ಕಾರ್ಕಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಲ್ಲಿ ಕೋಮುವಾದದ ಬೆಂಕಿ ಆಗಾಗ್ಗೆ ಹೊತ್ತಿ ಉರಿಯುತ್ತಿರುತ್ತದೆ. ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿ. ಸುನಿಲ್ ಕುಮಾರ್ ಇದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಬಂಟ್ವಾಳ ಕ್ಷೇತ್ರದ ಚುನಾವಣೆ "ಹಿಂದೂ ಸ್ವಾಭಿಮಾನದ ಪ್ರಶ್ನೆ" ಎಂದು ವಿವರಿಸಿದ ಸುನಿಲ್ ಕುಮಾರ್ ತಮ್ಮ ಭಾಷಣದಲ್ಲಿ ಭರದಲ್ಲಿ ಮುಂದಿನ ಚುನಾವಣೆ 'ಅಲ್ಲಾ ಮತ್ತು ರಾಮನ ನಡುವೆ' ನಡೆಯಲಿದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಶಾಸಕ ಸುನಿಲ್ ಕುಮಾರ್ ಹೇಳಿಕೆ ರಾಜ್ಯದಲ್ಲಿ ಈಗ ಬಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
Case registered against BJP MLA Sunil Kumar in Karnataka's Karkala police station under sections 153(a) and 505(2) of IPC in connection with his speech where he made a remark on a particular community.
— ANI (@ANI) January 23, 2018
ಆದಾಗ್ಯೂ, ಸುನೀಲ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 153 (ಎ) ಮತ್ತು 505 (2) ರ ಅಡಿಯಲ್ಲಿ ಸಮುದಾಯ ಪ್ರಚೋದನಕಾರಿ ಭಾಷಣಗಳನ್ನು ನೀಡಲಾಗಿದೆ ಎಂಬ ಆರೋಪದಡಿಯಲ್ಲಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.