ಸರ್ಕಾರದ ಹೆಸರಲ್ಲಿ ನಿರಪೇಕ್ಷಣಾ ಪತ್ರ ನೀಡಿ ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆ

ರಾಜ್ಯ ಸರ್ಕಾರದ ಹೆಸರಲ್ಲಿ ನಕಲಿ ನಿರಪೇಕ್ಷಣಾ ಪತ್ರ ಸಲ್ಲಿಸಿ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿದ್ದ ಆರೋಪದಡಿ ಸಾಂದೀಪಿನಿ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಮುಖ್ಯಸ್ಥ ಲೋಕೇಶ್ ತಾಳೆಕಟ್ಟಿಯನ್ನ ವಿಧಾನಸೌಧ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Written by - VISHWANATH HARIHARA | Last Updated : Feb 1, 2023, 01:38 PM IST
  • ಸರ್ಕಾರದ ಹೆಸರಲ್ಲಿ ನಿರಪೇಕ್ಷಣಾ ಪತ್ರ ನೀಡಿ ಸಿಬಿಎಸ್‌ಸಿ ಪಠ್ಯಕ್ರಮ
  • ಶಾಲೆಯ ಮುಖ್ಯಸ್ಥ ಲೋಕೇಶ್ ತಾಳೆಕಟ್ಟಿಯನ್ನ ವಿಧಾನಸೌಧ ಠಾಣಾ ಪೊಲೀಸರು ವಿಚಾರಣೆ
  • ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್ ಹೊಸ್ಮಠ ವಿಧಾನಸೌಧ ಠಾಣೆಗೆ ದೂರು
ಸರ್ಕಾರದ ಹೆಸರಲ್ಲಿ ನಿರಪೇಕ್ಷಣಾ ಪತ್ರ ನೀಡಿ ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆ  title=

ಬೆಂಗಳೂರು : ರಾಜ್ಯ ಸರ್ಕಾರದ ಹೆಸರಲ್ಲಿ ನಕಲಿ ನಿರಪೇಕ್ಷಣಾ ಪತ್ರ ಸಲ್ಲಿಸಿ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿದ್ದ ಆರೋಪದಡಿ ಸಾಂದೀಪಿನಿ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಮುಖ್ಯಸ್ಥ ಲೋಕೇಶ್ ತಾಳೆಕಟ್ಟಿಯನ್ನ ವಿಧಾನಸೌಧ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ರಾಜ್ಯ ಸರ್ಕಾರದ ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್ ಹೊಸ್ಮಠ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ಲೋಕೇಶ್ ತಾಳಿಕಟ್ಟಿಯನ್ನ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಸರಿಯಾಗಿ ಡಿ.ಟಿ.ಪಿ ಕೋರ್ಸ್ ಕಲಿಸದ ಕಂಪ್ಯೂಟರ್ ಸಂಸ್ಥೆಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟೆಯ ಸಾಂದೀಪಿನಿ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಮುಖ್ಯಸ್ಥರಾಗಿರುವ ಲೋಕೇಶ್ ತಾಳಿಕಟ್ಟಿ, ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆಗೆ ರಾಜ್ಯ ಸರ್ಕಾರ ನೀಡಬೇಕಿರುವ ನಿರಪೇಕ್ಷಣಾ ಪತ್ರವನ್ನ ಫೇಕ್ ಮಾಡಿರುವ  ಆರೋಪವಿದೆ. ನಕಲಿ ನಿರಪೇಕ್ಷಣಾ ಪತ್ರವನ್ನ ದೆಹಲಿಯ ಸಿಬಿಎಸ್‌ಸಿ ಬೋರ್ಡ್ ಗೆ ಸಲ್ಲಿಸಿ ಶಾಲೆ ನಡೆಸುತ್ತಿರುವುದರಿಂದ ಕಾನೂನು‌ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್ ಹೊಸ್ಮಠ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: “ಕೃಷಿ ಮತ್ತು ಕೃಷಿಕರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ; ಬಜೆಟ್ನಲ್ಲಿ ರೈತರಿಗೆ ವಿಶೇಷ ಆಧ್ಯತೆ”

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲೋಕೇಶ್ ತಾಳಿಕಟ್ಟಿಗೆ ನೋಟಿಸ್ ನೀಡಿ ವಿಧಾನಸೌಧ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ‌ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News