ಚಾಮುಂಡಿ ತಾಯಿಗೆ ಆಷಾಢ ಶುಕ್ರವಾರದ ಮೊದಲ ಪೂಜೆ , ದೇವಳದಲ್ಲಿ ಭಕ್ತರ ದಂಡು

ಇಂದು ಆಷಾಢ ಮಾಸದ ಮೊದಲ ಶುಕ್ರವಾರ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಾಮುಂಡಿ  ತಾಯಿಗೆ  ಆಷಾಢ ಶುಕ್ರವಾರದ ಪೂಜೆಗಳು ಆರಂಭವಾಗಿವೆ. 

Written by - Zee Kannada News Desk | Last Updated : Jul 1, 2022, 09:51 AM IST
  • ಇಂದು ಆಷಾಢ ಮಾಸದ ಮೊದಲ ಶುಕ್ರವಾರ.
  • ಚಾಮುಂಡಿ ತಾಯಿಗೆ ವಿಶೇಷ ಪೂಜೆ
  • ದೇವಾಲಯದಲ್ಲಿ ಭಕ್ತರ ದಂಡು
ಚಾಮುಂಡಿ ತಾಯಿಗೆ ಆಷಾಢ ಶುಕ್ರವಾರದ ಮೊದಲ ಪೂಜೆ , ದೇವಳದಲ್ಲಿ ಭಕ್ತರ ದಂಡು  title=
Chamundeshwari Temple

ಮೈಸೂರು : ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಆಷಾಢಮಾಸದ ಮೊದಲ ಶುಕ್ರವಾರದ ಪೂಜೆಗಳು ನಡೆಯುತ್ತಿವೆ. ಮುಂಜಾನೆಯಿಂದಲೇ ದೇವಿಯ ದರ್ಶನ ಪಡೆಯಲು ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. 

ಇಂದು ಆಷಾಢ ಮಾಸದ ಮೊದಲ ಶುಕ್ರವಾರ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಾಮುಂಡಿ  ತಾಯಿಗೆ  ಆಷಾಢ ಶುಕ್ರವಾರದ ಪೂಜೆಗಳು ಆರಂಭವಾಗಿವೆ. ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಕೂಡಾ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ನಾಡ ಅಧಿದೇವತೆಗೆ ಪ್ರಾತಃಕಾಲದಿಂದಲೇ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ.‌ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ನಾಡದೇವತೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಆಷಾಢ ಶುಕ್ರವಾರದ  ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ಚಾಮುಂಡಿ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿದೆ. 

ಇದನ್ನೂ ಓದಿ : Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಮತ್ತೆ ನಿಂಬೆ ದರ ಹೆಚ್ಚಳ!

ಜಿಲ್ಲಾಡಳಿತ ಹಾಗೂ ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಸಹಯೋಗದಲ್ಲಿ ಬೆಟ್ಟವನ್ನೂ ಹಾಗೂ ದೇವಾಲಯವನ್ನು ಸಿಂಗರಿಸಲಾಗಿದೆ. ಬಗೆ ಬಗೆಯ ಹೂವುಗಳಿಂದ‌ ದೇವಾಲಯವನ್ನು ಅಲಂಕರಿಸಲಾಗಿದೆ. 

ಇನ್ನು ಆಷಾಢಮಾಸದ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಚಾಮುಂಡಿಬೆಟ್ಟಕ್ಕೆ ಭಕ್ತರ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಲಲಿತ ಮಹಲ್ ಹುಲಿ ಪ್ಯಾಟ್‌ ನಲ್ಲಿ ಜಿಲ್ಲಾಡಳಿತದ ವತಿಯಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಟ್ಟದ ತಪ್ಪಲಿನಲ್ಲಿ ಬಿಗಿ ಭದ್ರತೆ  ಕಾಯ್ದುಕೊಳ್ಳಲಾಗಿದೆ. ಮೈಸೂರು ನಗರ ಪೊಲೀಸರು ತಪ್ಪಲಿನಲ್ಲಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಪಾಸ್ ಇದ್ದವರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. 

ಇದನ್ನೂ ಓದಿ : ಚಾಮರಾಜನಗರ: 8 ಕಿಮೀ ಡೋಲಿ ಹೊತ್ತು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಜನರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News