ಮೈತ್ರಿ ಸರ್ಕಾರದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ

ಮೊದಲಿಗೆ ಜೆಡಿಎಸ್​ನ ಎಚ್​.ಡಿ. ರೇವಣ್ಣ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕಾಂಗ್ರೆಸಿನ ಆರ್.ವಿ. ದೇಶಪಾಂಡೆ ಪ್ರಮಾಣವಚನ ಸ್ವೀಕರಿಸಿದರು.

Last Updated : Jun 6, 2018, 04:19 PM IST
ಮೈತ್ರಿ ಸರ್ಕಾರದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ title=
Pic: ANI

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಸಮಾರಂಭ ರಾಜಭವನದಲ್ಲಿ ನಡೆಯಿತು. ಮೊದಲ ಹಂತದಲ್ಲಿ ಒಟ್ಟು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಕಾಂಗ್ರೆಸ್ ನಿಂದ 15 ಮತ್ತು ಜೆಡಿಎಸ್ ನಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 

ಮೊದಲಿಗೆ ಜೆಡಿಎಸ್​ನ ಎಚ್​.ಡಿ. ರೇವಣ್ಣ ಪ್ರಮಾಣ ವಚನ ಸ್ವೀಕರಿಸಿದರು. ಎರಡನೆಯವರಾಗಿ ಕಾಂಗ್ರೆಸ್​ನ ಆರ್​. ವಿ. ದೇಶಪಾಂಡೆ, ಮೂರನೆಯವರಾಗಿ ಜೆಡಿಎಸ್​ನ ಬಂಡೆಪ್ಪ ಕಾಶೆಂಪುರ, ನಾಲ್ಕನೆಯವರಾಗಿ ಕಾಂಗ್ರೆಸ್​ನ ಡಿ.ಕೆ. ಶಿವಕುಮಾರ್​ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರ ಪಟ್ಟಿ
1. ಎಚ್‌.ಡಿ.ರೇವಣ್ಣ  (ಜೆಡಿಎಸ್)- ಹೊಳೆನರಸೀಪುರ ಕ್ಷೇತ್ರ
2. ಆರ್‌.ವಿ.ದೇಶ್‌ಪಾಂಡೆ (ಕಾಂಗ್ರೆಸ್‌)- ಹಳಿಯಾಳ ಕ್ಷೇತ್ರ
3. ಬಂಡೆಪ್ಪ ಕಾಶಂಪೂರ್‌ (ಜೆಡಿಎಸ್‌)- ಬೀದರ್ ದಕ್ಷಿಣ ಕ್ಷೇತ್ರ
4. ಡಿ.ಕೆ.ಶಿವಕುಮಾರ್‌ (ಕಾಂಗ್ರೆಸ್‌)- ಕನಕಪುರ ಕ್ಷೇತ್ರ
5. ಜಿ.ಟಿ.ದೇವೇಗೌಡ (ಜೆಡಿಎಸ್‌)- ಚಾಮುಂಡೇಶ್ವರಿ ಕ್ಷೇತ್ರ
6. ಕೆ.ಜೆ.ಜಾರ್ಜ್‌ (ಕಾಂಗ್ರೆಸ್‌)- ಸರ್ವಜ್ಞನಗರ ಕ್ಷೇತ್ರ
7. ಡಿ.ಸಿ.ತಮ್ಮಣ್ಣ (ಜೆಡಿಎಸ್‌)- ಮದ್ದೂರು ಕ್ಷೇತ್ರ
8. ಕೃಷ್ಣ ಭೈರೇಗೌಡ (ಕಾಂಗ್ರೆಸ್‌)- ಬ್ಯಾಟರಾಯನ ಪುರ ಕ್ಷೇತ್ರ 
9. ಎಂ.ಸಿ.ಮನಗೂಳಿ (ಜೆಡಿಎಸ್‌)- ಸಿಂಧಗಿ ಕ್ಷೇತ್ರ
10. ಎನ್‌.ಎಚ್‌. ಶಿವಶಂಕರ್‌ರೆಡ್ಡಿ (ಕಾಂಗ್ರೆಸ್‌)- ಗೌರಿಬಿದನೂರು ಕ್ಷೇತ್ರ
11. ಎಸ್‌.ಆರ್‌. ಶ್ರೀನಿವಾಸ್‌(ಜೆಡಿಎಸ್‌)- ಗುಬ್ಬಿ ಕ್ಷೇತ್ರ
12. ರಮೇಶ್‌ ಜಾರಕೀಹೊಳಿ(ಕಾಂಗ್ರೆಸ್‌)- ಗೋಕಾಕ್ ಕ್ಷೇತ್ರ
13. ವೆಂಕಟರಾವ್‌ ನಾಡಗೌಡ (ಜೆಡಿಎಸ್‌)- ಸಿಂಧನೂರು ಕ್ಷೇತ್ರ
14.ಪ್ರಿಯಾಂಕ ಖರ್ಗೆ (ಕಾಂಗ್ರೆಸ್‌)- ಚಿತ್ತಾಪುರ ಕ್ಷೇತ್ರ
15. ಸಿ.ಎಸ್‌.ಪುಟ್ಟರಾಜು(ಜೆಡಿಎಸ್‌)- ಮೇಲುಕೋಟೆ ಕ್ಷೇತ್ರ
16.ಯು.ಟಿ. ಖಾದರ್‌ (ಕಾಂಗ್ರೆಸ್‌)- ಉಲ್ಲಾಳ ಕ್ಷೇತ್ರ
17. ಸಾ ರಾ ಮಹೇಶ್‌ (ಜೆಡಿಎಸ್‌)- ಕೆ.ಆರ್. ನಗರ ಕ್ಷೇತ್ರ
18. ಜಮೀರ್‌ ಅಹ್ಮದ್‌ ಖಾನ್‌ (ಕಾಂಗ್ರೆಸ್‌)- ಚಾಮರಾಜಪೇಟೆ ಕ್ಷೇತ್ರ
19.ಎನ್‌.ಮಹೇಶ್‌ (ಬಿಎಸ್‌ಪಿ)- ಕೊಳ್ಳೇಗಾಲ ಕ್ಷೇತ್ರ(ಜೆಡಿಎಸ್)
20.ಶಿವಾನಂದ ಪಾಟೀಲ್‌ (ಕಾಂಗ್ರೆಸ್‌)- ಬಸವನ ಬಾಗೇವಾಡಿ ಕ್ಷೇತ್ರ
21. ವೆಂಕಟರಮಣಪ್ಪ (ಕಾಂಗ್ರೆಸ್‌)- ಪಾವಗಡ ಕ್ಷೇತ್ರ
22. ರಾಜಶೇಖರ್‌ ಬಸವರಾಜ್‌ ಪಾಟೀಲ್‌ (ಕಾಂಗ್ರೆಸ್‌)- ಹುಮ್ನಾಬಾದ್ ಕ್ಷೇತ್ರ
23. ಸಿ. ಪುಟ್ಟರಂಗ ಶೆಟ್ಟಿ (ಕಾಂಗ್ರೆಸ್‌)-ಚಾಮರಾಜನಗರ ಕ್ಷೇತ್ರ
24.ಆರ್‌.ಶಂಕರ್‌ (ಪಕ್ಷೇತರ)- ರಾಣೆಬೆನ್ನೂರು ಕ್ಷೇತ್ರ(ಕಾಂಗ್ರೆಸ್)
25. ಡಾ.ಜಯಮಾಲಾ ರಾಮಚಂದ್ರ (ಕಾಂಗ್ರೆಸ್ ಪರಿಷತ್‌ ಸದಸ್ಯೆ‌)

 

Trending News