ಗುಡ್ ನ್ಯೂಸ್: ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ

ನಾಳೆ ಬೆಳಿಗ್ಗೆಯಿಂದ ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಕೆಎಸ್ಆರ್ಟಿಸಿ ಬಿಎಂಟಿಸಿ ಬಸ್ ಸಂಚಾರ  ಆರಂಭ.

Written by - Yashaswini V | Last Updated : May 18, 2020, 01:58 PM IST
ಗುಡ್ ನ್ಯೂಸ್: ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ title=

ಬೆಂಗಳೂರು: ಕೇಂದ್ರ ಸರ್ಕಾರ ನಾಲ್ಕನೇ ಹಂತದ   ಲಾಕ್‌ಡೌನ್  (Lockdown) ಜಾರಿ ಮಾಡಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ನೂತನ ಮಾರ್ಗಸೂಚಿ ಅನುಷ್ಠಾನಗೊಳಿಸುವ ವಿಷಯ ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ   ಬಿ.ಎಸ್. ಯಡಿಯೂರಪ್ಪ (BS Yediyurappa), ಬಳಿಕ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ‌ ಬಗ್ಗೆ ಮಾಹಿತಿ ನೀಡಿದರು. ಪ್ರಮುಖ ಅಂಶಗಳು ಈ ರೀತಿ ಇವೆ.

* ನಾಳೆ ಬೆಳಿಗ್ಗೆಯಿಂದ ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಬಿಎಂಟಿಸಿ (BMTC), ಕೆಎಸ್ಆರ್ ಟಿಸಿ (KSRTC) ಬಸ್ ಸಂಚಾರ  ಆರಂಭ.
* ಖಾಸಗಿ ಬಸ್ ಗಳು ಪ್ರಯಾಣ ಆರಂಭಿಸಬಹುದು ಆದರೆ 30 ಜನ ಮಾತ್ರ ಪ್ರಯಾಣ ಮಾಡಬೇಕು
* ಸಾಮಾಜಿಕ‌ಅಂತರ ಕಾಯ್ದಕೊಳ್ಳಬೇಕು. ಮಾಸ್ಕ್ ಧರಿಸುವುದು ಕಡ್ಡಾಯ
* ಅನಿವಾರ್ಯ ಬಿಟ್ಟು ಬೇರೆ ಕಾರಣಗಳಿಂದ ರಾಜ್ಯಕ್ಕೆ ಜನರ ಬರುವುದನ್ನು ಅವಕಾಶ ನೀಡಲ್ಲ.
* ರೈಲುಗಳಿಗೆ ಅಂತರ ಜಿಲ್ಲೆ ಆರಂಭಕ್ಕೆ ಒಪ್ಪಿಗೆ
* ಆಟೋ ಮತ್ತುಬಟ್ಯಾಕ್ಸಿಗಳ್ಲಿ ಡೈವರ್ ಬಿಟ್ಟು ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಡ್ರೈವರ್ ಬಿಟ್ಟು ಮೂವರು ಮಾತ್ರ ಪ್ರಯಾಣಿಸಬೇಕು
* ನಾಳೆಯಿಂದ ಮಾಲ್ ,ಸಿನಿಮಾ, ಹೋಟೇಲ್ ಬಿಟ್ಟು ,ಚಿನ್ನ ಬೆಳ್ಳಿ ಮಾರಾಟಕ್ಕೆ ಅವಕಾಶ
* ಬಸ್ ಪ್ರಯಾಣ ದರ ಹೆಚ್ಚಳ  ಮಾಡುವುದಿಲ್ಲ
* ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ಜನರನ್ನು ಕ್ವಾರಂಟೈನ್ ಮಾಡುವ ತೀರ್ಮಾನ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದು
* ಗರ್ಭಿಣಿಯರು ಮತ್ತು ಮಹಿಳೆಯರಿಗೆ ಆರೋಗ್ಯ ಚಿಕಿತ್ಸೆ ಮತ್ತು ಚಿಕಿತ್ಸೆಗೆ ಇನ್ನಷ್ಟು ಸಹಕಾರ
* ಸಲೂನ್ ಶಾಪ್ ತೆಗೆಯಬಹುದು
* ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್
* ಹೊರ ರಾಜ್ಯದಿಂದ ಬರುವವರಿಗೆ ಹಂತ ಹಂತವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ತೀರ್ಮಾನ.

ಇದಲ್ಲದೆ ಲಾಕ್ ಡೌನ್ ನಾಲ್ಕನೇ ಹಂತದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅಡಿ ಚೆರ್ಚೆ ನಡೆಸಿದ್ದೇವೆ. ಕೆಲವು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೇ 31 ರವರೆಗು ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಭದ್ರತೆ ಮತ್ತಷ್ಟು ಹೆಚ್ಚಳ ಮಾಡಲಾಗುವುದು. ಕಾನೂನು ಬಾಹಿರ ಕೆಲಸ ಮಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

 ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಯಣ್, ಲಕ್ಷ್ಮಣ್ ಸವದಿ, ಗೃಹ ಸಚಿವ ಬೊಮ್ಮಾಯಿ ಮತ್ತಿತರ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿದ್ದರು.

Trending News