ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿದ ಬಿಜೆಪಿ

ಒಟ್ಟು 82 ವಾರ್ಡ್.ಗಳನ್ನು ಹೊಂದಿರುವ  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೇ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಹಾಲಿ ಮೇಯರ್ ಅವಧಿ ಅಂತ್ಯಗೊಂಡ ಹಿನ್ನೆಲೆ ಇಂದು ಧಾರವಾಡ ಪಾಲಿಕೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೀಣಾ ಭರದ್ವಾಡ ಮೇಯರ್ ಹಾಗೂ ಸತೀಶ ಹಾನಗಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. 

Written by - Yashaswini V | Last Updated : Jun 20, 2023, 04:42 PM IST
  • ಶತಾಯುಗತಾಯ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕು ಎಂಬ ಕಾಂಗ್ರೆಸ್ ಆಶಯಕ್ಕೆ ಬಿಜೆಪಿ ನಾಯಕರು ತಣ್ಣೀರು ಎರಚಿದ್ದಾರೆ.
  • ಹಲವು ತಂತ್ರ ಮಾಡಿದರು ಸಹ ಮ್ಯಾಜಿಕ್ ನಂ. ತಲುಪಲಾಗದ ಕಾಂಗ್ರೆಸ್ ಸೋಲು ಕಂಡಿದೆ.
  • ಇದೇ ಮೊದಲ ಬಾರಿಗೆ ಮೇಯರ್-ಉಪಮೇಯರ್ ಚುನಾವಣೆಗೂ ರೆಸಾರ್ಟ್ ರಾಜಕೀಯ ಎಂಟ್ರಿ ಹೊಡೆದಿದ್ದು ವಿಶೇಷವಾಗಿತ್ತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿದ ಬಿಜೆಪಿ title=
hubballi dharwad mayor election

Hubli-Dharwad Palike Mayer Election: ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಹಿನ್ನೆಡೆಯಾದಂತಾಗಿದೆ. 

ಹೌದು, ಶತಾಯುಗತಾಯ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕು ಎಂಬ ಕಾಂಗ್ರೆಸ್ ಆಶಯಕ್ಕೆ ಬಿಜೆಪಿ ನಾಯಕರು ತಣ್ಣೀರು ಎರಚಿದ್ದಾರೆ. ಹಲವು ತಂತ್ರ ಮಾಡಿದರು ಸಹ ಮ್ಯಾಜಿಕ್ ನಂ. ತಲುಪಲಾಗದ ಕಾಂಗ್ರೆಸ್ ಸೋಲು ಕಂಡಿದ್ರೆ, ಇದೇ ಮೊದಲ ಬಾರಿಗೆ ಮೇಯರ್-ಉಪಮೇಯರ್ ಚುನಾವಣೆಗೂ ರೆಸಾರ್ಟ್ ರಾಜಕೀಯ ಎಂಟ್ರಿ ಹೊಡೆದಿದ್ದು ವಿಶೇಷವಾಗಿತ್ತು... 

ಒಟ್ಟು 82 ವಾರ್ಡ್.ಗಳನ್ನು ಹೊಂದಿರುವ  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೇ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಹಾಲಿ ಮೇಯರ್ ಅವಧಿ ಅಂತ್ಯಗೊಂಡ ಹಿನ್ನೆಲೆ ಇಂದು ಧಾರವಾಡ ಪಾಲಿಕೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೀಣಾ ಭರದ್ವಾಡ ಮೇಯರ್ ಹಾಗೂ ಸತೀಶ ಹಾನಗಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಒಟ್ಟು 46 ಮತಗಳನ್ನು ಪಡೆದು ಮೇಯರ್ ಉಪಮೇಯರ್ ಆಯ್ಕೆ ಆಗಿದ್ದು, ಕಾಂಗ್ರೆಸ್‌ನಿಂದ ಸುವರ್ಣ ಕಲಕುಂಟ್ಲ ಮೇಯರ್ ಸ್ಥಾನಕ್ಕೆ ಹಾಗೂ ಉಪಮೇಯರ್ ಸ್ಥಾನಕ್ಕೆ ರಾಜಶೇಖರ ಕಮತಿ ನಾಮಪತ್ರ ಸಲ್ಲಿಸಿದ್ದರಾದರೂ ಮ್ಯಾಜಿಕ್ ನಂ. ತಲುಪಲಾಗದೇ 37 ಮತ ಪಡೆದುಕೊಂಡು ಸೋಲನುಭವಿಸಬೇಕಾಯಿತು. 

ಇದನ್ನೂ ಓದಿ- Karnataka Weather: ಚೆನ್ನೈನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಮಳೆ..!

ಒಟ್ಟು 82 ಸದಸ್ಯರ ಪೈಕಿ ಬಿಜೆಪಿ 39, ಕಾಂಗ್ರೆಸ್ 33, ಎಐಎಂಐಎಂ 3, ಆರು ಪಕ್ಷೇತರ, ಒಂದು ಜೆಡಿಎಸ್‌ ಸದಸ್ಯರಿದ್ದರು. ಸಂಸದ, ಶಾಸಕ, ಎಂಎಲ್‌ಸಿ ಸೇರಿ 6 ಪದನಿಮಿತ್ ಸದಸ್ಯ ಮತಗಳಿದ್ದವು.  ಈ ಸಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಹಿನ್ನೆಲೆಯಲ್ಲಿ ಹೇಗಾದ್ರೂ ಮಾಡಿ ಪಾಲಿಕೆ ಅಧಿಕಾರ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ಮಾಡಿತ್ತು. ಇದಕ್ಕೆ ಪ್ರತಿತಂತ್ರ ಹೂಡಿದ್ದ ಬಿಜೆಪಿ ಚುನಾವಣೆಗೆ ನಾಲ್ಕು ದಿನ ಮೊದಲೇ ತನ್ನೆಲ್ಲ ಸದಸ್ಯರು ದಾಂಡೇಲಿ ರೇಸಾರ್ಟ್‌ನಲ್ಲಿಟ್ಟಿತ್ತು. ಈದ್ನು ಬೆಳಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದಾಂಡೇಲಿಗೆ ತೆರಳಿ ತಮ್ಮ ಸದಸ್ಯರನ್ನು ಎಸ್ಕಾಟ್ ಮಾಡಿ ಕರೆದುಕೊಂಡು ಬಂದಿದ್ದರು. 

ಯಾರೊಬ್ಬರೂ ಕಾಂಗ್ರೆಸ್ ಸಂಪರ್ಕಕ್ಕೆ ಬರದಂತೆ ಮಧ್ಯಾಹ್ನ 1 ಗಂಟೆಯ ಮತದಾನದ ಸಮಯದವರೆಗೂ ನಗರದ ಮಂದಾರ ಹೊಟೇಲ್ ನಲ್ಲಿ ಇಟ್ಟಿದ್ದರು‌. ಕೊನೆಗೆ ಎಲ್ಲ ಸದಸ್ಯರು ಬಂದರಾದರೂ ವಾರ್ಡ್ 54ರ ಸದಸ್ಯೆ ಗೈರಾಗಿದ್ದರು. ಇತ್ತ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿಗೆ ಜಿಲ್ಲಾ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಆ ಮತವನ್ನು ಕಾಂಗ್ರೆಸ್ ಕಳೆದುಕೊಳ್ಳಬೇಕಾಯಿತು. 

ಇದನ್ನೂ ಓದಿ- ಕೇಂದ್ರದ ವಿರುದ್ಧ ಕೈ ಕಹಳೆ: ನಾವೇನ್ ಉಚಿತ ಅಕ್ಕಿ ಕೇಳಿದ್ವಾ ಎಂದ ಸಚಿವ!!

ಬಿಜೆಪಿಯ ಎಂಎಲ್‌ಸಿ ಎಸ್.ವಿ. ಸಂಕನೂರರಿಗೆ ಮತದಾನಕ್ಕೆ ಅವಕಾಶ ಇಲ್ಲ ಅಂತಾ ತಡೆ ಹಾಕಿದ್ದರು. ಆದರೆ ತಮ್ಮ ಪದನಿಮಿತ್ತ ಸದಸ್ಯತ್ವ ಪಾಲಿಕೆಗೂ ಬರುತ್ತೆ ಅಂತಾ ಹೈಕೋರ್ಟ್ ಮೊರೆ ಹೋದ ಅವರು ಕೋರ್ಟ್‌ನಿಂದ ಅನುಮತಿ ಪಡೆದು, ಕೋರ್ಟ್ ಆದೇಶ ಹಿಡಿದುಕೊಂಡೆ ಮತದಾನಕ್ಕೆ ಬಂದರೂ ಅವಕಾಶ ಸಿಗಲಿಲ್ಲ. ಎಐಎಂಐಎಂ ತಾವೂ ಅಭ್ಯರ್ಥಿ ಹಾಕಿ ತಮ್ಮ ಮೂರು ಮತ ತಾವೇ ಹಾಕಿಕೊಂಡರು. ಬಿಜೆಪಿಯ ಓರ್ವ ಸದಸ್ಯೆಯ ಗೈರಿನಿಂದ ಬಿಜೆಪಿ ಬಲ 38ಕ್ಕೆ ಇಳಿದಿತ್ತು. ಆದರೆ ಆರು ಪಕ್ಷೇತರರ ಪೈಕಿ ನಾಲ್ವರು ಬಿಜೆಪಿಗೆ ಜೈ ಅಂದ್ರು 1 ಸಂಸದ, 2 ಶಾಸಕ, 1 ಎಂಎಲ್‌ಸಿ ಮತ ಸೇರಿ ಒಟ್ಟು 46 ಮತಗಳನ್ನು ಪಡೆದು ಮ್ಯಾಜಿಕ್ ಸಂಖ್ಯೆ ದಾಟಿದ ಬಿಜೆಪಿ ಪಾಲಿಕೆಯಲ್ಲಿ ಗೆದ್ದು ಬೀಗಿದೆ.

ಒಟ್ಟಾರೆಯಾಗಿ ಕಾಂಗ್ರೆಸ್ನ ತಂತ್ರಗಾರಿಕೆ, ಶತಾಯು ಗತಾಯು ಪ್ರಯತ್ನದ ಮಧ್ಯೆಯೂ ಛಲಬಿಡದೆ ತನ್ನ ಒಗ್ಗಟ್ಟು ಕಾಯ್ದುಕೊಂಡ ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮೇಯರ್ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಉಪಮೇಯರ್ ಸ್ಥಾನ ಅಧಿಕಾರ ಉಳಿಸಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News