ಬೆಂಗಳೂರು : ಕೆಂಪುಕೋಟೆಯಲ್ಲಿ ರಾಷ್ಟ್ರ ದ್ವಜ ಬದಲಿಗೆ ಭಗವತ್ ದ್ವಜ ಹಾರಿಸುವ ಬಗ್ಗೆ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿಕೆಯ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ (N Ravikumar) ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಅವರು ಕೇವಲ ಭವಿಷ್ಯ ನುಡಿದ್ದಾರೆ. ನುಡಿಯುವ ಎಲ್ಲಾ ಭವಿಷ್ಯ ಸತ್ಯವಾಗುತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಈಶ್ವರಪ್ಪ ಕ್ಷಮೆ ಕೇಳು ಅಗತ್ಯ ಇಲ್ಲ ಎಂದು, ಎನ್ ರವಿಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಎನ್ ರವಿಕುಮಾರ್, ಈಶ್ವರಪ್ಪ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಈಶ್ವರಪ್ಪ (Ks Eshwarappa) ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹಾಗೆ ಆಗಬಹುದು ಎಂದು ಹೇಳಿದ್ದಾರೆ. ಅವರಿಗೆ ಅಷ್ಟು ಹೇಳಲು ಸ್ವಾತಂತ್ರ್ಯ ಇಲ್ವಾ.? ಎಂದು ಎನ್ ರವಿಕುಮಾರ್ (N Ravikumar)ಪ್ರಶ್ನಿಸಿದ್ದಾರೆ. ಇನ್ನೂರು, ಮುನ್ನೂರು ವರ್ಷ ಆದ ಮೇಲೆ ಆ ಸ್ಥಿತಿ ಬರಬಹುದು ಎಂದು ಈಶ್ವರಪ್ಪ ಹೇಳಿದ್ದಾರೆ. ಅದಕ್ಕೆ ಯಾಕೆ ಕೇಸ್ ಹಾಕಬೇಕು. ಸುಳ್ಳು ಹೇಳಿಕೆ ನೀಡುವ ಡಿ.ಕೆ ಶಿವಕುಮಾರ್ (DK Shivakumar) ವಿರುದ್ದ ಕೇಸ್ ದಾಖಲು ಮಾಡಬೇಕು ಎಂದವರು ಹೇಳಿದ್ದಾರೆ.
ಇದನ್ನೂ ಓದಿ : All colleges Reopen : ಫೆ.16ರಿಂದ ಪಿಯು ಮತ್ತು ಎಲ್ಲಾ ಡಿಗ್ರಿ ಕಾಲೇಜುಗಳು ಆರಂಭ : ಸರ್ಕಾರದಿಂದ ತೀರ್ಮಾನ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪರಿಷತ್ ಸದಸ್ಯ ರವಿಕುಮಾರ್, ಹಿಜಾಬ್ (HIjab) ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ್ದಾರೆ. ಇವರಿಗೆ ಹಿಜಾಬ್ ಬೇಕಾ? ಅಥವಾ ಕಿತಾಬ್ ಬೇಕಾ ಎನ್ನುವುದನ್ನು ನಿರ್ಧಾರ ಮಾಡಲಿ, ಎಂದು ಹೇಳಿದ್ದಾರೆ.
ಹಿಜಾಬ್ ಶೈಕ್ಷಣಿಕ ಹಿತದೃಷ್ಟಿಯನ್ನು ಹಾಳುಮಾಡುತ್ತಿದೆ.ಇದಕ್ಕೆ ಕಾರಣ SDPI, CFI, PFI. ಇವರು ಹಿಜಾಬ್ ಹಿಡಿದುಕೊಂಡು, ಕಿತಾಬ್ ಬಿಟ್ಟಿದ್ದಾರೆ. ಸರ್ಕಾರ ಆದೇಶ ಮಾಡಿರೋ ಸಮವಸ್ತ್ರ ವನ್ನ 99% ವಿದ್ಯಾರ್ಥಿಗಳು ಹಾಕಿಕೊಂಡು ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಣಿಪುರ, ಗೋವಾ, ಪಂಜಾಬ್ ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪ್ಲಾನ್ ಮಾಡಿ ಈ ವಿಚಾರವನ್ನು ಎತ್ತಲಾಗಿದೆ ಎಂದವರು ಆರೋಪಿಸಿದ್ದಾರೆ. 12ಜನರಿಂದ ಆರಂಭವಾದ ಈ ಯೋಜನೆ ನಂತರ 8ಜನಕ್ಕೆ ಇಳಿದಿದೆ. ಈಗ 6 ಜನ ನಾವು ಹಿಜಾಬ್ ಬಿಡೋದಿಲ್ಲ ಅಂತ ಕೂತಿದ್ದಾರೆ ಎಂದು ರವಿಕುಮಾರ್ ಹೇಳಿದ್ದಾರೆ. ಹಿಜಾಬ್ ಮುಖ್ಯವಲ್ಲ ಕಿತಾಬ್ ಮುಖ್ಯ ಅಂತ ಅದೇ ಸಮುದಾಯದ ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದ್ದರು. ಈ 6 ಜನ ವಿದ್ಯಾರ್ಥಿನಿಯರಿಂದ ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಇದನ್ನ ಕಾಂಗ್ರೆಸ್ , PFI, CFI, SDPI ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : Hijab Controversy: ಹಿಜಾಬ್ ವಿವಾದಕ್ಕೆ ಹೊಸ ತಿರುವು, ಸ್ಕೂಲ್ ಡ್ರೆಸ್ ಬಣ್ಣದ ಹೆಡ್ ಸ್ಕಾರ್ಫ್ ಧರಿಸಲು ಅನುಮತಿ ಕೋರಿದ ವಿದ್ಯಾರ್ಥಿನೀಯರು
ಶಿವಮೊಗ್ಗದಲ್ಲಿ ತ್ರಿವರ್ಣ ಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸಿದರು ಎಂದು ಡಿಕೆಶಿ (DKS) ಆರೋಪ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರೂ ನೀಡುವ ಹೇಳಿಕೆ ದಾಖಲಾಗುತ್ತದೆ. ಅಲ್ಲಿ ರಾಷ್ಟ್ರ ಧ್ವಜ ಇರಲಿಲ್ಲ ಅಂತ ಅಂತ ಪೊಲೀಸ್ ಇಲಾಖೆ ಹೇಳಿದೆ. ರಾಷ್ಟ್ರ ಧ್ವಜ ಇಲ್ಲದೇ ಇದ್ದಾಗ, ಹೇಗೆ ಇಳಿಸಲಾಗುತ್ತದೆ. ಟ್ವಿಟರ್ ನಲ್ಲಿ ಈ ಬಗ್ಗೆ ಹೇಳಿಕೆ ಕೂಡ ನೀಡಿದ್ದಾರೆ. ಹಾಗಾಗಿ ಡಿಕೆಶಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಹಿಜಾಬ್ ವಿಚಾರವನ್ನು ರಾಜಕೀಯ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಹಿಜಾಬ್ ಮೊದಲು ಹಾಕಿಕೊಂಡು ಬಂದ್ರಾ, ಕೇಸರಿ ಮೊದಲು ಹಾಕಿ ಬಂದ್ರಾ ಎಂದು ಅವರು ಪ್ರಶ್ನಿಸಿದ್ದಾರೆ.
ಯಾವಾಗಲೂ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ. ಹುಡುಗಿಯರು ಎರಡು ವಾರದಿಂದ ಹಿಜಾಬ್ ಧರಿಸುತ್ತಿದ್ದರು. ಹಾಗಾಗಿ ಕೇಸರಿ ಶಾಲು ಹಾಕಿಕೊಂಡು ಉಳಿದ ವಿದ್ಯಾರ್ಥಿಗಳು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದು ಕೇಸರಿ ಶಾಲಿನಿಂದ ಆದ ವಿವಾದ ಅಲ್ಲ, ಎರಡೂ ವಿಚಾರವನ್ನು ಕೂಡಾ ನಾವು ವಿರೋಧಿಸುತ್ತೇವೆ ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಎರಡೂ ವಿಚಾರ ಬಿಟ್ಟು, ಸಮವಸ್ತ್ರ ಧರಿಸಿಬರಬೇಕು. ಸಮವಸ್ತ್ರ ಕಾಂಗ್ರೆಸ್ ಕಾಲದಲ್ಲೂ ಇತ್ತು, ಬಿಜೆಪಿ ಕಾಲದಲ್ಲೂ ಇದೆ ಎಂದಿದ್ದಾರೆ.
ಕೋರ್ಟ್ಗೆ ಪಿಟಿಷನ್ ಹಾಕಿದ್ದು, ಈಗಲೇ ಜಡ್ಜ್ಮೆಂಟ್ ಕೊಡಬೇಡಿ, ಉತ್ತರ ಪ್ರದೇಶ ಚುನಾವಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಚುನಾವಣೆಗೂ ಇದಕ್ಕೂ ಏನು ಸಂಬಂಧ ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.