅಂದ್ರೆ ಯಾರನ್ನೂ ಬೇಟಿ ಮಾಡದೇ ಎಸ್ಐಟಿ ಪೊಲೀಸರು ವಾಪಸ್ ಕಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಯುತವಾದ ತನಿಖೆ ಆಗಿಲ್ಲ. ಪೊಲೀಸರು ರಾಜಕಾರಣಿಗಳಿಗೆ ತಮ್ಮ ತಲೆ ಬಗ್ಗಿಸಿದ್ದಾರೆ ಅನಿಸ್ತಿದೆ.
KPCC Leader: ರಮೇಶ್ ಜಾರಕಿಹೊಳಿ ಬಳಿ ಸಿಎಂ ಯಡಿಯೂರಪ್ಪ ಸೀಡಿ'
ಅತ್ಯಾಚಾರದ ಪ್ರಕರಣ ಹಾಗೂ ಸುಲಿಗೆ ಕೇಸ್ ಎಫ್ಐಆರ್ ಇದೆ. ಎರಡು ಎಫ್ಐಆರ್(FIR) ಒಂದೇ ಇನ್ವೆಸ್ಟಿಗೇಶನ್ ಏಜನ್ಸಿ ಮಾಡಿದಾಗ ಎಲ್ಲೋ ಒಂದು ಕಡೆ ತಾರತಮ್ಯ ಆಗಬಹುದು. ಸ್ಟೇಟ್ ಮೆಂಟ್ ರೆಕಾರ್ಡ್ ಮಾಡಿ ತದನಂತರ ಪೊಲೀಸರಿಗೆ ಪ್ರೊಡ್ಯೂಸ್ ಮಾಡೋ ಪ್ಲಾನ್ ಮಾಡ್ತಿದ್ದೀವಿ. ಶನಿವಾರ, ಭಾನುವಾರ ಕೋರ್ಟ್ ರಜೆ ಇದೆ. ಸೋಮವಾರ ನಾಳೆ ಕೋರ್ಟಿನ ಮುಂದೆ ಹಾಜರಾಗೋ ಸಾಧ್ಯತೆ ಹೆಚ್ಚಾಗಿದೆ. ಯುವತಿಯೇ ವಿಡಿಯೋದಲ್ಲಿ ಹೇಳೋ ಪ್ರಕಾರ ಪೋಷಕರ ಮೇಲೆ ಪ್ರಭಾವಿ ವ್ಯಕ್ತಿ ಒತ್ತಡ ಹೇರಿ ಸ್ಟೇಟ್ ಮೆಂಟ್ ಕೊಡಿಸಿರೋ ಸಾಧ್ಯತೆಯೂ ತುಂಬಾ ಇದೆ.
K Sudhakar: 1 ರಿಂದ 9ನೇ ತರಗತಿ ಪರೀಕ್ಷೆ ರದ್ದು; ' ಶೀಘ್ರದಲ್ಲಿ ರಾಜ್ಯ ಸರ್ಕಾರದಿಂದ ನಿರ್ಧಾರ'!
ಒಂದು ವೇಳೆ ಇದು ನಿಜವಾದ್ರೂ ಈ ಪ್ರಕರಣ(Case)ದಲ್ಲಿ ಹೆಣ್ಣು ಮಗಳ ಹೇಳಿಕೆ ತುಂಬಾ ಇಂಪಾರ್ಟೆಂಟ್ ಆಗುತ್ತೆ. ನೊಂದಿರೋಳು ಹೆಣ್ಣು ಮಗಳು ಆಕೆ ಸಹಾಯ ಬೇಡ್ತಿರೋದು ಸಮಾಜಕ್ಕೆ. ತಂದೆ ತಾಯಿ ಸಂತ್ರಸ್ತೆ ಮಗಳ ಪರವಾಗಿ ನಿಲ್ಲಬೇಕು. ಜಾತಿ ಬಣ್ಣ, ರಾಜಕೀಯ ಬಣ್ಣ ಆಗ್ತಿದೆ ಆದಷ್ಟು ಬೇಗ ನ್ಯಾಯಾಲಯದ ಮುಂದೆ ಹಾಜರುಪಡಿಸೋದು ತುಂಬಾ ಇಂಪಾರ್ಟೆಂಟ್ ಆಗಿದೆ ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರಿತ ಜಾತಿಗಣತಿ ವರದಿ ಬಿಡುಗಡೆಗೆ ಸಿದ್ಧರಾಮಯ್ಯ ಆಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.