8 ಕೋಟಿ ರೂ. ಮೌಲ್ಯದ ಡ್ರಗ್ಸ್ ಡೀಲ್! ಮನೆಯಲ್ಲಿಯೇ ನಶೆ ಲೋಕ ಸೃಷ್ಟಿಸಿದ್ದ ಜೋಡಿ

ಈ ಜೋಡಿ ಕೇರಳ ಮೂಲದ ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರಂತೆ. ಐಷಾರಾಮಿ ಜೀವನ ನಡೆಸಲು ಡ್ರಗ್ಸ್ ಸಪ್ಲೈ ಮಾಡುವುದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

Written by - Zee Kannada News Desk | Last Updated : Mar 9, 2022, 02:35 PM IST
  • ಮನೆಯಲ್ಲಿಯೇ ನಶೆ ಲೋಕ ಸೃಷ್ಟಿಸಿ 8 ಕೋಟಿ ರೂ. ಡ್ರಗ್ಸ್ ಡೀಲ್‌ ಮಾಡಿದ ಖತರ್ನಾಕ್ ಲವರ್ಸ್
  • ಕಾಲೇಜ್‌ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಪ್ರೇಮಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ
  • ಡ್ರಗ್ಸ್ ಡೀಲ್‌ ಪ್ರಕರಣ ಸಂಬಂಧ ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಬಂಧಿಸಿದ ಪೊಲೀಸರು
8 ಕೋಟಿ ರೂ. ಮೌಲ್ಯದ ಡ್ರಗ್ಸ್ ಡೀಲ್! ಮನೆಯಲ್ಲಿಯೇ ನಶೆ ಲೋಕ ಸೃಷ್ಟಿಸಿದ್ದ ಜೋಡಿ title=
8 ಕೋಟಿ ರೂ. ಡ್ರಗ್ಸ್ ಡೀಲ್‌ ಮಾಡಿದ ಖತರ್ನಾಕ್ ಲವರ್ಸ್

ಬೆಂಗಳೂರು: ಈ ಹಿಂದೆ ಸ್ಯಾಂಡಲ್‌ವುಡ್ (Sandalwod) ಡ್ರಗ್ಸ್‍ ಪ್ರಕರಣ ಭಾರೀ ಸದ್ದು ಮಾಡಿತ್ತು. ಚಂದನವನದ ನಟ-ನಟಿಯರಿಗೆ ಮಾದಕವಸ್ತು ಲೋಕದ ನಂಟಿರುವುದು ಬಹಿರಂಗವಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ  ಕೆಲ ನಟಿಯರು ಜೈಲಿಗೂ ಹೋಗಿ ಬಂದಿದ್ದರೂ. ಇದಾದ ನಂತರವೂ ಬೆಂಗಳೂರು ಡ್ರಗ್ಸ್ ವಿಚಾರಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ(Drugs Mafia) ಆಳವಾಗಿ ಬೇರೂರಿದ್ದು, ದಿನೇ ದಿನೇ ಹೊಸ ಹೊಸ ಪ್ರಕಣಗಳು ಬೆಳಕಿಗೆ ಬರುತ್ತಲೇ ಇದೆ.  

ಬೆಂಗಳೂರಿನ ಹುಳಿಮಾವು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್(Hashish Oil), ಗಾಂಜಾ(Ganja)ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಲವರ್ಸ್‍(Lovers Arrested) ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದ್ದು, ಖಾಕಿಪಡೆಯೇ ಬೆಚ್ಚಿಬಿದ್ದಿದೆ.  

8 ಕೋಟಿ ರೂ. ಮೌಲ್ಯದ ಮಾದಕವಸ್ತು ವಶಕ್ಕೆ

ಹುಳಿಮಾವು ಠಾಣೆ ಪೊಲೀಸರು(Hulimavu Police Station) ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾ ವಶಕ್ಕೆ  ಪಡೆದಿದ್ದಾರೆ. 12 ಲೀಟರ್‌ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಬರೋಬ್ಬರಿ 8 ಕೋಟಿ ರೂ. ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ; ನಾಲ್ವರ ಬಂಧನ..!

ಡ್ರಗ್ಸ್ ಡೀಲ್ ಹಿಂದೆ ಲವ್ ಬರ್ಡ್ಸ್!

ಡ್ರಗ್ಸ್ ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಎಂಬುವರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಕೇರಳ ಮೂಲದವರಾಗಿದ್ದು, ಪ್ರೇಮಿಗಳಾಗಿದ್ದರು. ಇವರ ಹಿನ್ನೆಲೆ, ಡ್ರಗ್ಸ್ ಡೀಲ್(Drugs Mafia) ಮಾಡುವ ರೀತಿ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಕಾಲೇಜು ದಿನಗಳಿಂದಲೇ ಡ್ರಗ್ಸ್ ದಾಸರಾಗಿದ್ದರು

ವಿಷ್ಣುಪ್ರಿಯ ಕುಟುಂಬಸ್ಥರು ಕೊಯಮತ್ತೂರುಗೆ ಶಿಫ್ಟ್ ಆಗಿದ್ದರಂತೆ. ವಿಷ್ಣುಪ್ರಿಯ ಅವರ ತಾಯಿ‌ ಬಾಲ್ಯದಲ್ಲಿದ್ದಾಗಲೇ ಸಾವನ್ನಪ್ಪಿದ್ದರಂತೆ, ಹೀಗಾಗಿ ಅವರು ತಂದೆ ಜೊತೆಗೆ ವಾಸವಾಗಿದ್ದರೆಂದು ತಿಳಿದುಬಂದಿದೆ. ಕೊಯಮುತ್ತೂರಿನಲ್ಲಿಯೇ ವಿಷ್ಣುಪ್ರಿಯ ವಿದ್ಯಾಭ್ಯಾಸ ನಡೆಸ್ತಿದ್ದರು. ಪಿಯುಸಿವರೆಗೂ ಕೇರಳದಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಸಿಗಿಲ್ ನಂತರ ಬಿಬಿಎಗೆ ಕೊಯಮುತ್ತೂರು ಕಡೆ ಮುಖ ಮಾಡಿದ್ದ. ವಿಷ್ಣುಪ್ರಿಯ ಮೂಲತಃ ಕೇರಳದವಳಾಗಿದ್ದರಿಂದ ಇಬ್ಬರ ಮಧ್ಯೆ ಹೆಚ್ಚು ಆತ್ಮೀಯತೆ ಬೆಳೆದಿತ್ತು. ಇದೇ ಆತ್ಮೀಯತೆ ಇಬ್ಬರ ಮಧ್ಯೆ ಪ್ರೀತಿಯಾಗಿ ಬದಲಾಗಿತ್ತು. ಕಾಲೇಜು ದಿನಗಳಿಂದಲೇ ಇವರಿಬ್ಬರೂ ಡ್ರಗ್ಸ್ ದಾಸರಾಗಿದ್ದರು. ಹೆಚ್ಚು ಹಣ ಕೊಟ್ಟು ಗಾಂಜಾ‌‌, ಮಾದಕ ವಸ್ತು ಖರೀದಿ ಮಾಡ್ತಿದ್ರು. ಕೆಲಸ ಅರಿಸೋದನ್ನು ಬಿಟ್ಟು ಡ್ರಗ್ಸ್ ಪೆಡ್ಲಿಂಗ್ ಗೆ ಪ್ಲಾನ್ ಮಾಡಿಕೊಂಡ್ರು. ಕೊಯ್ಯಮುತ್ತೂರಿಗಿಂತ ಬೆಂಗಳೂರಲ್ಲಿ ಡ್ರಗ್ಸ್ ಗೆ ಹೆಚ್ಚು ಬೇಡಿಕೆ ಇರೋದನ್ನು ಈ ಜೋಡಿ ತಿಳಿದುಕೊಂಡಿತ್ತು.  

ಮನೆಯನ್ನೇ ನಶಾಲೋಕ ಮಾಡಿದ್ದ ಜೋಡಿ

ಬಂಧಿತ ವಿಷ್ಣು ಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಇಬ್ಬರೂ ಬೆಂಗಳೂರಿನ ಕೊತ್ತನೂರು ದಿನ್ನೆಯ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮಾದಕವಸ್ತು ಸೇವನೆಗೆಂದೇ ತಮ್ಮ ಮನೆಯನ್ನೇ ಕಲರ್ ಫುಲ್ ಲೈಂಟಿಂಗ್ಸ್‍ ಗಳಿಂದ ಸಿಂಗರಿಸಿದ್ದರಂತೆ. ಟ್ಯಾಟೂ ಆರ್ಟಿಸ್ಟ್ ಆಗಿದ್ದ ವಿಷ್ಣುಪ್ರಿಯ ತಮ್ಮ ರೂಂಅನ್ನು ಡಿಸೈನ್ ಮಾಡಿದ್ದರಂತೆ. ಬೆಂಗಳೂರಿನಲ್ಲಿಯೇ ಡ್ರಗ್ಸ್ ಡೀಲ್(Drugs Deal) ಮಾಡುತ್ತಾ ಮೋಜು-ಮಸ್ತಿ ಮಾಡುತ್ತಿದ್ದರಂತೆ.

ಇದನ್ನೂ ಓದಿ: Crime News: 45 ಪ್ರಕರಣಗಳಲ್ಲಿ ಬೇಕಾಗಿದ್ದ ಮುಂಬೈನ ಕುಖ್ಯಾತ ಗ್ಯಾಂಗ್​ಸ್ಟರ್ ಅರೆಸ್ಟ್!

ಮನೆಯಲ್ಲಿಯೇ ಭರ್ಜರಿ ಡ್ರಗ್ಸ್ ಪಾರ್ಟಿ

ಈ ಜೋಡಿ ಪ್ರತಿದಿನವೂ ಮನೆಯಲ್ಲಿಯೇ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರೆಂದು ತಿಳಿದುಬಂದಿದೆ. ಡ್ರಗ್ಸ್(Hashish Oil)ತೆಗೆದುಕೊಂಡು ಕಲರ್ ಲೈಟಿಂಗ್ಸ್ ಹಾಕಿದ್ರೆ ನಶೆ ಏರುತ್ತೆ ಅಂತಾ ತಮ್ಮ ಕೋಣೆಯನ್ನು ಡಿಸೈನ್ ಮಾಡಿಕೊಂಡಿದ್ದರು. ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಸೇವನೆ ಮಾಡೋದು, ರೂಂನಲ್ಲಿ ಲೈಟಿಂಗ್ಸ್ ಹಾಕಿ ಮೋಜು-ಮಸ್ತಿ ಮಾಡಿ ಅದನ್ನು ವಿಡಿಯೋ ಮಾಡುತ್ತಿದ್ದರಂತೆ.   

ಕೇರಳ ಮೂಲದ ವಿದ್ಯಾರ್ಥಿಗಳೇ ಟಾರ್ಗೆಟ್!

ಈ ಜೋಡಿ ಕೇರಳ ಮೂಲದ ವಿದ್ಯಾರ್ಥಿಗಳ(Kerala Student's)ನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರಂತೆ. ಐಷಾರಾಮಿ ಜೀವನ ನಡೆಸಲು ಡ್ರಗ್ಸ್ ಸಪ್ಲೈ ಮಾಡುವುದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಆಂಧ್ರದ ವಿಶಾಖಪಟ್ಟಣಂಗೆ ಬಸ್‌ನಲ್ಲಿ ಹೋಗಿ ಆಶಿಶ್ ಆಯಿಲ್ ತರುತ್ತಿದ್ದರಂತೆ.     ಬಸ್ ನಲ್ಲಿ ಮಾದಕವಸ್ತು ತಂದರೆ ಪೊಲೀಸರಿಗೆ ಗೊತ್ತಾಗುವುದಿಲ್ಲವೆಂದು ಮಾಸ್ಟರ್ ಪ್ಲಾನ್ ಮಾಡಿದ್ದರಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News