Siddaramaiah: ಸಿದ್ದರಾಮಯ್ಯರ ‘ಅಡ್ಡಕಸುಬಿ’ ಬಜೆಟ್ ಹೇಳಿಕೆಗೆ ಬಿಜೆಪಿ ಸಿಡಿಮಿಡಿ

ಪ್ರಜಾಪ್ರಭುತ್ವದ ರೀತಿ ರಿವಾಜುಗಳಿಗೆ ವಿರುದ್ಧವಾದ ಹೇಳಿಕೆಯನ್ನು ಸಿದ್ದರಾಮಯ್ಯರಿಂದ ರಾಜ್ಯದ ಜನರು ನಿರೀಕ್ಷಿಸಿರಲಿಲ್ಲ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Mar 5, 2022, 02:14 PM IST
  • ರಾಜ್ಯ ಬಜೆಟ್ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತು ಅವರ ಘನತೆಗೆ ತಕ್ಕುದಲ್ಲ
  • ಸಿದ್ದರಾಮಯ್ಯನವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ
  • ಮೇಕೆದಾಟು ಯೋಜನೆ ಅನುಷ್ಠಾನ ನಮ್ಮ ಬದ್ಧತೆ, ಅದಕ್ಕಾಗಿ ಹಣ ಮೀಸಲಿರಿಸಿದ್ದೇವೆ
Siddaramaiah: ಸಿದ್ದರಾಮಯ್ಯರ ‘ಅಡ್ಡಕಸುಬಿ’ ಬಜೆಟ್ ಹೇಳಿಕೆಗೆ ಬಿಜೆಪಿ ಸಿಡಿಮಿಡಿ title=
ಸಿದ್ದರಾಮಯ್ಯ ಆಡಿದ ಮಾತು ಅವರ ಘನತೆಗೆ ತಕ್ಕುದಲ್ಲ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಮಂಡಿಸಿದ ಬೊಚ್ಚಲ ಬಜೆಟ್(Karnataka Budget 2022)ಗೆ ‘ಅಡ್ಡಕಸುಬಿ’ ಬಜೆಟ್ ತಿಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. #ಜನವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ’ ಅಂತಾ ಕುಟುಕಿದೆ.

 ‘ಬಜೆಟ್ ಬಗ್ಗೆ ಸಿದ್ದರಾಮಯ್ಯ(Siddaramaiah) ಆಡಿದ ಮಾತು ಅವರ ಘನತೆಗೆ ತಕ್ಕುದಲ್ಲ. ಸಿದ್ದರಾಮಯ್ಯನವರು ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ‘ಅಡ್ಡಕಸುಬಿ’ ಎಂದು ಯಾರಾದರೂ ಕರೆದರೆ ನಿಮಗೆ ನೋವಾಗಬಹುದೇ? ರಾಜಕೀಯ ಟೀಕೆಗಳು ಮರ್ಯಾದೆಯ ಗೆರೆ ದಾಟಬಾರದು. ಆದರೆ ಸಿದ್ದರಾಮಯ್ಯನವರು ರಾಜ್ಯದ ಆಯವ್ಯಯವನ್ನೇ ಅಡ್ಡಕಸುಬಿ ಬಜೆಟ್‌ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರಜಾಪ್ರಭುತ್ವದ ರೀತಿ ರಿವಾಜುಗಳಿಗೆ ವಿರುದ್ಧವಾದ ಹೇಳಿಕೆಯನ್ನು ಸಿದ್ದರಾಮಯ್ಯರಿಂದ ರಾಜ್ಯದ ಜನರು ನಿರೀಕ್ಷಿಸಿರಲಿಲ್ಲ. ಇದು ರಾಜ್ಯದ ಜನತೆಗೆ ಮಾಡಿದ ಅವಮಾನ’ ಅಂತಾ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಿಟ್ಟು ಬೇರೆಲ್ಲೂ ಪ್ರತಿಭಟನೆ ನಡೆಸುವಂತಿಲ್ಲ- ಕರ್ನಾಟಕ ಹೈಕೋರ್ಟ್

‘ಡಿ.ಕೆ.ಶಿವಕುಮಾರ್(DK Shivakumar) ಅವರೇ ನಿಮ್ಮ ರಾಜಕೀಯ ಪ್ರೇರಿತ ಗೊಡ್ಡು ಪಾದಯಾತ್ರೆಗೆ ಬೆದರಿ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ಹಣ ಮೀಸಲಿರಿಸಿದ್ದಲ್ಲ. ಮೇಕೆದಾಟು ಯೋಜನೆ ಅನುಷ್ಠಾನ ನಮ್ಮ ಬದ್ಧತೆ, ಅದಕ್ಕಾಗಿ ಹಣ ಮೀಸಲಿರಿಸಿದ್ದೇವೆ. ನಿಮ್ಮಿಂದ ಇದು ಸಾಧ್ಯವಾಗಿಲ್ಲ ಎಂಬುದಕ್ಕಾಗಿ ನೀವು ನಾಚಿಗೆ ಪಟ್ಟುಕೊಳ್ಳಬೇಕು’ ಅಂತಾ ಟೀಕಿಸಿದೆ

‘ರಣದೀಪ್ ಸಿಂಗ್ ಸುರ್ಜೇವಾಲ(Randeep Singh Surjewala)ರೇ ನಿಮಗೆ ಮಾಹಿತಿ ಮತ್ತು ತಾಕತ್ತಿನ ಕೊರತೆ ಇದೆ. ಮೊದಲಾಗಿ ನೀವು ಪ್ರಶ್ನಿಸಿದ ರೀತಿಯೇ ತಪ್ಪು. ಡಿಪಿಆರ್‌(DPR) ಸಲ್ಲಿಸಲು ವಿಳಂಬ ಮಾಡಿದ್ದೇಕೆ ಎಂದು ಕಾಂಗ್ರೆಸ್ ಪಕ್ಷವನ್ನು ಮೊದಲು ಪ್ರಶ್ನಿಸಿ. ತಮಿಳುನಾಡು ಸರ್ಕಾರವನ್ನು ಮೇಕೆದಾಟು ಯೋಜನೆಗಾಗಿ ಆಗ್ರಹಿಸುವ ತಾಕತ್ತು ನಿಮ್ಮಲ್ಲಿದೆಯೇ ಸುರ್ಜೇವಾಲಾ’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ: ಲಾರಿಗಳೆಲ್ಲಾ ಪಲ್ಟಿ, 6 ಮಂದಿ ಸಿಲುಕಿರುವ ಶಂಕೆ

‘ಪ್ರಧಾನಿ ಮೋದಿ ಸರ್ಕಾರ ಮೇಕೆದಾಟು ಯೋಜನೆ(Mekedatu Project)ಗೆ ಏಕೆ ಅನುಮತಿ ನೀಡುತ್ತಿಲ್ಲವೆಂದು ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ. ಗೋವಾ & ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಅನುಕೂಲಸಿಂಧು ರಾಜಕಾರಣ ನಡೆಸುತ್ತಿದೆ. ಮಹದಾಯಿ & ಮೇಕೆದಾಟು ವಿಚಾರದಲ್ಲಿ ಗೋವಾ ಮತ್ತು ತಮಿಳುನಾಡು ಕಾಂಗ್ರೆಸ್ ಪಕ್ಷದ ನಿಲುವು ಮೊದಲು ಸ್ಪಷ್ಟಪಡಿಸಿ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೇ ನಿಮ್ಮ ಉಸ್ತುವಾರಿಗೆ 2013-2018ವರೆಗೆ ನಿಮ್ಮದೇ ಸರ್ಕಾರ‌ ಅಧಿಕಾರದಲ್ಲಿತ್ತು ಎಂಬುದನ್ನು ಒಮ್ಮೆ ನೆನಪಿಸಿ’ ಅಂತಾ ಬಿಜೆಪಿ ವ್ಯಂಗ್ಯವಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News