ಬಿಜೆಪಿ ನಾಯಕರಿಂದ 30 ಕೋಟಿ ರೂ. ಆಮಿಷ; ಶಾಸಕ ಶ್ರೀನಿವಾಸಗೌಡ

ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿದ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ.

Last Updated : Feb 10, 2019, 04:27 PM IST
ಬಿಜೆಪಿ ನಾಯಕರಿಂದ 30 ಕೋಟಿ ರೂ. ಆಮಿಷ; ಶಾಸಕ ಶ್ರೀನಿವಾಸಗೌಡ title=
Pic Courtesy: ANI

ಕೋಲಾರ: ಬಿಜೆಪಿ ನಾಯಕರು ನನಗೆ 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಕೋಲಾರದ ಜೆಡಿಎಸ್ ಶಾಸಕ  ಕೆ. ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಕೋಲಾರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಸಿ.ಎನ್. ಅಶ್ವತ್ ನಾರಾಯಣ್, ಎಸ್. ಆರ್. ವಿಶ್ವನಾಥ್ ಮತ್ತು ಸಿ.ಪಿ. ಯೋಗೇಶ್ವರ್ ಅವರು ನನಗೆ ಜೆಡಿಎಸ್ ಗೆ ರಾಜಿನಾಮೆ ಕೊಡುವಂತೆ ಒತ್ತಾಯಿಸಿ ಬೆಂಗಳೂರಿನ ನಿವಾಸದಲ್ಲಿ ಬಲವಂತವಾಗಿ 5 ಕೋಟಿ ರೂ. ಮುಂಗಡ ಹಣ ಇತ್ತು ಹೋದರು. ಉಳಿದ 25 ಕೋಟಿ ರೂ. ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರು ಮುಂಗಡವಾಗಿ ನೀಡಿದ್ದ 5 ಕೋಟಿ ರೂ. ಎರಡು ತಿಂಗಳು ಬೆಂಗಳೂರಿನ ನಿವಾಸದಲ್ಲೇ ಇತ್ತು. ಪೊಲೀಸರಿಗೆ ದೂರು ನೀಡುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದೆ, ಬಳಿಕ ಹಣವನ್ನು ಬಿಜೆಪಿಯ ಆರ್. ಅಶೋಕ್ ಅವರ ಕೈಗೆ ವಾಪಸ್ ಕೊಟ್ಟು ಕಳುಹಿಸಿದೆ ಎಂದು ಶ್ರೀನಿವಾಸ ಗೌಡ ವಿವರಿಸಿದ್ದಾರೆ.

Trending News