"ಬಿಜೆಪಿಯಲ್ಲಿ ಒಬ್ಬ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ"

ಸ್ವಪಕ್ಷಷದವರ ವಿರುದ್ಧವೇ ಸದಾ ಟೀಕಾಪ್ರಹಾರ ನಡೆಸುತ್ತಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಇದೀಗ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಬಿಜೆಪಿಯಲ್ಲಿ ಒಬ್ಬ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ ಎಂದು ಹೇಳುವ ಮೂಲಕ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ. 

Written by - Chetana Devarmani | Last Updated : May 8, 2022, 06:50 PM IST
  • ಸ್ವಪಕ್ಷಷದವರ ವಿರುದ್ಧವೇ ಸದಾ ಟೀಕಾಪ್ರಹಾರ ನಡೆಸುತ್ತಿರುವ ವಿಜಯಪುರ ಶಾಸಕ
  • "ಬಿಜೆಪಿಯಲ್ಲಿ ಒಬ್ಬ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ"
  • ಹೊಸ ಬಾಂಬ್‌ ಸಿಡಿಸಿದ ಬಸವನಗೌಡ ಪಾಟೀಲ್‌ ಯತ್ನಾಳ್‌
"ಬಿಜೆಪಿಯಲ್ಲಿ ಒಬ್ಬ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ"  title=
ಯತ್ನಾಳ್‌

ವಿಜಯಪುರ: ಸ್ವಪಕ್ಷಷದವರ ವಿರುದ್ಧವೇ ಸದಾ ಟೀಕಾಪ್ರಹಾರ ನಡೆಸುತ್ತಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಇದೀಗ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಬಿಜೆಪಿಯಲ್ಲಿ ಒಬ್ಬ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ ಎಂದು ಹೇಳುವ ಮೂಲಕ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ. 

ಇದನ್ನೂ ಓದಿ: ಬಿಬಿಎಂಪಿ ಆಯುಕ್ತರಿಂದ ವಿವಿಧ ಕಾಮಗಾರಿ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ವಿಜಯಪುರ ತಾಲೂಕಿನ ಹಿಟ್ನಳ್ಳಿಯಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಶಾಸಕ ಯತ್ನಾಳ್‌, ಬಿಜೆಪಿಯಲ್ಲಿ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ. ನಮ್ಮಲ್ಲಿ ಒಬ್ಬ ಇದ್ದಾನೆ, ಅವ ಅರ್ಹತೆ ಮೇಲೆ ಮಂತ್ರಿ ಆಗಿಲ್ಲ ಎಂದು ಹೇಳುತ್ತ ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅವರು ಬ್ಲ್ಯಾಕ್ಮೇಲ್ ಮಾಡುವವರು. ಬಸನಗೌಡ 2 ಎ ಮೀಸಲಾತಿ ಕೇಳೋದು, ಕುರುಬ, ಹಡಪದ ಸೇರಿ ದನಿಯಿಲ್ಲದ ಸಮಾಜಕ್ಕೆ ಮೀಸಲಾತಿ ಕೊಡಿ ಅನ್ನೋದು ಬ್ಲ್ಯಾಕ್ಮೇಲ್ ಆಗಲ್ಲ. ಸಿಡಿ ಇಟ್ಟುಕೊಂಡು, ಎಲ್ಲರ ವಿಕ್ನೇಸ್ ಇಟ್ಟುಕೊಂಡು, ನನ್ನ ಮಂತ್ರಿ ಮಾಡಿಲಿಲ್ಲ ಅಂದ್ರೆ ಇದನ್ನು ಹೊರಗೆ ಬಿಡ್ತೀನಿ ಅನ್ನೋದು ಬ್ಲ್ಯಾಕ್ಮೇಲ್ ಆಗುತ್ತೆ ಎಂದು ಹೇಳಿದ್ದಾರೆ. 

ನಾನು ಯಾರಿಗೂ ರೊಕ್ಕಾ ಕೊಡುವ ಮಗನಲ್ಲ. 50 ಕೋಟಿ, 100 ಕೋಟಿ ಎಲ್ಲಿದು ಕೊಡ್ಲಿ, ಎಲ್ಲಿಂದ ಕೊಡೋಕೆ ಆಗುತ್ತೆ. ಎಷ್ಟು ಲೂಟಿ ಮಾಡೋದು. 50 ಕೋಟಿ ಕೊಟ್ಟು ಸುಮ್ಮ ಮನೆಯಲ್ಲಿ, ನನ್ನ ಸಿದ್ದಸಿರಿ ಬ್ಯಾಂಕ್ ನಲ್ಲಿ 50 ಕೋಟಿ ಡಿಪಾಸಿಟ್ ಇಟ್ರೆ ಎಷ್ಟು ಆಗುತ್ತೆ ಬಡ್ಡಿ ಗೊತ್ತಿದೆ ಏನು? 25 ಲಕ್ಷ ತಿಂಗಳಿಗೆ ದಾನ ಮಾಡಿಕೊಂಡು ಆರಾಮ ಇರ್ತೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮದ ದಂಗಲ್...!

ನಿನ್ನೆಯಷ್ಟೇ ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ರಾಜಕೀಯ ನಡೆಯುತ್ತಿದೆ ಎಂದು ಗೋಕಾಕ್ ನಲ್ಲಿ ಯತ್ನಾಳ್‌ ಹೇಳಿದ್ದರು. ಬಿಜೆಪಿಯ ಮಹಾನ್ ನಾಯಕರು, ಕಾಂಗ್ರೆಸ್ ನ ಡಿ ಕೆ ಶಿವಕುಮಾರ್, ಜೆಡಿಎಸ್ ನ ಕುಮಾರಸ್ವಾಮಿ ಮಧ್ಯೆ ಅಡ್ಜಸ್ಟ್ ಮೆಂಟ್ ರಾಜಕೀಯ. ರಾತ್ರಿ ಹೊತ್ತು ಈ ಎಲ್ಲ ನಾಯಕರು ಒಟ್ಟಿಗೆ ಮಾತನಾಡಿಕೊಳ್ಳುತ್ತಾರೆ, ಶಾಸಕರು ಹುಚ್ಚು ನಾಯಿಗಳು ಸರ್ ಸರ್ ಅಂತ ಅವರ ಹಿಂದೆ ಹೋಗುತ್ತಾರಷ್ಟೆ ಎಂದಿದ್ದರು. ಅಲ್ಲದೇ ಮೊನ್ನೆ ರಾಮದುರ್ಗದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್, 2500 ಕೋಟಿ ರೂ. ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಎಂದು ಆಫರ್ ಕೊಟ್ಟಿದ್ದರು ಎಂಬ ಹೇಳಿಕೆ ವಿರೋಧ ಪಕ್ಷದವರ ಬಾಯಿಗೆ ಹೋಳಿಗೆ ಸಿಕ್ಕಂತಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ಯತ್ನಾಳ್‌ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News