ಮೋಸ ಮಾಡಿ ಸಂಪಾದಿಸಿದ ಹಣ ಹುಡುಗಿಗಾಗಿ ಖರ್ಚು: ಮಾರ್ಷಲ್ ಕೆಲಸ ಕೊಡಿಸುತ್ತೇನೆಂದು ವಂಚಿಸಿದ್ದವ ಅಂದರ್

ಬಿಬಿಎಂಪಿ ಲೋಗೊವನ್ನ ಗೂಗಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಕಲಿ ನೇಮಕಾತಿ ಆದೇಶ ಪ್ರತಿಯನ್ನ ಉದ್ಯೋಗಾಂಕ್ಷಿಗಳ ವಾಟ್ಸಾಪ್ ಗಳಿಗೆ ಕಳುಹಿಸುತ್ತಿದ್ದ. ಅಸಲಿ ನೇಮಕಾತಿ‌ ಆದೇಶ ಪತ್ರವೆಂದು ಭಾವಿಸಿ ಬಿಬಿಎಂಪಿ ಕಚೇರಿಗೆ ಹೋದಾಗ ಆರೋಪಿಯು ವಂಚಸಿರುವುದು ಗೊತ್ತಾಗಿದೆ.

Written by - VISHWANATH HARIHARA | Edited by - Krishna N K | Last Updated : Oct 11, 2023, 02:05 PM IST
  • ಮಾರ್ಷಲ್‌ ಕೆಲಸ ಕೊಡಿಸುವುದಾಗಿ ಅನೇಕರಿಗೆ ನಕಲಿ ನೇಮಕಾತಿ ಪತ್ರ.
  • ನಕಲಿ ಬಿಬಿಎಂಪಿ ನೌಕರರನನ್ನ ಬಂಧಿಸಿದ ಹಲಸೂರು ಗೇಟ್ ಠಾಣೆ ಪೊಲೀಸ್‌.
  • ನಕಲಿ ನೇಮಕಾತಿ ಪತ್ರ ನೀಡಿ ಹಣ ಪಡೆದು ವಂಚಿಸಿದ್ದ ನಕಲಿ ಬಿಬಿಎಂಪಿ ನೌಕರರ.
ಮೋಸ ಮಾಡಿ ಸಂಪಾದಿಸಿದ ಹಣ ಹುಡುಗಿಗಾಗಿ ಖರ್ಚು: ಮಾರ್ಷಲ್ ಕೆಲಸ ಕೊಡಿಸುತ್ತೇನೆಂದು ವಂಚಿಸಿದ್ದವ ಅಂದರ್ title=

ಬೆಂಗಳೂರು: ಬಿಬಿಎಂಪಿಯಲ್ಲಿ ಮಾರ್ಷಲ್‌ ಕೆಲಸ ಕೊಡಿಸುವುದಾಗಿ ಅನೇಕರಿಗೆ ನಕಲಿ ನೇಮಕಾತಿ ಪತ್ರ ನೀಡಿ ಹಣ ಪಡೆದು ವಂಚಿಸಿದ್ದ ನಕಲಿ ಬಿಬಿಎಂಪಿ ನೌಕರರನನ್ನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಸಂದೀಪ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ಜೆ.ಪಿ.ನಗರದ  ಹರ್ಷ (23) ಎಂಬಾತನನ್ನ ಜೈಲಿಗಟ್ಟಲಾಗಿದೆ.

ಮೂಲತಃ ಹೊಸಕೋಟೆಯ ಲಕ್ಕೊಂಡನಹಳ್ಳಿಯವನದ ಹರ್ಷ ‌ಜೆ.ಪಿ.ನಗರದಲ್ಲಿ ವಾಸವಾಗಿದ್ದ. SSLC ವ್ಯಾಸಂಗ ಮಾಡಿ ಕೊರೊನಾ ಸಮಯದಲ್ಲಿ ಬಿಬಿಎಂಪಿ ಕಚೇರಿಯಲ್ಲಿ ವಾರ್ ರೂಮ್‌ನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿಯಿಂದ ಐಡಿ ಕಾರ್ಡ್ ಮಾಡಿಸಿಕೊಂಡು ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಗೆ ಬೇಡಿಕೆ ಇರುವುದನ್ನು ತಿಳಿದುಕೊಂಡಿದ್ದ. ತಾನು ಬಿಬಿಎಂಪಿ‌ ನೌಕರನಾಗಿದ್ದು ಹಣ‌ ಕೊಟ್ಟರೆ ನೇರ ನೇಮಕಾತಿ ಮಾಡಿಸುವುದಾಗಿ ಆಮಿಷವೊಡ್ಡಿದ್ದ. ಪ್ರತಿಯಾಗಿ ಅವರಿಂದ ಪೋನ್ ಪೇ ಮೂಲಕ 3 ಸಾವಿರ ಹಣ ಪಾವತಿಸಿಕೊಂಡಿದ್ದ.

ಇದನ್ನೂ ಓದಿ: JDS vs Congress: ಡಿಕೆಶಿ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’!

ಇದೇ ರೀತಿ 200 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳಿಂದ 6 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದ.  ಆರೋಪಿ ಹಣ ಪಡೆದುಕೊಂಡ ಬಳಿಕ ಬಿಬಿಎಂಪಿ ಲೋಗೊವನ್ನ ಗೂಗಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಕಲಿ ನೇಮಕಾತಿ ಆದೇಶ ಪ್ರತಿಯನ್ನ ಉದ್ಯೋಗಾಂಕ್ಷಿಗಳ ವಾಟ್ಸಾಪ್ ಗಳಿಗೆ ಕಳುಹಿಸುತ್ತಿದ್ದ. ಅಸಲಿ ನೇಮಕಾತಿ‌ ಆದೇಶ ಪತ್ರವೆಂದು ಭಾವಿಸಿ ಬಿಬಿಎಂಪಿ ಕಚೇರಿಗೆ ಹೋದಾಗ ಆರೋಪಿಯು ವಂಚಸಿರುವುದು ಗೊತ್ತಾಗಿದೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇನ್ನೂ ಮಾರ್ಷಲ್‌  ಕೆಲಸ ಕೊಡಿಸುವುದಾಗಿ ಕೆಲ ವರ್ಷಗಳಿಂದ ಹಣ ಸಂಪಾದನೆ ಮಾಡುತ್ತಿದ್ದ ಈತ ಹಣವನ್ನ ಗರ್ಲ್‌ಫ್ರೆಂಡ್ ಗೆ ಖರ್ಚು ಮಾಡಿದ್ದಾನೆ. ಇದುವರೆಗೂ ಸುಮಾರು 6 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದು ಈ ಬಗ್ಗೆ ಪ್ರಶ್ನಿಸಿದರೆ ಪ್ರಿಯತಮೆಗೆ ನೀಡಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.   ಸದ್ಯ ಆರೋಪಿಯಿಂದ ನಕಲಿ ನೇಮಕಾತಿ‌ಪತ್ರಗಳು, ಪೋನ್ ಫೇ ಮಾಡಿ ಹಣ ಪಡೆದಿರುವ ಬಗ್ಗೆ ಮೊಬೈಲ್ ಸ್ಕ್ರಿನ್ ಶಾಟ್ ಪ್ರತಿಗಳನ್ನ ವಶಕ್ಕೆ‌ ಪಡೆದುಕೊಳ್ಳಲಾಗಿದೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News