Karnataka Crime : ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆ!

ವಿಷಯ ತಿಳಿದು ಸ್ಥಳಕ್ಕೆ ಬಂದ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Written by - MANU KUMAR ARYA | Last Updated : Mar 16, 2022, 08:44 PM IST
  • ಅನಾಮದೇಯ ಕಾರಿನ ಜೊತೆಗೇ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆ
  • ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ
  • ಗ್ರಾಮದ ಕೆರೆಯ ಏರಿಯ ಮೇಲೆ ಮಧ್ಯರಾತ್ರಿ 11.30 ರ ನಂತ್ರ ಘಟನೆ
Karnataka Crime : ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆ! title=

ಹಾಸನ : ಅನಾಮದೇಯ ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೆರೆಯ ಏರಿಯ ಮೇಲೆ ಮಧ್ಯರಾತ್ರಿ 11.30 ರ ನಂತ್ರ ಘಟನೆ ನಡೆದಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸಮೇತ ಕಾರು(Car) ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.‌ ಕಾರಿನ ಹಿಂಬದಿ‌ ಸೀಟ್ ನಲ್ಲಿ ವ್ಯಕ್ತಿ ಇದ್ದು, ವ್ಯಕ್ತಿಯ ಶವ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಕಂಡು ಹಿಡಿಯಲಾಗದಷ್ಟು ಸುಟ್ಟುಕರಕಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಕೂಡ್ಲಿಗಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರ ದುರ್ಮರಣ

ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೂ ಕೂಡಾ ಬಂದು ಪರಿಶೀಲನೆ ನಡೆಸಿದ್ರು.‌ ಮೆಲ್ನೋಟಕ್ಕೆ ಇದೊಂದು ಪುರುಷನ ಮೃತದೇಹವೆಂದು(Man Body) ತಿಳಿದುಬಂದಿದೆ.. ಕಾರಿನ ಆಧಾರದ ಪೊಲೀಸರು ಮೇಲೆ ಪ್ರಕರಣದ ಬೆನ್ನತ್ತಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯ ಜೊತೆಗೆ ಪ್ರಕರಣ ಭೇದಿಸಲು  ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳನ್ನು ಕಂಡು ಹಿಡಿದು ಶಿಕ್ಷೆ ಕೊಡಿಸಬೇಕೆಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News