BJP MLA : ನಾನು ಮುಖ್ಯಮಂತ್ರಿ ಕೆಳಗಿಳಿಸೋ ತಾಕತ್ತು ಇಟ್ಕೊಂಡಿನಿ : ಶಾಸಕ ಯತ್ನಾಳ್

ಇನ್ನೊಂದು ಕಡೆ ಒತ್ತಡವಿದೆ. ಹುಚ್ಚು ಸ್ವಾಮಿ ಬೆನ್ನ ‌ಹತ್ತಿದ್ರೆ, ಶಿಗ್ಗಾಂವಿನಲ್ಲಿ ಉಲ್ಟಾ ಹೊಡಿತಿರಿ ಅಂತ ಹೇಳಿನಿ. ಹರಿಹರ ಪೀಠದ ವಚನಾನಂದ ಶ್ರೀಗೆ ಹುಚ್ಚ ಸ್ವಾಮೀಜಿ ಎಂದು ಯತ್ನಾಳ್ ಕರೆದಿದ್ದಾರೆ. 

Written by - Zee Kannada News Desk | Last Updated : Apr 10, 2022, 04:35 PM IST
  • ಹುಚ್ಚು ಸ್ವಾಮಿ ಬೆನ್ನು ಹತ್ತಿದ್ರೆ ಶಿಗ್ಗಾಂವಿ ನಲ್ಲಿ ಸಿಎಂ ಉಲ್ಟಾ ಹೊಡಿತಾರೆ
  • ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ ನೀಡಿದಶಾಸಕ ಯತ್ನಾಳ್
  • ನಾನು ಮುಖ್ಯಮಂತ್ರಿ ಕೆಳಗಿಳಿಸೋ ತಾಕತ್ತು ಇಟ್ಕೊಂಡಿನಿ
BJP MLA : ನಾನು ಮುಖ್ಯಮಂತ್ರಿ ಕೆಳಗಿಳಿಸೋ ತಾಕತ್ತು ಇಟ್ಕೊಂಡಿನಿ : ಶಾಸಕ ಯತ್ನಾಳ್ title=

ವಿಜಯಪುರ : ಹುಚ್ಚು ಸ್ವಾಮಿ ಬೆನ್ನು ಹತ್ತಿದ್ರೆ ಶಿಗ್ಗಾಂವಿ ನಲ್ಲಿ ಸಿಎಂ ಉಲ್ಟಾ ಹೊಡಿತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯ ಸಮಾರಂಭದಲ್ಲಿ ಮಾತನಾಡಿದ  ಶಾಸಕ ಯತ್ನಾಳ್, ಸಮಾಜಕ್ಕೆ ಬಂದ್ರೆ ಯಾವುದೇ ಹೊಂದಾಣಿಕೆ ಇಲ್ಲ. ಬೊಮ್ಮಾಯಿ ಸಾಹೇಬ್ರೆ ನನ್ನನ್ನು ಸಚಿವ ಮಾಡುತ್ತೀರೋ ಬಿಡ್ತಿರೋ ನಮಗೆ ಬೇಕಾಗಿಲ್ಲ. ಇದೇನು ಖುಲ್ಲಂಖುಲ್ಲಾ ಮಾಡಿ ಬಿಡಿ ಅಂತ ಹೇಳಿದ್ದೀನಿ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಿ ಅಂತ ಹೇಳಿನಿ. ಅವರು ಸಕಾರಾತ್ಮಕವಾಗಿ ಸ್ಪಂದನೆ ಮಾಡ್ತಿದ್ದಾರೆ. ಇನ್ನೊಂದು ಕಡೆ ಒತ್ತಡವಿದೆ. ಹುಚ್ಚು ಸ್ವಾಮಿ ಬೆನ್ನ ‌ಹತ್ತಿದ್ರೆ, ಶಿಗ್ಗಾಂವಿನಲ್ಲಿ ಉಲ್ಟಾ ಹೊಡಿತಿರಿ ಅಂತ ಹೇಳಿನಿ. ಹರಿಹರ ಪೀಠದ ವಚನಾನಂದ ಶ್ರೀಗೆ ಹುಚ್ಚ ಸ್ವಾಮೀಜಿ ಎಂದು ಯತ್ನಾಳ್ ಕರೆದಿದ್ದಾರೆ. 

ಇದನ್ನೂ ಓದಿ : ರಾಜ್ಯಪಾಲರು ಗೃಹ ಮಂತ್ರಿಗಳನ್ನು ವಜಾ ಮಾಡಲಿ -ಬಿ ಕೆ ಹರಿಪ್ರಸಾದ್

ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡ್ರಿ. ನಾನು ಮುಖ್ಯಮಂತ್ರಿ ಕೆಳಗಿಳಿಸೋ ತಾಕತ್ತು ಇಟ್ಕೊಂಡಿನಿ. ನಮ್ಮ ಸಮಾಜಕ್ಕೆ ವಿರುದ್ಧ ಉಲ್ಟಾ ಬಿದ್ರೆ ಮುಗಿತು. ಬೊಮ್ಮಾಯಿಗೆ ಅದಕ್ಕೆ ಅಂಜಿಕೆ ಇದೆ. ಈ ಮನುಷ್ಯನ ಸುಮ್ಮನೆ ಕುಂದಿಸಿದ್ರೆ ಆರಾಮ ಇನ್ನೊಂದು ವರ್ಷ ಮುಖ್ಯಮಂತ್ರಿಯಾಗಿ ಇರ್ತೀನಿ ಅಂತಾರೆ. ಬೊಮ್ಮಾಯಿ ಪಾಪ ಎಲ್ಲಾ ಶಾಸಕರಗಿಂತ ನನಗೆ ಎರಡ್ಮೂರು ಕೋಟಿ ಅನುದಾನ ಹೆಚ್ಚಿಗೆ ಕೊಡ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚಂದ್ರು ಹತ್ಯೆ ಪ್ರಕರಣ: ಸಿಐಡಿ ತನಿಖೆ ಆಗುವುದಾದರೆ ಆಗಲಿ ತಪ್ಪೇನು ಎಂದ ಮಾಧುಸ್ವಾಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News