ಪ್ರೊಟೀನ್ ಪುಡಿ ಮಾರಾಟ ಬ್ಯಾನ್ ಗೆ ಒತ್ತಾಯ; ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ ಆರೋಗ್ಯ ಇಲಾಖೆ

ಸಣ್ಣ, ದಪ್ಪ, ಬಾಡಿ ಬಿಲ್ಡ್ ಗಾಗಿ ಜಿಮ್ ಗಳಲ್ಲಿ ಈ ಪ್ರೊಟೀನ್ ಪುಡಿಯನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈ ಪ್ರೋಟೀನ್ ಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

Written by - Prashobh Devanahalli | Edited by - Yashaswini V | Last Updated : Sep 20, 2022, 01:41 PM IST
  • ಸಣ್ಣ, ದಪ್ಪ, ಬಾಡಿ ಬಿಲ್ಡ್ ಗಾಗಿ ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಬಳಕೆ
  • ಈ ಪ್ರೋಟೀನ್ ಪುಡಿಯಿಂದ ಯುವಕರ ಪ್ರಾಣಕ್ಕೇ ಕುತ್ತು
  • ಈ ಪ್ರೋಟೀನ್ ಪೌಡರ್ ಬ್ಯಾನ್ ಮಾಡಬೇಕು ಎಂದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಒತ್ತಾಯ
ಪ್ರೊಟೀನ್ ಪುಡಿ ಮಾರಾಟ ಬ್ಯಾನ್ ಗೆ ಒತ್ತಾಯ; ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ ಆರೋಗ್ಯ ಇಲಾಖೆ  title=
Protein powder ban

ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಬೊಮ್ಮನಹಳ್ಳಿಯ ಶಾಸಕ ಸತೀಶ್ ರೆಡ್ಡಿ, ದೇಹ ವಿನ್ಯಾಸಕ್ಕೆ ಜಿಮ್ ಗಳಲ್ಲಿ ಪ್ರೊಟೀನ್ ಪೌಡರ್ ನೀಡುವುದನ್ನ ಬ್ಯಾನ್ ಮಾಡಬೇಕು ಎಂದು ಒತ್ತಾಯ ಮಾಡಿದರು.

ಕಲಾಪದಲ್ಲಿ ಜಿಮ್ನಲ್ಲಿ ಪ್ರೋಟೀನ್ ಪೌಡರ್ ನೀಡುವ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಸಣ್ಣ, ದಪ್ಪ, ಬಾಡಿ ಬಿಲ್ಡ್ ಗಾಗಿ ಜಿಮ್ ಗಳಲ್ಲಿ ಈ ಪ್ರೊಟೀನ್ ಪುಡಿಯನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈ ಪ್ರೋಟೀನ್ ಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ- ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ PSI ಮರುಪರೀಕ್ಷೆ ದಿನಾಂಕ ಪ್ರಕಟ: ಡಿಜಿ ಪ್ರವೀಣ್ ಸೂದ್

ಇದೇ ವೇಳೆ ತಮ್ಮ ಕ್ಷೇತ್ರದ ಯುವಕನೊಬ್ಬನ ಬಗ್ಗೆ ಮಾಹಿತಿ ಹಂಚಿಕೊಂಡ ಶಾಸಕ ಸತೀಶ್ ರೆಡ್ಡಿ, ನನ್ನ ಕ್ಷೇತ್ರದಲ್ಲಿ ಸಂತೋಷ್ ಎಂಬ ಯುವಕನಿದ್ದ, ಈ ಪ್ರೋಟೀನ್ ಪೌಡರ್ ಬಳಕಯಿಂದಾಗಿ ಆತನ ಎಲ್ಲಾ ಅಂಗಗಳು ವಿಫಲವಾಗಿದ್ದವು. ಅವನನ್ನು ಬದುಕಿಸಿಕೊಳ್ಳಲು ಸಮಾರು 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು, ಆದರೂ ಅಂಗಾಂಗ ವೈಫಲ್ಯದಿಂದಾಗಿ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಈ ರೀತಿಯಾಗಿ ಯುವಕರ ಪ್ರಾಣಕ್ಕೆ ಕುತ್ತಾಗಿರುವ ಈ ಪ್ರೋಟೀನ್ ಪೌಡರ್ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ- ಕಲ್ಯಾಣ ಕರ್ನಾಟಕದಲ್ಲಿ ಅತಿಹೆಚ್ಚು ಶಾಲಾ ಕೊಠಡಿ ನಿರ್ಮಾಣ, ರಾಜ್ಯದ ಇತಿಹಾಸದಲ್ಲೇ ಮೊದಲು!

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಾನೂನು ‌ಸಚಿವ ಮಾಧುಸ್ವಾಮಿ, ಈ ವಿಷಯವಾಗಿ ಸ್ಟ್ರಿಕ್ಟ್ ಆರ್ಡರ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅನೌಪಚಾರಿಕವಾಗಿ ಮಾರ್ತಿದ್ರೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಅದರ ಬಗ್ಗೆ ನಮ್ಮ ಇಲಾಖೆ ಗಮನಹರಿಸಿದೆ ಎಂದು ಆಶ್ವಾಸನೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News