ಬೆಂಗಳೂರು: ನಿಮ್ಮ ಅವಧಿಯಲ್ಲೇ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಡದ್ದಾಗಿ ನಿದ್ದೆ ಮಾಡುತ್ತಿದ್ದ ನಿಮಗೀಗ ಇದ್ದಕ್ಕಿಂತೆಯೇ ರೈತರ ಮೇಲೆ ಪ್ರೇಮ ಉಕ್ಕಿದೆ ಅಲ್ಲವೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ತಿರಗೇಟು ನೀಡಿದೆ.
ಕೃಷಿ ಸಚಿವ ಬಿಸಿ ಪಾಟೀಲ್(B.C.Patil) ಅವರು ಪೊನ್ನಂಪೇಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು ನಿಜವಾದ ಹೇಡಿಗಳು ಯಾರು? ರೈತರೋ? ಅಥವಾ ರಾತ್ರೋ ರಾತ್ರಿ ಮುಂಬೈಗೆ ಹಾರಿದವರೋ? ಕೊರೊನಾ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಸರಕಾರವೋ? ಎಂದು ಕೃಷಿ ಸಚಿವ ಬಿಸಿ ಪಾಟೀಲ್ ರನ್ನು ಪ್ರಶ್ನಿಸಿತ್ತು.
ಮಾನ್ಯ @siddaramaiah,
2013-14 - 104
2014-15 - 128
2015-16 - 1483
2016-17 - 1185
2018-19 - 900ನಿಮ್ಮ ಅವಧಿಯಲ್ಲಿ 3800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೋದಲ್ಲೆಲ್ಲ ಗಡದ್ದಾಗಿ ನಿದ್ದೆ ಮಾಡುತ್ತಿದ್ದ ನಿಮಗೀಗ ಇದ್ದಕ್ಕಿದ್ದಂತೆಯೇ ರೈತರ ಮೇಲೆ ಪ್ರೇಮ ಉಕ್ಕಿದೆ ಅಲ್ಲವೇ?#SiddaramaiahAgainstFarmers
— BJP Karnataka (@BJP4Karnataka) December 3, 2020
'ಬಿ.ಎಸ್ ಯಡಿಯೂರಪ್ಪ ಇದುವರೆಗೆ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ'
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ನಿಜವಾದ ಹೇಡಿಗಳು ಯಾರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲು ಕೇಳದವರೋ? ನೆರೆ ಬಂದಾಗ ಸಂತ್ರಸ್ತರ ನೆರವಿಗೆ ನಿಲ್ಲದ ಬಿಜೆಪಿ ನಾಯಕರೋ? ಪರಿಹಾರ ಕೇಳಿದ್ದಕ್ಕೆ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವವರೋ? ರಾಜ್ಯದ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕದ ಬಿಜೆಪಿ ಸಂಸದರೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕೃಷಿ ಸಚಿವರಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸದ @bcpatilkourava ಅವರೇ ರೈತರನ್ನು ಹೇಡಿ ಎಂದು ಕರೆಯುವ ನೈತಿಕತೆ ನಿಮಗೇನಿದೆ?
ರೈತರ ಜೀವನ ಹಸನಾಗಿಸುವ ಒಂದೇ ಒಂದು ಯೋಜನೆಯನ್ನೂ ರೂಪಿಸದೆ ಇಂತಹ ಹೇಳಿಕೆ ನೀಡಿದ್ದಲ್ಲದೆ, ಅದನ್ನು ಸಮರ್ಥಿಸಿ ಅಹಂಕಾರವನ್ನು ತೋರುತ್ತಿದ್ದೀರಿ. ಕೃಷಿ ಸಚಿವ ಸ್ಥಾನಕ್ಕೆ ನೀವು ಅನರ್ಹರು.
ಕೂಡಲೇ ರಾಜೀನಾಮೆ ಕೊಡಿ.— Karnataka Congress (@INCKarnataka) December 3, 2020