ರೈತರು ಸುಪ್ರೀಂ ಕೋರ್ಟ್‌ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ : ಡಿಕೆಶಿಗೆ ಬೊಮ್ಮಾಯಿ ಪ್ರಶ್ನೆ

ನಮ್ಮ ಹಕ್ಕನ್ನು ಅವರಿಗೆ ಬಿಟ್ಟು ಕೊಟ್ಟು, ತಾವು ಮಾಡಿದ ತಪ್ಪಿಗೆ. ರೈತರಿಗೆ ಸುಪ್ರೀಂ ಕೋರ್ಟಿಗೆ ಹೋಗಿ ಅಂತ ಹೇಳುತ್ತಿದ್ದಾರೆ. ರೈತರು ಸುಪ್ರೀಂಕೋರ್ಟಿಗೆ ಹೋಗಬೇಕಾದರೆ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕಿತ್ತು ಇವರು ಯಾಕೆ ಸರಕಾರದಲ್ಲಿ ಅಧಿಕಾರ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Written by - Prashobh Devanahalli | Edited by - Krishna N K | Last Updated : Aug 17, 2023, 05:48 PM IST
  • ನಮ್ಮ ರಾಜ್ಯದ ಡ್ಯಾಮ್ ನಮ್ಮಲಿದೆ, ನಮ್ಮ ಹಕ್ಕನ ಇವರು ಬಿಟ್ಟು ಕೊಡುತ್ತಿದ್ದಾರೆ.
  • ತಾವು ಮಾಡಿದ ತಪ್ಪಿಗೆ. ರೈತರಿಗೆ ಸುಪ್ರೀಂ ಕೋರ್ಟಿಗೆ ಹೋಗಿ ಅಂತ ಹೇಳುತ್ತಿದ್ದಾರೆ.
  • ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.
ರೈತರು ಸುಪ್ರೀಂ ಕೋರ್ಟ್‌ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ : ಡಿಕೆಶಿಗೆ ಬೊಮ್ಮಾಯಿ ಪ್ರಶ್ನೆ title=

ಬೆಂಗಳೂರು: ಕಾವೇರಿ ‌ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂ ಕೊರ್ಟ್‌ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು  ಪ್ರಶ್ನಿಸಿದ್ದಾರೆ. 

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಡಿಸಿಎಂ ಡಿಕೆ‌ ಶಿವಕುಮಾರ್ ಅವರು ಬೀಗದ ಕೈ ನಮ್ಮ ಕಡೆ ಇಲ್ಲ ಅಂತ ಹೇಳಿದ್ದಾರೆ. ನಮ್ಮ ರಾಜ್ಯದ ಡ್ಯಾಮ್ ನಮ್ಮಲಿದೆ, ನಮ್ಮ ಹಕ್ಕನ ಇವರು ಬಿಟ್ಟು ಕೊಡುತ್ತಿದ್ದಾರೆ. ಇದರ ಬಗ್ಗೆ ಅವರಿಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ ನಮ್ಮ ಹಕ್ಕನ್ನು ಅವರಿಗೆ ಬಿಟ್ಟು ಕೊಟ್ಟು, ತಾವು ಮಾಡಿದ ತಪ್ಪಿಗೆ. ರೈತರಿಗೆ ಸುಪ್ರೀಂ ಕೋರ್ಟಿಗೆ ಹೋಗಿ ಅಂತ ಹೇಳುತ್ತಿದ್ದಾರೆ. ರೈತರು ಸುಪ್ರೀಂಕೋರ್ಟಿಗೆ ಹೋಗಬೇಕಾದರೆ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕಿತ್ತು ಇವರು ಯಾಕೆ ಸರಕಾರದಲ್ಲಿ ಅಧಿಕಾರ ಮಾಡಬೇಕು. ನೀವು ರಕ್ಷಣೆ ಮಾಡಲಿ ಅಂತಾನೆ ಜನ ನಿಮ್ಮನ್ನ ಆಯ್ಕೆ ಮಾಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಜನ ಶಾಸಕರನ್ನು ಕೊಟ್ಟಿದ್ದಾರೆ. ಅವರು ರೈತರನ ರಕ್ಷಣೆ ಮಾಡದೇ ಇದ್ದರೆ ನೀವುಗಳು ಯಾಕೆ ಬೇಕು ?  ಇದರಲ್ಲಿ ಏನೋ ರಾಜಕೀಯ ಹಿತಾಸಕ್ತಿ ಇದೆ ಅಂತ ಕಾಣಿಸುತ್ತಿದೆ. ನಾನು ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ. ಅದನ್ನೇ ಹಿತಾಸಕ್ತಿಯನ್ನು ಕಾಪಾಡುವ ರಾಜಕಾರಣ ಅಂದರೆ ನಾವು ರೈತರ ರಕ್ಷಣೆಯನ್ನು  ಮಾಡುತ್ತೇವೆ. ರೈತರ ರಕ್ಷಣೆ ಮಾಡದೆ ಇವರು ನಿಜವಾದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ: ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್..ವಿದ್ಯಾರ್ಥಿಗಳಿಗೆ ಎರೆಡೆರಡು ಮೊಟ್ಟೆ ಭಾಗ್ಯ..!

ಕುರುವೈ ಬೆಳೆಗೆ ಅಗತ್ಯಕ್ಕಿಂತ ಹೆಚ್ಚು ನೀರು : ಕಾವೇರಿ ಜಲಾನಯನದ ವಿವಾದ ಹೊಸದಲ್ಲ ಟ್ರಿಬ್ಯುನಲ್ ಆದೇಶ ಆಗಿದೆ. ಯಾವ ರೈತರು ಎಷ್ಟು ಬೆಳೆ ಬೆಳೆಯಬೇಕು ಅಂತ ನಿರ್ಧಾರ ಆಗಿದೆ. ತಮಿಳುನಾಡು ರೈತರು 32 ಟಿಎಂಸಿ ನೀರು ಬಳಕೆ ಮಾಡಿಕೊಂಡು 1.80 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬೇಕು ಅಂತ ನಿರ್ಧಾರ ಆಗಿದೆ. ಅವರು 60 ಟಿಎಂಸಿ ನೀರು ಬಳಕೆ ಮಾಡಿಕೊಂಡು  4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದಾರೆ. ಅದನ್ನು ನಮ್ಮ ರಾಜ್ಯ ಸರ್ಕಾರ ಪ್ರಶ್ನಿಸಬೇಕಿದೆ. ಇವರು ಪ್ರಶ್ನೆ ಮಾಡುತ್ತಿಲ್ಲ. ನಮ್ಮ ಜಲಾಶಯದ ನೀರನ್ನು ನಮ್ಮ ರೈತರಿಗೆ ಸರಿಯಾದ ಸಮಯದಲ್ಲಿ ಬಿಡಲಿಲ್ಲ. ಈಗ ತಮಿಳು ನಾಡಿನವರು ನೀರು ಕೇಳುತ್ತಿದ್ದಾರೆ‌. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ.  ಮುಖ್ಯಮಂತ್ರಿ ಗಳು ನೀರು ಬಿಡುವುದಿಲ್ಲ ಅಂತ ಹೇಳಿದ್ದಾರೆ. ಆದರೆ, ಡಿಸಿಎಂ ನಾವು ಲೀಗಲ್ ಅಡ್ವೈಸರ್ ಮಾತು ಕೇಳುತ್ತೇವೆ ಅಂತ ಹೇಳುತ್ತಾರೆ. ಸರ್ಕಾರ ಲೀಗಲ್ ಟೀಂಗೆ ಸುಪ್ರೀಂ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡಲು ಹೇಳಬೇಕು. 10 ಟಿಎಂಸಿ ನೀರು ಬೀಡಲು ಮುಂದಾಗಿದ್ದು ಈ ಸರ್ಕಾರ ರಾಜ್ಯದ ರೈತರ ಹಿತ ಬಲಿಕೊಡುತ್ತಿದೆ. ರೈತರ ಹಿತ ಕಾಯಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಇಂಡಿಯಾ ಒಕ್ಕೂಟ ಕಟ್ಟಿಕೊಂಡಿದ್ದು, ಡಿಎಂಕೆ ಸರ್ಕಾರದ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದರು. 

ಯಾರೂ ಬಿಜೆಪಿ ಬಿಡುವುದಿಲ್ಲ : ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಹೋಗುತ್ತಾರೆ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು, ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಕೇಳಿ ಬಂದಿರುವುದರಿಂದ ಅದನ್ನು ಡೈವರ್ಟ್ ಮಾಡಲು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ಥಳಿಯವಾಗಿ ಕೆಲವು ಸಮಸ್ಯೆ ಇರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಹರಿಸಲಾಗುವುದು. ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News