‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’

ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡುವಲ್ಲಿ ತಿಣುಕಾಡಿದವರು ಇಂದು ಸೇನೆಯ ನೇಮಕಾತಿ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವೆಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Apr 6, 2022, 08:29 PM IST
  • ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
  • ಬೇಕಾಬಿಟ್ಟಿ ನೇಮಿಸಿಕೊಳ್ಳಲು ಸೇನೆಯೇನು ಮುಳುಗುತ್ತಿರುವ ಕಾಂಗ್ರೆಸ್‌ ಪಕ್ಷವಲ್ಲ
  • ನಿರುದ್ಯೋಗದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು
‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’   title=
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ದೇಶದ ಯುವಕರಿಗೆ ಉದ್ಯೋಗ(Unemployment)ವೂ ಇಲ್ಲ, ರಕ್ಷಣೆಯೂ ಇಲ್ಲವೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’ವೆಂದು ಕುಟುಕಿದೆ.

‘ಯಥಾ ಯುವರಾಜ, ತಥಾ ಕಾಂಗ್ರೆಸ್‌ ! ಸೇನೆಗೆ ತನ್ನದೇ ಆದ ಘನತೆ ಇದೆ. ನೇಮಕಾತಿ, ಸೇವೆ, ಹುದ್ದೆ ಎಲ್ಲದಕ್ಕೂ ಅಲ್ಲೊಂದು ಕಠಿಣ ಮಾನದಂಡಗಳಿವೆ, ನೀತಿ ನಿಯಮಗಳಿವೆ. ಬೇಕಾಬಿಟ್ಟಿ ನೇಮಿಸಿಕೊಳ್ಳಲು ಸೇನೆ(Army Recruitment)ಯೇನು ಮುಳುಗುತ್ತಿರುವ ಕಾಂಗ್ರೆಸ್‌ ಪಕ್ಷವಲ್ಲ’ವೆಂದು ಟೀಕಿಸಿದೆ.

‘ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡುವಲ್ಲಿ ತಿಣುಕಾಡಿದವರು ಇಂದು ಸೇನೆಯ ನೇಮಕಾತಿ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಕಾಂಗ್ರೆಸ್‌ ಪಕ್ಷದ ನೇಮಕಾತಿ ರಾಹುಲ್‌ ಗಾಂಧಿ(Rahul Gandhi) ಅನುಮೋದಿಸಿದರು, ಸೋನಿಯಾ ಗಾಂಧಿ ಒಪ್ಪಿದರು, ಈ ಎರಡು ವ್ಯಕ್ತಿಗಳಲ್ಲೇ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ನಡೆದು ಹೋಗುತ್ತದೆ, ಉಳಿದವರೆಲ್ಲರೂ ನಿರುದ್ಯೋಗಿಗಳು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ‘ಚಂದ್ರು ಕೊಲೆ ಮಾಡಿದವರು ಅನ್ಯಧರ್ಮಿಯರು, ಹತ್ಯೆಯಾಗಿದ್ದು ಹಿಂದೂ’

ಉದ್ಯೋಗವೂ ಇಲ್ಲ, ರಕ್ಷಣೆಯೂ ಇಲ್ಲ – ರಾಹುಲ್ ಗಾಂಧಿ

‘ಯುವಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಆದರೆ ಈ ಅಸಮರ್ಥ ಸರ್ಕಾರ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಸಿದ್ಧವಿಲ್ಲ. ಉದ್ಯೋಗವೂ ಇಲ್ಲ, ರಕ್ಷಣೆಯೂ ಇಲ್ಲ’ವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರು ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಟೀಕಾಪ್ರಹಾರ ನಡೆಸಿದ್ದರು.  

ಆರಗ ಜ್ಞಾನೇಂದ್ರ ಅಪ್ರಬುದ್ದ ರಾಜಕಾರಿಣಿ!

‘ಆರಗ ಜ್ಞಾನೇಂದ್ರ(Araga Jnanendra) ಅವರೇ ನೀವೊಬ್ಬ ಅಪ್ರಬುದ್ದ ರಾಜಕಾರಿಣಿ, ಅಸಮರ್ಥ ಗೃಹಸಚಿವ. ಗೃಹ ಸಚಿವರ ಮಾಹಿತಿಯ ‘ಸೋರ್ಸ್’ ಪೊಲೀಸ್ ವರದಿ ಆಗಿರಬೇಕೇ ಹೊರತು ‘ವಾಟ್ಸಾಪ್ ಫಾರ್ವರ್ಡ್ ಮೆಸೇಜುಗಳಲ್ಲ! ಬಿಜೆಪಿ ಟೋಪಿ ಹಾಕಿದಾಗ ಒಂದು ಮಾತು, ಟೋಪಿ ತೆಗೆದಾಗ ಮತ್ತೊಂದು ಮಾತು! ಬಿಜೆಪಿ ಟೋಪಿಯ ಮಹಿಮೆಯೇ ಅಂತದ್ದು! ‘ಸುಳ್ಳು’ ತಕ್ಷಣ ಜಾಗೃತವಾಗಿಬಿಡುತ್ತದೆ!’ ಎಂದು ಕಾಂಗ್ರೆಸ್ ತನ್ನ ಮತ್ತೊಂದು ಟ್ವೀಟ್‍ನಲ್ಲಿ ರಾಜ್ಯ ಬಿಜೆಪಿ ಸರ್ಕಾರ(BJP Government)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಉರ್ದು ಮಾತನಾಡದಿರುವುದಕ್ಕೆ ಹತ್ಯೆ ಎಂದು ಹೇಳಿ ನಂತರ ಯುಟರ್ನ್ ಹೊಡೆದ ಆರಗ ಜ್ಞಾನೇಂದ್ರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News