ವರ್ಷದ ಕೊನೆಯ ಹಬ್ಬ ಆಚರಿಸೋಕೆ ಸಿಲಿಕಾನ್ ಸಿಟಿ ಸಜ್ಜು

ವರ್ಷದ ಕೊನೆಯಲ್ಲಿ ಬರೋ ಹಬ್ಬ ಕ್ರಿಸ್ ಮಸ್. ಈ ಹಬ್ಬಾನ ಸೆಲಬ್ರೇಷನ್ ಮಾಡೋದೇ ಚಂದ. ಆ ಕಲರ್ಫುಲ್ ಲೈಟಿಂಗ್ಸ್, ಟೇಸ್ಟಿ ಟೇಸ್ಟಿಯಾಗಿರೋ ಕೇಕ್ಸ್ .. ಸರ್ಪೈಸ್ ಗಿಫ್ಟ್ಸ್ ಕೊಡೋ ಸಂತಾ ಕ್ಲಾಸ್. ಇದನ್ನ ಆಚರಿಸೋದೆ ಒಂಥರಾ ಖುಷಿ. ಇನ್ನೇನು ಕ್ರಿಸ್ ಮಸ್ ಹಬ್ಬಕ್ಕೆ ಕೆಲವೇ ದಿನ ಬಾಕಿ ಇದ್ದು, ಹಬ್ಬ ಆಚರಿಸೋಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ.      

Written by - Bhavya Sunil Bangera | Edited by - Manjunath N | Last Updated : Dec 23, 2023, 03:26 PM IST
  • ವರ್ಷದ ಅಂತ್ಯದಲ್ಲಿ ಬರುವ ಕ್ರಿಸ್ಮಸ್ ಹಬ್ಬವನ್ನಾದ್ರು ಅದ್ದೂರಿಯಿಂದ ಆಚರಣೆ ಮಾಡೋಣ ಅಂತ ಸಿಲಿಕಾನ್ ಸಿಟಿ ಮಾಲ್ ಗಳು ಮೀರ ಮೀರ ಮಿಂಚುತ್ತಿವೆ.
  • ಅದ್ರಲ್ಲೂ ಒರಾಯನ್ ಮತ್ತು ಗರುಡ ಮಾಲ್ ಕಲರ್ಫುಲ್ ಆಗಿದೆ. ಜನ್ರನ್ನ ಸೆಳೆಯೋಕಂತಲೇ ಮಾಲ್ ಗಳಲ್ಲಿ ಸಖತ್ ಪ್ರಿಪರೇಷನ್ ಮಾಡಲಾಗಿದೆ.
  • ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಡಿಫರೆಂಟಾಗಿ ಡೆಕೋರೇಷನ್ ಮಾಡಲಾಗಿದೆ.
ವರ್ಷದ ಕೊನೆಯ ಹಬ್ಬ ಆಚರಿಸೋಕೆ ಸಿಲಿಕಾನ್ ಸಿಟಿ ಸಜ್ಜು title=
ಸಾಂಧರ್ಭಿಕ ಚಿತ್ರ

ಬೆಂಗಳೂರು: ವರ್ಷದ ಕೊನೆಯಲ್ಲಿ ಬರೋ ಹಬ್ಬ ಕ್ರಿಸ್ ಮಸ್. ಈ ಹಬ್ಬಾನ ಸೆಲಬ್ರೇಷನ್ ಮಾಡೋದೇ ಚಂದ. ಆ ಕಲರ್ಫುಲ್ ಲೈಟಿಂಗ್ಸ್, ಟೇಸ್ಟಿ ಟೇಸ್ಟಿಯಾಗಿರೋ ಕೇಕ್ಸ್ .. ಸರ್ಪೈಸ್ ಗಿಫ್ಟ್ಸ್ ಕೊಡೋ ಸಂತಾ ಕ್ಲಾಸ್. ಇದನ್ನ ಆಚರಿಸೋದೆ ಒಂಥರಾ ಖುಷಿ. ಇನ್ನೇನು ಕ್ರಿಸ್ ಮಸ್ ಹಬ್ಬಕ್ಕೆ ಕೆಲವೇ ದಿನ ಬಾಕಿ ಇದ್ದು, ಹಬ್ಬ ಆಚರಿಸೋಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ.      

ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿರುವ ಮಾಲ್ ಗಳು

ಇದನ್ನೂ ಓದಿ: Terror Attack: ಸೇನಾ ವಾಹನದ ಮೇಲೆ ಉಗ್ರರ ದಾಳಿ, ಐವರು ಯೋಧರು ಹುತಾತ್ಮ 

ಕಲರ್ ಫುಲ್ ಲೈಟಿಂಗ್ಸ್ನಿಂದ ಕಂಗೊಳಿಸ್ತಿರುವ ಮಾಲ್.. ಕ್ರಿಸ್ ಮಸ್ ಟ್ರಿ ಮತ್ತು ಗೊಲ್ ಡನ್ ರೇನ್ ಡಿಯ್ಯರ್ ಎದುರು ನಿಂತ್ಕೊಂಡು ಸೆಲ್ಫಿ ತೊಗೊಳ್ತಿರುವ ಮಹಿಳಾ ಮಣಿಗಳು.. ನಾವ್ಯಾರಿಗೂ ಕಡಿಮೆ ಇಲ್ಲ ಅನ್ನೋ ಹಾಗೇ ಕ್ಯಾಮೆರಾಗೆ ಪೋಸ್ ಕೊಡ್ತಿರುವ ಪುಟಾಣಿಗಳು.. ಈ ದೃಶ್ಯ ಕಂಡುಬಂದಿದ್ದು ಸಿಲಿಕಾನ್ ಸಿಟಿಯ ಮಾಲ್ ಗಳಲ್ಲಿ.. 

ವರ್ಷದ ಅಂತ್ಯದಲ್ಲಿ ಬರುವ ಕ್ರಿಸ್ಮಸ್ ಹಬ್ಬವನ್ನಾದ್ರು ಅದ್ದೂರಿಯಿಂದ ಆಚರಣೆ ಮಾಡೋಣ ಅಂತ ಸಿಲಿಕಾನ್ ಸಿಟಿ ಮಾಲ್ ಗಳು ಮೀರ ಮೀರ ಮಿಂಚುತ್ತಿವೆ. ಅದ್ರಲ್ಲೂ ಒರಾಯನ್ ಮತ್ತು ಗರುಡ ಮಾಲ್ ಕಲರ್ಫುಲ್ ಆಗಿದೆ. ಜನ್ರನ್ನ ಸೆಳೆಯೋಕಂತಲೇ ಮಾಲ್ ಗಳಲ್ಲಿ ಸಖತ್ ಪ್ರಿಪರೇಷನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಡಿಫರೆಂಟಾಗಿ ಡೆಕೋರೇಷನ್ ಮಾಡಲಾಗಿದೆ.

ಇದನ್ನೂ ಓದಿ: ಟ್ರೇನ್‌ನಲ್ಲಿ ವೃದ್ಧ ದಂಪತಿಗಳು 22,000 ರೂ. ದಂಡ: ಆದರೆ ಮಗನಿಗೆ 40000 ರೂ. ಪರಿಹಾರ! 

ಇನ್ನು ಕ್ರಿಸ್ಮಸ್ ಗೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಕ್ರಿಸ್ ಮಸ್ ಟ್ರಿ. ಹೀಗಾಗಿ ಮಾಲ್ ನಲ್ಲಿ ಬೃಹದ್ದಾಕಾರದ 90 ಆಡಿ ಕ್ರಿಸ್ ಮಸ್ ಟ್ರಿ ಇಡಲಾಗಿದೆ, ಇನೂ ಒರಾಯನ್ ಮಾಲ್ನ ನಲ್ಲಿ ಇಟ್ಟಿರುವುದು ಭಾರತದ ಮೊದಲನೆ 90 ಆಡಿ ಎಲ್ ಇ ಡಿ ಕ್ರಿಸ್ ಮಸ್ ಟ್ರಿ, ಇದನ್ನ ನೋಡಿದ ಜನ್ರು ಫುಲ್ ಖುಷಿಯಾಗಿದ್ದಾರೆ. ಇನ್ನು ಗರುಡ ಮಾಲ್ ನಲ್ಲಿ ಕ್ರಿಸ್ ಮಸ್ ಟ್ರಿ ಜೊತೆಗೆ ಕಣ್ಮನ ಸೆಳೆಯುವ ಸೆಟ್ ಅಪ್ ಮಕ್ಕಳಿಗಂತೂ ತುಂಬ ಫೇವರೆಟ್ ಆಗಿತ್ತು.

ಒಟ್ನಲ್ಲಿ ವರ್ಷದ ಅಂತ್ಯದಲ್ಲಿ ಬರುವ ಕ್ರಿಸ್ಮಸ್ ಹಬ್ಬದ ಆಚರಣೆಗೆ ಕೆಲವೆ ದಿನಗಳು ಮಾತ್ರ ಬಾಕಿ ಇದೆ.  ಮಾಲ್ ಗಳಂತು ಭರ್ಜರಿ ತಯಾರಿ ನಡೆಸಿದ್ದು, ಜನ್ರು ಫುಲ್ ಫಿದಾ ಆಗ್ತಿರೋದಂತು ಸತ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News